ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಂಪದ ನಿರ್ವಹಣೆ ತಂಡ
ಸ

ಸಂಪದ ನಿರ್ವಹಣೆ ತಂಡ

ನಿರ್ವಹಣೆ

೧೪೪ ಲೇಖನಗಳು ೪,೭೨,೭೫೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹೊಸತು: ಸಂಪದದಲ್ಲಿ ಮಾಡರೇಶನ್ - ಹೇಗೆ?

ಜೂನ್ ೦೪ ಪುಟ ೬೫ ವೀಕ್ಷಣೆ

ಎಲ್ಲ ಓದುಗರ ಗಮನಕ್ಕೆ, ಕಳೆದ ಕೆಲವು ದಿನಗಳಿಂದ ಸಂಪದದ ಪುಟಗಳಲ್ಲಿ ನೀವು ಗಮನಿಸಿರುವಂತೆ ಹೊಸತೊಂದು ಫೀಚರ್ ಸೇರ್ಪಡೆಯಾಗಿದೆ: ಪುಟಗಳಲ್ಲಿ: "ನಿರ್ವಾಹಕರ ಗಮನಕ್ಕೆ ತನ್ನಿ" ಪ್ರತಿಕ್ರಿಯೆಗಳಲ್ಲಿ: "ಅನುಚಿತ ಪ್ರತಿಕ್ರಿಯೆ? ಇಲ್ಲಿ ಕ್ಲಿಕ್ ಮಾಡಿ"...

ಕಗ್ಗ-೩೧

ಏಪ್ರಿಲ್ ೨೭ ಉಲ್ಲೇಖಗಳು ೧,೪೪೬ ವೀಕ್ಷಣೆ

ಹೊಸತನವೆ ಬಾಳು; ಹಳಸಿಕೆಯಲ್ಲ ಸಾವು ಬಿಡು|ರಸವು ನವನವತೆಯಿಂದನುದಿನವು ಹೊಮ್ಮಿ||ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ|ಪಸರುತಿರೆ ಬಾಳ್ ಚೆಲುವು-ಮಂಕುತಿಮ್ಮ||

ಕಗ್ಗ-೩೦

ಏಪ್ರಿಲ್ ೨೭ ಉಲ್ಲೇಖಗಳು ೧,೦೮೫ ವೀಕ್ಷಣೆ

ಮೆರೆಯುವುವು ನೂರಾರು ಮೈಮೆಗಳು ಸೃಷ್ಟಿಯಲಿ| 30ಧರಣಿಯವು, ಗಗನದವು, ಮನುಜಯತ್ನದವು||ಪಿರಿದೆಂಬೆನವುಗಳೊಳು ಧರುಮವರಿತವನೊಲುಮೆ|ಅರಿವುಳ್ಳೊಲುಮೆ ಪಿರಿದು-ಮಂಕುತಿಮ್ಮ||

ಕಗ್ಗ-೨೯

ಏಪ್ರಿಲ್ ೨೭ ಉಲ್ಲೇಖಗಳು ೧,೧೭೪ ವೀಕ್ಷಣೆ

ಚೆಲುವುನಗುಗಳ ಕಂಡವನ ಕಣ್ಣರಳುವುದು|ಅಳುವುನೋವುಗಳ ಕಂಡೊದ್ದೆಯಾಗುವುದು||ಇಳೆಯ ದನಿಗವನೆದೆಯೊಳೊಪ್ಪು ಮರುದನಿಯಹುದು|ಶಿಲೆಯಲ್ಲ ಯೋಗಿಯೆದೆ-ಮಂಕುತಿಮ್ಮ||

ಕಗ್ಗ-೨೭

ಏಪ್ರಿಲ್ ೨೭ ಉಲ್ಲೇಖಗಳು ೧,೧೪೫ ವೀಕ್ಷಣೆ

ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ| ಹಿತವಿರಲಿ ವಚನದಲಿ, ಋತವ ಬಿಡದಿರಲಿ||ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ|ಅತಿ ಬೇಡವೆಲ್ಲಿಯುಂ-ಮಂಕುತಿಮ್ಮ ||

ಕಗ್ಗ-೨೬

ಏಪ್ರಿಲ್ ೨೭ ಉಲ್ಲೇಖಗಳು ೧,೦೧೯ ವೀಕ್ಷಣೆ

ಕಡಲ್ಗಳೊಂದಾದೊಡಂ, ಪೊಡವಿ ಹಬೆಯಾದೊಡಂ|ಬಿಡದಿರೊಳ ನೆಮ್ಮದಿಯ, ಬಿಡು ಗಾಬರಿಕೆಯ||ಕಡಲ ನೆರೆ ತಗ್ಗುವುದು, ಪೊಡವಿ ಧೂಳಿಳಿಯುವುದು|ಗಡುವಿರುವುದೆಲ್ಲಕಂ- ಮಂಕುತಿಮ್ಮ ||

