ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಂಪದ ನಿರ್ವಹಣೆ ತಂಡ
ಸ

ಸಂಪದ ನಿರ್ವಹಣೆ ತಂಡ

ನಿರ್ವಹಣೆ

೧೪೪ ಲೇಖನಗಳು ೪,೭೨,೭೫೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕಗ್ಗ-೧೯

ಏಪ್ರಿಲ್ ೨೭ ಉಲ್ಲೇಖಗಳು ೮೯೦ ವೀಕ್ಷಣೆ

ಆವಕಡೆ ಹಾರುವುದೊ ! ಆವ ಕಡೆ ತಿರುಗುವೊದೊ |ಆವಾಗಳಾವಕಡೆಗೆರಗುವುದೊ ಹಕ್ಕಿ||ನಾವುಮಂತೆಯೆ ಸೃಷ್ಟಿಕೃತಿಮದ ಕೈಗೊಂಬೆ|ಜೀವನಮಾರ್ಗವನೂಹ್ಯ- ಮಂಕುತಿಮ್ಮ||

ಕಗ್ಗ-೧೮

ಏಪ್ರಿಲ್ ೨೭ ಉಲ್ಲೇಖಗಳು ೭೫೯ ವೀಕ್ಷಣೆ

ಮಾವುಸಸಿಯನು ನೆಟ್ಟು ಬೇವುಣಲು ಸಿದ್ಧನಿರು? |ಭೂವಿಷಯದಿಂದ ರಸ ಮಾರ್ಪಡುವುದುಂಟು||ಆ ವಿವರ ನಿನಗೇಕೆ? ತೋಟದೊಡೆಯನಿಗಿರಲಿ|ಸೇವಕನು ನೀನಲ್ತೆ? -ಮಂಕುತಿಮ್ಮ ||

ಕಗ್ಗ-೧೭

ಏಪ್ರಿಲ್ ೨೭ ಉಲ್ಲೇಖಗಳು ೬೦೪ ವೀಕ್ಷಣೆ

ಸೈನಿಕನು ನೀನು, ಸೇನಾಧಿಪತಿಯೆಲ್ಲಿಹನೋ! | ೭೩೪ 17ಆಣತಿಯ ಕಳುಹುತಿಹನದನು ನೀನರಿತು ||ಜಾಣಿನಧಟಿಂ ಪೋರು ; ಸೋಲುಗೆಲವವನೆಣಿಕೆ |ಕಾಣಿಸದನಾಳ್ಕೆಯದು- ಮಂಕುತಿಮ್ಮ ||

ಕಗ್ಗ-೧೬

ಏಪ್ರಿಲ್ ೨೧ ಉಲ್ಲೇಖಗಳು ೭೪೭ ವೀಕ್ಷಣೆ

ನಾಯಕನಿಗಿರಲಿ ರಣವಿಜಯ ಪರಿಭವ ಗಣನೆ|ಆಯವದರಿಂ ಭಟನ ಸತ್ತ್ವಶಿಕ್ಷಣಕೆ||ಸ್ವೀಯ ಸತ್ತ್ವವಿಕಾಸ ನಿಜಶಕ್ತಿಯಭ್ಯಾಸ|ಶ್ರೇಯಸಿಗೆ ಸೋಪಾನ-ಮಂಕುತಿಮ್ಮ||

ಕಗ್ಗ-೧೫

ಏಪ್ರಿಲ್ ೨೧ ಉಲ್ಲೇಖಗಳು ೬೪೬ ವೀಕ್ಷಣೆ

ಕಾಯಕವ ಚರಿಸುತ್ತ, ಮಾನಸವ ಸಯ್ತಿಡುತ| 15ಆಯಸಂಬಡಿಸದವೊಲಂತರಾತ್ಮನನು||ಮಾಯೆಯೊಡನಾಡುತ್ತಾ, ಬೊಮ್ಮನನು ಭಜಿಸುತ್ತ|ಆಯುವನು ಸಾಗಿಸಲೊ- ಮಂಕುತಿಮ್ಮ||

ಕಗ್ಗ- ೧೪

ಏಪ್ರಿಲ್ ೨೧ ಉಲ್ಲೇಖಗಳು ೯೦೯ ವೀಕ್ಷಣೆ

ಎಂದಿಗಾನುಂ ನಿನ್ನ ಪೂರ್ವಋಣಗಳ ಲೆಕ್ಕ|ನೊಂದಬೇಕೆಂದಿರ್ದೊಡಿಂಗೆ ಮೊದಲನಿಡು||ಅಂದಿಸಿಕೊ ಹೆರರೆನಿಪರನು ಹೃದಯವಿಸ್ತರದೆ|ಹೊಂದು ವಿಶ್ವಾತ್ಮತೆಯ-ಮಂಕುತಿಮ್ಮ||

