ಭಾನುವಾರ ಹೊರ ಪ್ರವಾಸ ಹೋಗೋಣವೆಂದುಕೊಂಡೆವು. ಉಪ್ಸೋಲಾ ಎನ್ನುವ ಪಟ್ಟಣ ಸ್ಟಾಕ್ ಹೋಂ ನಿಂದ ಐವತ್ತು ಕಿಮಿ ದೂರದಲ್ಲಿದೆ. ಸ್ಟಾಕ್ಹೋಂ ನಿಂದ ಉಪ್ಸೋಲಾಕ್ಕೆ ಟ್ರೇನ್ ಪ್ರಯಾಣ. ಸ್ವೀಡಿಷ್ ದೊರೆಗಳು ಆಳಿದ ಹಳೆಯ ನಗರ. ನಾರ್ಡಿಕ್ ದೇಶಗಳಲ್ಲಿ ಮೊದಲನೇಯ ವಿಶ್ವವಿದ್ಯಾಲಯ ಸ್ಥಾಪಿತವಾಗಿದ್ದು ಈ ಉಪ್ಸೋಲಾದಲ್ಲಿ 1477 ರಲ್ಲಿ.

ಸ್ಟೇಷನ್ ನಿಂದ ಒಂದು ಟ್ರಾಪಿಕಲ್ ಗಾರ್ಡನ್ ನೋಡಲು ಹೊರಟೆವು. ಮಾರ್ಗದಲ್ಲೊಂದು ಕೆನಾಲ್ ( ರಾಜಾ ಕಾಲುವೆ). ನೀರು ಶುಭ್ರವಾಗಿತ್ತು. ಪಕ್ಕದಲ್ಲಿಯೇ ಒಂದು ಸರೋವರ, ಬಾತುಕೋಳಿಗಳಿಂದ ತುಂಬಿದ್ದವು. ಸನಿಹದಲ್ಲಿಯೇ 1830 ರಲ್ಲಿ ಆರಂಭವಾಗಿದ್ದ ಒಂದು ಉದ್ಯಾನವನ ನೋಡಲು ಚೆನ್ನಾಗಿದೆ.

ಈಗದು ಉಪ್ಸೋಲಾ ನಗರಸಭೆಯ ಮೇಲ್ವಿಚಾರಣೆಯಲ್ಲಿದೆ. ಒಂದೇ ಜಾತಿಯ ಮರಗಳಾದರೂ ಬೃಹತ್ ಮರಗಳು. ಕುಳಿತುಕೊಳ್ಳಲು ಅಲ್ಲಲ್ಲಿ ಮರದ ಬೆಂಚುಗಳು. ಇಲ್ಲಿ ಸ್ವೀಡನ್ ನ್ನಿನ ಎಲ್ಲಾ ಕಡೆಯಲ್ಲೂ ಮರದ ಬೆಂಚುಗಳು. ಸಾರ್ವಜನಿಕ ಪ್ರದೇಶದಲ್ಲಿ ಒಂದೇ ಜಾತಿಯ ಮರದ ಬೆಂಚುಗಳು, ಟೇಬಲ್ಲಗಳು. ಈ ರೀತಿಯ ಮರಗಳನ್ನು ವ್ಯವಹಾರಕ್ಕೆಂದು ಬಳಸಲು ಬೆಳೆಸುತ್ತಾರೆ. ಕೆಲವೆಡೆ ಪುಷ್ಪ ರಾಶಿ ನೋಡುವಾಗ ಕಣ್ಣಿಗೆಲ್ಲಾ ತಂಪು. ಮೋಡ ಕವಿದ ವಾತಾವರಣವಿತ್ತು. ೧೯° ಸಿ ಉಷ್ಣಾಂಶ.
ಸ್ವಲ್ಪ ದೂರದಲ್ಲಿಯೇ ಮೆಡಿಕಲ್ ಯೂನಿವರ್ಸಿಟಿ ಮತ್ತು ದೊಡ್ಡ ಆಸ್ಪತ್ರೆಯಿತ್ತು. ಜನಸಂದಣಿಯಿಲ್ಲ. ಪಕ್ಕದ ದೊಡ್ಡ ಬೆಟ್ಟ ಪ್ರದೇಶದಲ್ಲಿಯೇ ಆಸ್ಪತ್ರೆಯ ಹಲವು ವಿಭಾಗಗಳಿದ್ದವು.

