ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / kavinagaraj
k

kavinagaraj

೬೯೩ ಲೇಖನಗಳು ೩,೧೫,೮೪೮ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮೂಢ ಉವಾಚ - 354

ಮೇ ೦೧ ಬ್ಲಾಗ್ ೩೯ ವೀಕ್ಷಣೆ

ತಿಳಿದಿರದ ಹಾದಿಯಲಿ ಸಾಗಿಹುದು ಬಂಡಿ ಹಿಂದೆನಿತು ಬಂಡಿಗಳೊ ಲೆಕ್ಕವಿಟ್ಟವರ್ಯಾರು | ಪಯಣವದು ಮುಗಿಯದಿರೆ ಮುಂದೆನಿತೊ ಬಂಡಿಗಳು ಒಳ್ಳೆಯ ಹಾದಿಯಲಿ ಸಾಗು ನೀ ಮೂಢ ||

ಆದರ್ಶ ಪುರೋಹಿತರಾಗೋಣ!

ಏಪ್ರಿಲ್ ೩೦ ಲೇಖನ ೨೦೫ ವೀಕ್ಷಣೆ

ಹೀಗೆ ಹೇಳಿದಾಕ್ಷಣ ಹುಬ್ಬೇರಿಸುತ್ತೀರಿ ಎಂಬುದು ಗೊತ್ತು. ಏಕೆಂದರೆ ಪುರೋಹಿತ ಎಂದಾಕ್ಷಣ ಸಾಮಾನ್ಯವಾಗಿ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ಪೂಜೆ-ಪುನಸ್ಕಾರಗಳನ್ನು ಮಾಡುವ ಒಬ್ಬ ಅರ್ಚಕನದೇ ಆಗಿರುತ್ತದೆ. ಮತ್ತೊಂದು ಕಾರಣವೂ ಇದೆ. ಬುದ್ಧಿಜೀವ...

ಮೂಢ ಉವಾಚ - 353

ಏಪ್ರಿಲ್ ೩೦ ಬ್ಲಾಗ್ ೬೫ ವೀಕ್ಷಣೆ

ಎಲ್ಲಿಂದ ಹೊರಟಿಹುದೊ ತಲುಪುವುದು ಎಲ್ಲಿಗೋ ಅನವರತ ಸಾಗಿರುವ ಗೊತ್ತಿರದ ಪಯಣ | ನಿಲ್ಲದೀ ಪಯಣಕೆ ಬಂಡಿಗಳು ಹಲವು ಬಂಡವಾಳಕೆ ತಕ್ಕ ಬಂಡಿಯಿದೆ ಮೂಢ ||

ಉತ್ತಮ ಸಂಬಂಧಕ್ಕೆ ಬೇಕು ಕ್ಷಮಿಸುವ ಗುಣ

ಏಪ್ರಿಲ್ ೨೯ ಲೇಖನ ೧೩೦ ವೀಕ್ಷಣೆ

ಹಿರಿಯರೊಬ್ಬರು ನಿಧನರಾಗುವ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು: 'ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ'. ಸಂಬಂಧಪಟ್ಟವರು, ಪ...

ಮೂಢ ಉವಾಚ - 352

ಏಪ್ರಿಲ್ ೨೮ ಬ್ಲಾಗ್ ೬೯ ವೀಕ್ಷಣೆ

ನಾವು ಹೆಣೆಯುವ ಕಥೆಗೆ ನಾವೆ ನಾಯಕರು ನಮಗಿಂತ ಉತ್ತಮರು ಬೇರಾರು ಇಹರು | ಹೊಗಳಿಕೊಳ್ಳುವ ರೋಗಕೆಲ್ಲಿಹುದು ಮದ್ದು ನಗುವವರ ಎದುರಿನಲಿ ಬೀಳದಿರು ಮೂಢ || -ಕ.ವೆಂ.ನಾ.

ಸತ್ಸಂಗದ ಸತ್ಯ

ಏಪ್ರಿಲ್ ೨೬ ಲೇಖನ ೯೦ ವೀಕ್ಷಣೆ

"ನೀವು ಸತ್ಸಂಗಕ್ಕೆ ಏಕೆ ಹೋಗುತ್ತೀರಿ?" - ಸತ್ಸಂಗಕ್ಕೆ ಹೋಗುವ ಕೆಲವರನ್ನು ವಿಚಾರಿಸಿದಾಗ ಅವರಿಂದ ಬಂದ ಉತ್ತರಗಳಿವು: 'ಸತ್ಸಂಗಕ್ಕೆ ಹೋಗುವುದರಿಂದ ನೆಮ್ಮದಿ ಸಿಗುತ್ತದೆ.' 'ಮನಸ್ಸು ಹಗುರವಾಗುತ್ತದೆ.' 'ಮನೆ, ಕಛೇರಿಗಳ ಜಂಜಾಟದಿಂದ ರೋಸಿದ ಮನಸ್...

