ಹಕ್ಕಿಗಳು
೧೨.೧೨.೨೦೦೨ ರಲ್ಲಿ ಬರೆದ ಪದ್ಯ ಹಕ್ಕಿಗಳು ಹಾರುತಿವೆ ಹಕ್ಕಿಗಳ ಸಾಲು ಸಾಲು ಬಣ್ಣವದೋ ಹಾಲು ಹಾಲು ಏರುತಿವೆ ಬಾನೆತ್ತರಕೆ, ಹಾರುತಿವೆ ರವಿಯತ್ತಿರಕೆ ಮುಸ್ಸಂಜೆಯ ಹೊಂಬಣ್ಣದ ಕಿರಣಗಳು ಮುತ್ತಿಕ್ಕಿವೆ ಆ ಹಕ್ಕಿಗಳ ಹಿಂಡ ಕಂಡದನು ಕುಣಿದಾಡಿದೆ ಈ ಮನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
harishsaniha
೧೨.೧೨.೨೦೦೨ ರಲ್ಲಿ ಬರೆದ ಪದ್ಯ ಹಕ್ಕಿಗಳು ಹಾರುತಿವೆ ಹಕ್ಕಿಗಳ ಸಾಲು ಸಾಲು ಬಣ್ಣವದೋ ಹಾಲು ಹಾಲು ಏರುತಿವೆ ಬಾನೆತ್ತರಕೆ, ಹಾರುತಿವೆ ರವಿಯತ್ತಿರಕೆ ಮುಸ್ಸಂಜೆಯ ಹೊಂಬಣ್ಣದ ಕಿರಣಗಳು ಮುತ್ತಿಕ್ಕಿವೆ ಆ ಹಕ್ಕಿಗಳ ಹಿಂಡ ಕಂಡದನು ಕುಣಿದಾಡಿದೆ ಈ ಮನ...
ಮುತ್ತಿನ ಸಾಲ ಅವಳು ನನಗೆ ಸಾಲದಷ್ಟು ಮುತ್ತಿನ ಸಾಲವನ್ನು ಕೊಟ್ಟಿದ್ದಾಳೆ ಬಡ್ಡಿಯ ದರ ಸಾಲ ಕೊಡುವ ಎಲ್ಲ ಬ್ಯಾಂಕುಗಳಿಂತ ದುಬಾರಿ ನಿಜವಾಗಿ ನನಗೆ ಅಸಲು ತೀರಿಸಲೂ ಆಗುತ್ತಿಲ್ಲ ಇನ್ನೂ, ಮುತ್ತಿನ ಸಾಲದ ಬಡ್ಡಿಯನ್ನು ಮಾತ್ರ ನಿರಂತರವಾಗಿ ಕಟ್ಟುತ್ತಲ...
ಮಳೆಯ ಹಾಗೆ ನನ್ನ ಕವಿತೆ ಮಳೆಯ ಹಾಗೆಯಾವಾಗ ಬರುವುದೋ ತಿಳಿಯದುಮನಸ್ಸಿನಲ್ಲಿ ಮೂಡಿ ಅಕ್ಷರಗಳಾಗಿಹೊರಬಂದಾಗಹಡೆದ ತಾಯಿಗೆ ಆಗುವಷ್ಟು ಖುಷಿ ನನಗೆ
ಥೋ... ಚಿ ಬರೆಯುವ ಆಸೆ ಬಹಳ,ಬಹಳಷ್ಟು ಸಲಏನೂ ತೋಚುವುದೇ ಇಲ್ಲತೋಚಿದ್ದನ್ನೆಲ್ಲಾ ಬರೆಯಲುಆಗುವುದೂ ಇಲ್ಲಬರೆಯಬಹುದು, ಆಗ ನಿಮ್ಮ ಪ್ರತಿಕ್ರಿಯೆಥೋ... ಚಿ