ಹಾಗೆಯೇ ಒಂದು ಕಿಮಿ ದೂರದಲ್ಲಿ, ಟ್ರಾಪಿಕಲ್ ಗಾರ್ಡನ್ ಇದೆ. ಅದರ ಪಕ್ಕದಲ್ಲಿ ಯುನಿವರ್ಸಿಟಿಯಿದೆ. ಟ್ರಾಪಿಕಲ್ ಗಾರ್ಡನಿನಲ್ಲಿ ಕೆಲವು ಆಫ್ರಿಕಾ, ಏಷಿಯಾ ದೇಶದ ಮರಗಳನ್ನು ಬೆಳೆಸಿದ್ದರು. ಸಾಮಾನ್ಯವಾಗಿ ಇಲ್ಲಿ ಉಷ್ಣ ಪ್ರದೇಶಗಳು ಮರಗಳು ಬದುಕುವುದು ಕಷ್ಟ. ಆದರೂ ಇವುಗಳನ್ನು ಬೆಳೆಸಿದ್ದಾರೆ, ಪ್ರಾರಂಭಿಕ ಹಂತದಲ್ಲಿವೆ. ತುಳಸಿಯಂತೆ ಪರಿಮಳವಿರುವ ಗಿಡಗಳು ಕಾಣಸಿಗುತ್ತವೆ. ವಿಶೇಷವೆಂದರೆ, ಚಪ್ಪಟೆ ಬೀನ್ಸ್ , ಕ್ಯಾರೆಟ್ ಗಿಡಗಳು, ಹೂವು, ಬುಡದಲ್ಲಿ ಗೆಡ್ಡೆಗಳು ನೋಡಲು ಸಿಕ್ಕವು.
ಇವನ್ನು ನೋಡಿ, 50 ಮೀಟರ್ ಎತ್ತರದಲ್ಲಿರುವ ಒಂದು ಕೋಟೆ ನೋಡಿದೆವು. ಕೋಟೆ ಒಳಗೆ ಪ್ರವೇಶವಿಲ್ಲ. ಅದಕ್ಕೆ ಹೊಂದಿಕೊಂಡ ಒಂದು ಮ್ಯೂಸಿಯಮ್. ಹೆಚ್ಚಿನ ಸಂಗ್ರಹವಿರಲಿಲ್ಲ.
ಅಲ್ಲಿಂದ ಸ್ಟೇಷನ್ ಕಡೆಗೆ ವಾಪಸ್ ಆದೆವು. ದಾರಿಯಲ್ಲಿ ಒಂದು ದೊಡ್ಡ ಪುರಾತನ ಚರ್ಚ್ ಗೆ ಭೇಟಿಕೊಟ್ಟೆವು. ಬಹು ಎತ್ತರದ, ವಿಶಾಲವಾದ ಚರ್ಚ್.

ನಂತರ ಒಂದೆಡೆ ಚಾಕೋಲೇಟ್ ಸವಿಯುತ್ತಾ ಸ್ಟಾಕ್ಹೋಂ ನ ಟ್ರೇನ್ ಹತ್ತಿದೆವು. ಬಹುತೇಕ ನಾಲ್ಕು ಕಿಮಿ ದೂರದ ಕಾಲನಡಿಗೆಯಲ್ಲಿ ಉಪ್ಸೋಲಾ ಪ್ರವಾಸ ಮುಗಿಸಿದ್ದೆವು.
ಪ್ರಕಾಶ್ ಎನ್, ಮಂಗಳೂರು