ಮೂಢ ಉವಾಚ - 351

ಏಪ್ರಿಲ್ ೨೫ ಬ್ಲಾಗ್ ೪೫ ವೀಕ್ಷಣೆ

ಮುಂದೊಮ್ಮೆ ಒಳಿತ ಕಂಡೆ ಕಾಣವೆವೆಂದು ದುಗುಡ ದುಮ್ಮಾನಗಳ ಸಹಿಸಿಹರು ಇಂದು | ಮೇಲೇರುವಾ ಆಸೆ ಜೀವಿಯ ಗುಣವಹುದು ಆಸೆಯಲೆ ಬದುಕಿಹುದು ಗೊತ್ತಿಹುದೆ ಮೂಢ||

ಮೂಢ ಉವಾಚ - 350

ಏಪ್ರಿಲ್ ೨೪ ಬ್ಲಾಗ್ ೫೬ ವೀಕ್ಷಣೆ

ಸಕಲರನು ಪಾಲಿಪುದು ಪೊರೆಯುವುದೆ ಧರ್ಮ ಜಗದಗಲ ಜಗದುದ್ದ ಭೇದವೆಣಿಸದ ಮರ್ಮ | ಕೈಹಿಡಿದು ಮೇಲೆತ್ತಿ ನಿಲಿಸುವುದೆ ಧರ್ಮ ಇಹಪರಕೆ ಸಾಧನವು ಕರ್ಮವೋ ಮೂಢ ||

ನಿಂದಕರಿಗೆ ನಮಸ್ಕಾರ!

ಏಪ್ರಿಲ್ ೨೩ ಲೇಖನ ೬೦ ವೀಕ್ಷಣೆ

ದೂರುವವರು, ದೂಷಿಸುವವರು ಇರುವ ಕಾರಣದಿಂದಲೇ ಜನರು ತಮ್ಮ ನಡವಳಿಕೆಯ ಬಗ್ಗೆ ಎಚ್ಚರದಿಂದಿರುತ್ತಾರೆ. ಪಕ್ಷಿಗಳಿಗೆ ಅಪಾಯವಿರದಿರುತ್ತಿದ್ದರೆ ಅವು ನಿರಾತಂಕವಾಗಿ ಓಡಾಡಿಕೊಂಡಿದ್ದು ಹಾರುವುದನ್ನೇ ಮರೆತುಬಿಡುತ್ತಿದ್ದವಲ್ಲವೇ? ಅದೇ ರೀತಿ ನಿಂದಕರಿಂದಾ...

ಮೂಢ ಉವಾಚ - 349

ಏಪ್ರಿಲ್ ೨೨ ಕವನ ೩೮೩ ವೀಕ್ಷಣೆ

ನಂಬಿಕೆಯ ಮಿತ್ರರಲಿ ಮತ್ಸರವು ಒಳನುಸುಳೆ ಗೆಳೆತನವ ಕೊಳೆಸುವ ಅರ್ಬುದವು ಕಾಡುವುದು| ಚಣಚಣಕೆ ನೋವಿನಲಿ ನರಳುವ ಪಾಡೇಕೆ ಚಿಗುರಿನಲೆ ಚಿವುಟಿಬಿಡು ಮಚ್ಚರವ ಮೂಢ|| -ಕ.ವೆಂ.ನಾ.

ಶ್ರೀಮತಿ ಎಂ.ಎನ್.ಚಂದ್ರಲೇಖ ಹೆಚ್.ಎಸ್.ಸುಬ್ರಹ್ಮಣ್ಯ ಚಾರಿಟಬಲ್ ಟ್ರಸ್ಟ್

ಏಪ್ರಿಲ್ ೨೨ ಲೇಖನ ೭೦ ವೀಕ್ಷಣೆ

ಮಿತ್ರ ಸುಬ್ರಹ್ಮಣ್ಯ ನಿವೃತ್ತ ಪ್ರೌಢಶಾಲಾ ಶಿಕ್ಷಕರು. ನನಗೆ ಬಾಲ್ಯಕಾಲದಿಂದಲೂ ಪರಿಚಿತ ಮತ್ತು ಬಂಧು. ಕಳೆದ ವರ್ಷ ಅವರ ಪತ್ನಿ ಶ್ರೀಮತಿ ಚಂದ್ರಲೇಖಾ ವಿಧಿವಶರಾದರು. ಚಂದ್ರಲೇಖಾ ಸುಬ್ರಹ್ಮಣ್ಯರು ಬಾಲ್ಯದ ಒಡನಾಡಿಗಳು, ಸಂಬಂಧಿಗಳು. ಆ ಸಂಬಂಧ ಮುಂ...

ಮೂಢ ಉವಾಚ - 348

ಏಪ್ರಿಲ್ ೨೨ ಕವನ ೩೭೯ ವೀಕ್ಷಣೆ

ನಂಬಿದರೆ ಸತಿ-ಪತಿಯು ನಂಬಿರಲು ಸುತೆ-ಸುತರು ಬಂಧು-ಮಿತ್ರರ ಬಳಗ ನಂಬಿದರೆ ಮಾತ್ರ| ಬಾಳಿನಾ ಪಯಣದಲಿ ನಂಬಿಕೆಯೆ ಆಸರೆಯು ನಂಬಿಕೆಗೆ ನೆರಳಾಗಿ ಬಾಳು ನೀ ಮೂಢ|| -ಕ.ವೆಂ.ನಾ.