ಕಗ್ಗ-೨೫

ಏಪ್ರಿಲ್ ೨೭ ಉಲ್ಲೇಖಗಳು ೧,೦೬೪ ವೀಕ್ಷಣೆ

ನಲಿಸುವೊಲಿಸುವ, ಕೆಣಕಿ ಕಾಡಿಸುವ, ಮುಳಿಯಿಸುವ| ಕೆಳೆ ನಂಟು ಹಗೆ ಕಲಹ ಕುಹಕದೋಲೆಗಳು||ಹಲಬರಿಗೆ ಹಂಚಿ ಬಾರೆಂದು ವಿಧಿ ನೇಮಿಸಿಹ|ಇಳೆಯಂಚೆಯಾಳು ನೀಂ - ಮಂಕುತಿಮ್ಮ ||

ಕಗ್ಗ-೨೪

ಏಪ್ರಿಲ್ ೨೭ ಉಲ್ಲೇಖಗಳು ೧,೦೯೬ ವೀಕ್ಷಣೆ

ಓಲೆಗಾರನಿಗೇಕೆ ಬರೆದ ಸುದ್ದಿಯ ಚಿಂತೆ ? |ಓಲೆಗಳನವರವರಿಗೈದಿಸಿದರೆ ಸಾಕು||ಸಾಲಗಳೊ, ಶೂಲಗಳೊ, ನೋವುಗಳೊ, ನಗುವುಗಳೊ|ಕಾಲೋಟವವನೂಟ- ಮಂಕುತಿಮ್ಮ ||

ಕಗ್ಗ-೨೩

ಏಪ್ರಿಲ್ ೨೭ ಉಲ್ಲೇಖಗಳು ೧,೧೬೭ ವೀಕ್ಷಣೆ

ನಗು ಮನದಿ ಗೋಗರ ವಿಕಾರಂಗಳನು ನೋಡಿ |ಬಿಗಿ ತುಟಿಯ ದುಡಿವಂದು ನೋವಪಡುವಂದು ||ಪೊಗು, ವಿಶ್ವಜೀವನದ ಜೀವಾಂತರಂಗದಲಿ|ನಗುನಗುತ ಬಾಳ್, ತೆರಳು - ಮಂಕುತಿಮ್ಮ||

ಕಗ್ಗ-೨೨

ಏಪ್ರಿಲ್ ೨೭ ಉಲ್ಲೇಖಗಳು ೯೬೯ ವೀಕ್ಷಣೆ

ಎಡರು ತೊಡರೆನಲೇಕೆ? ಬಿಡಿಸು ಮತಿಗಾದನಿತ |ದುಡಿ ಕೈಯಿನಾದನಿತು; ಪಡು ಬಂದ ಪಾಡು||ಬಿಡು ಮಿಕ್ಕುದನು ವಿಧಿಗೆ; ಬಿಡದಿರುಪಶಾಂತಿಯನು|ಬಿಡುಗಡೆಗೆ ದಾರಿಯಿದು - ಮಂಕುತಿಮ್ಮ ||

ಕಗ್ಗ-೨೧

ಏಪ್ರಿಲ್ ೨೭ ಉಲ್ಲೇಖಗಳು ೯೮೧ ವೀಕ್ಷಣೆ

ಹಕ್ಕಿ ಮುನ್ನರಿಯುವುದೆ ತನ್ನ ಪಯಣದ ತೆರನ? |ಇಕ್ಕುವರದಾರದನು ಕರೆದು ತಿರುಪೆಯನು? ||ರೆಕ್ಕೆ ಪೋದಂತಲೆದು, ಸಿಕ್ಕಿದುದನುಣ್ಣುವುದು |ತಕ್ಕುದಾ ವ್ರತ ನಿನಗೆ -ಮಂಕುತಿಮ್ಮ ||

ಕಗ್ಗ-೨೦

ಏಪ್ರಿಲ್ ೨೭ ಉಲ್ಲೇಖಗಳು ೫೯೧ ವೀಕ್ಷಣೆ

ಏನೊ ಕಣ್ಣನು ಪಿಡಿವುದೇನೊ ದಿಗಿಲಾಗಿಪುದು| ಏನನೋ ನೆನೆದು ಸರ್ರೆಂದು ಹಾರುವುದು||ಬಾನೊಳಾಡುವ ಹಕ್ಕಿಗಿದುವೆ ನಿತ್ಯಾನುಭವ|ನೀನದನು ಮೀರಿಹೆಯೇ? ಮಂಕುತಿಮ್ಮ ||