ಚಿತ್ರ - ವಿ(ಚಿತ್ರ) ಚಿತ್ರ ನೋಡಿ ಅದರ ಅಂತರಾಳ ಏನೆಂದು ಹೇಳುವುದು ಕಷ್ಟಹಾಗೆಯೇಬರಹ ನೋಡಿ ಬರಹಗಾರನ ಚಿತ್ರ ಹೇಗಿರಬಹುದೆಂದು ಊಹಿಸುವುದೂ ಕಷ್ಟಚೆ... ಎಂಥಹ ವಿ(ಚಿತ್ರ)
ಖುಷಿ - ಋಷಿನಾನು ಕಾಯುತ್ತಿದ್ದೆ ಅವಳಿಗಾಗಿಬಂದೇ ಬಿಟ್ಟಳುನನಗೋ ಬಹಳ ಖುಷಿಆದರೆ ಸ್ವಲ್ಪ ಹೊತ್ತಿನ ನಂತರಗೊತ್ತಾಯಿತು, ಅವಳು ಬಂದದ್ದು ನನಗಾಗಿ ಅಲ್ಲವೆಂದುಅದಕ್ಕೆ ನಾನೀಗ ಋಷಿ
ಮಧು(ವೆ) ಮದುವೆಗೆ ಮೊದಲು "ಯಾಕೋ ಇಷ್ಟು ವರ್ಷಗಳಾದರೂಮದುವೆಯಾಗಲಿಲ್ಲವೆಂಬ ತಳಮಳ'ಮದುವೆಯಾದ ಮೇಲೆ"ಯಾಕದ್ರೂ ಮದುವೆಯಾದೆನಲ್ಲವೆಂಬ ಕಳವಳ" (ತಮಾಷೆಗಾಗಿ)
ಹಾಗೆ ಸುಮ್ಮನೆ ಒಮ್ಮೊಮ್ಮೆ ಬರೆಯುತ್ತೇನೆ ನಿರರ್ಗಳವಾಗಿಬಹು ದುಖಃವಾದಾಗ ಕಣ್ಣೀರು ಹರಿದಂತೆಬಹಳಷ್ಟು ಸಲ ಬರೆಯುವುದಿಲ್ಲ ಬಹು ಸಂತೋಷವಾದಾಗ;ಇರುತ್ತೇನೆ ಹಾಗೆ ಸುಮ್ಮನೆ
ಮೊದಲು - ಈಗಮೊದಲು ನಾನೊಬ್ಬನೇ ಇದ್ದೆಅವಳಿರಲಿಲ್ಲ;ಈಗ ಅವಳೂ ಇದ್ದಾಳೆಆದರೆ ಮೊದಲ ಆ ನಾನಿಲ್ಲ
ತಾರೆ ನನಗೂ ತಾರೆಯಾಗಬೇಕೆಂಬ ಮಹದಾಸೆ,ಖಂಡಿತ ಆಗುತ್ತೇನೆ ಬಹುದೊಡ್ಡ ತಾರೆಸತ್ತಮೇಲೆ, ನೀಲಾಕಾಶದಲ್ಲಿ ಪಳಪಳನೆಹೊಳೆಯುತ್ತೇನೆ ಆ ಮಿನುಗುತಾರೆಯ ತೆರದಿ
ಮಾತು ಅವಳು ಬಹಳ ಮಾತನಾಡುತ್ತಾಳೆ ವಾಚಾಳಿ, ಮಾತು ಅವಳ ಚಾಳಿನಾನು ಹೆಚ್ಚು - ಕಡಿಮೆ ಮಾತನಾಡುವುದೇ ಇಲ್ಲ ಇದು ನನ್ನ ಚಾಳಿ
ಸುಲಭ-ಕಷ್ಟಚಿತ್ರ ತೆಗೆಯುವುದು ಬಹು ಸುಲಭವಿ(ಚಿತ್ರ) ತೆಗೆಯುವುದು ಕಷ್ಟಬರೆಯುವುದು ಬಹು ಸುಲಭಚೆನ್ನಾಗಿ ಬರೆಯುವುದು ಕಷ್ಟಮಲಗುವುದು ಬಹು ಸುಲಭಏಳುವುದು ನಾ ಹೇಳಬೇಕಿಲ್ಲ ಪ್ರೀತಿಸುವುದು ಬಹು ಸುಲಭನಿರೀಕ್ಷಿಸಿದೇ ಪ್ರಿಟಿಸುವುದು... ಒಮ್ಮೆ ಪ್ರಯತ...