ಕಗ್ಗ -೧೩

ಏಪ್ರಿಲ್ ೨೧ ಉಲ್ಲೇಖಗಳು ೭೨೯ ವೀಕ್ಷಣೆ

ತನಗೆ ಬಾರದ ಲಾಭ ತನಯಂಗೆ ಬಂದಾಗ|ಜನಕನ್ ಅದು ತನದೆಂದು ಸಂತಸಿಪ ತೆರದಿ||ಜನದೊಳಾರ್ಗಾವ ಸೊಗವಾದೊಡಂ ತನ್ನದೆನ್ನು|ತನುಭವಿಪನೋ ಜ್ಞಾನಿ- ಮಂಕುತಿಮ್ಮ||

ಕಗ್ಗ-೧೨

ಏಪ್ರಿಲ್ ೨೧ ಉಲ್ಲೇಖಗಳು ೭೫೨ ವೀಕ್ಷಣೆ

ತನ್ನ ಮನದಾಟಗಳ ತಾನೆ ನೋಡುತ ನಗುವ|ತನ್ನೊಳಗೆ ತಾನಿರ್ವರಾದವೊಲು ಬಾಳ್ವ||ಚಿನ್ಮಾತ್ರವನು ಬೇರೆ ಬಗೆದು ಜಾನಿಪ ಚತುರ|ಧನ್ಯತೆಯ ಕಂಡವನು -ಮಂಕುತಿಮ್ಮ||

ಕಗ್ಗ-೧೧

ಏಪ್ರಿಲ್ ೨೧ ಉಲ್ಲೇಖಗಳು ೭೭೦ ವೀಕ್ಷಣೆ

ಜೀವನವದೊಂದು ಕಲೆ; ಕಲೆಯ ಕಲಿಸುವುದೆಂತು? |ಸಾವಿರದ ನಿಯಮ ಯುಕ್ತಿಗಳನೊರೆದೊಡೆಯುಂ||ಆವುದೋ ಕುಶಲಯದೊಂದಿರದೆ ಜಯವಿರದು|ಆ ವಿವರ ನಿನ್ನೊಳಗೆ- ಮಂಕುತಿಮ್ಮ||

ಕಗ್ಗ-೧೦

ಏಪ್ರಿಲ್ ೨೧ ಉಲ್ಲೇಖಗಳು ೬೭೮ ವೀಕ್ಷಣೆ

ತಲೆ ಕೊಡವ ತಳೆದಿರಲು, ಕೈ ಕತ್ತಿ ಪಿಡಿದಿರಲು|ಬಳುಕ ಹಗ್ಗದ ಮೇಲೆ ತಾನಡಿಯನಿಡುತ||ಕೆಲ ಬಲಕೆ ಬೀಳದೆ ಮುನ್ನಡೆವ ಡೊಂಬನುಪಾಯ|ಕಲೆಯೆ ಜೀವನಯೋಗ-ಮಂಕುತಿಮ್ಮ||

ಕಗ್ಗ-೯

ಏಪ್ರಿಲ್ ೨೧ ಉಲ್ಲೇಖಗಳು ೫೯೭ ವೀಕ್ಷಣೆ

ಬಹುವಿದ್ಯೆ ಬಹುತರ್ಕ ಬಹುನೇಮ ಬೇಕಿಲ್ಲ|ವಹಿಸೆ ಜೀವನಭರವನದು ಹಗುರೆನಿಪವೊಲ್||ಸಹನೆ ಸಮರಸಭಾವವಂತ: ಪರೀಕ್ಷೆಗಳು|ವಿಹಿತವಾತ್ಮದ ಹಿತಕೆ- ಮಂಕುತಿಮ್ಮ||

ಕಗ್ಗ-೮

ಏಪ್ರಿಲ್ ೨೧ ಉಲ್ಲೇಖಗಳು ೮೨೧ ವೀಕ್ಷಣೆ

ಎಲ್ಲ ನಾಶನವೆಲ್ಲ ಕಾಲವಶವಾದೊಡಂ| ಕ್ಷುಲಕನು ನರನಾದೊಡಂ ಕಾಲನಿದಿರೊಳ್||ಉಲ್ಲಾಸವೇ ಧರ್ಮ; ಕೊಲ್ಲಿಪನೆ ಬೆಳೆಯಿಪನು|ಹುಲ್ಲೊಣಗಿ ಬೆಳೆವುದಲ? - ಮಂಕುತಿಮ್ಮ ||