ಸ್ವಾರ್ಥಿಗಳಾಗಿಹರು
ಬಣ್ಣ ಬಣ್ಣದ ಬರಿ ಬಾಯಿಮಾತಿಗೆ ಬರಗಾಲವಿಲ್ಲ ಪದವಿ ಪ್ರತಿಷ್ಠೆ ಬಿರುದುಬಾವಲಿ ಹಿಂದೆಬಿದ್ದಿಹರೆಲ್ಲ ಭ್ರಷ್ಟತೆ ಸ್ಪಷ್ಟವಾಗಿದ್ದರೂ ಬಡಿದೋಡಿಪರಿಲ್ಲವೇ ಇಲ್ಲ ಪರರ ಪರಿಗಣಿಸದೆ ಸ್ವಾರ್ಥಿಗಳಾಗಿಹರಲ್ಲ-ನನ ಕಂದ||
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
padma.A
ಬಣ್ಣ ಬಣ್ಣದ ಬರಿ ಬಾಯಿಮಾತಿಗೆ ಬರಗಾಲವಿಲ್ಲ ಪದವಿ ಪ್ರತಿಷ್ಠೆ ಬಿರುದುಬಾವಲಿ ಹಿಂದೆಬಿದ್ದಿಹರೆಲ್ಲ ಭ್ರಷ್ಟತೆ ಸ್ಪಷ್ಟವಾಗಿದ್ದರೂ ಬಡಿದೋಡಿಪರಿಲ್ಲವೇ ಇಲ್ಲ ಪರರ ಪರಿಗಣಿಸದೆ ಸ್ವಾರ್ಥಿಗಳಾಗಿಹರಲ್ಲ-ನನ ಕಂದ||
ಬಿಸಿ ಊಟಮಾಡಿ ಆಟವಾಡಿ ಪಾಠವ ಮರೆಯದಿರು ಅನ್ನ ದೈವಸ್ವರೂಪ ಅದನೆಂದೂ ನೀನು ಚೆಲ್ಲದಿರು ಚೆಲ್ಲಿದನ್ನ ಮೆಣಸು ಕರಿಬೇವನಲ್ಲೇ ಬಿಟ್ಟು ಏಳದಿರು ಅನ್ನದಾಸೋಹವ ನೀ ಮರೆಯದಿರು-ನನ ಕಂದ
ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣರು ಯಾರು? ಅದ ತಿಳಿದವರಾರು? ತಿಳಿಯದಿರುವವರು ಯಾರು? ಅರಿವಿಗೆ ಬಂದೂ ಬರದಂತಿರುವನು ಅವಯಾರು? ಅವನಿರುವನು ನಮ್ಮೊಳ ಹೊರಗೆ - ನನ ಕಂದ||
ಸುಳ್ಳು ತಟವಟ ಸಲಹದು ಯಾರನೂ ಸತ್ಯ ನಿಷ್ಟೆಗಳು ಕೈಬಿಡವು ಯಾರನೂ ಸುಳ್ಳಿಗೆ ಸುಖವಿಲ್ಲ ಸತ್ಯಕ್ಕೆಂದು ಸಾವಿಲ್ಲ ಸರಿದಾರಿಯರಸಿ ನಡೆ ನೀ -ನನ ಕಂದ||
ಬಾಯಾರಿ ಬಂದವಗೆ ಬೆಲ್ಲನೀರಿತ್ತುಪಚರಿಸು ಹಸಿದು ಬಂದವಗೆ ಉಣ ಬಡಿಸಿ ಆದರಿಸು ದಣಿದವಗೆ ವಿಶ್ರಮಿಸಲನುವಾಗಿ ಸಂತೈಸು ನೊಂದವರಿಗೆ ಭರವಸೆಯಾಗು-ನನ ಕಂದ||
ಅನಾದಿಕಾಲದಲ್ಲಿ ಮನುಷ್ಯನಿಗೆ ಅನಾರೋಗ್ಯದ ಅರಿವೇ ಇರಲಿಲ್ಲವಂತೆ. ರೋಗವೇ ಇಲ್ಲವೆಂದಾದ ಮೇಲೆ ಔಷಧಿ ಅಗತ್ಯವಾದರೂ ಏಕೆ? ಆಕಸ್ಮಿಕವಾಗಿ ಭೂಮಿಯ ಮೇಲೆ ಯಾರಿಗಾದರೂ ಆರೋಗ್ಯ ಕೆಟ್ಟರೆ ಚಿಕಿತ್ಸೆ ನೀಡಲು ದೇವಲೋಕದಿಂದ ದೇವತೆಗಳೆ ಬರಬೇಕಾಗಿತ್ತಂತೆ. ಚವನ...
ಅಹಂಮಿಕೆ ಅಳಿದೊಡೆ ದಕ್ಷತೆ ಬೆಳೆಯುವುದು ಸಕಲ ಕಾರ್ಯಗಳು ತಾನಾಗೆ ಹಸನಹುದು ಘನತೆ ಗೌರವ ತಾನಾಗೆ ತಾನು ಹೆಚ್ಚುವುದು ಎಲ್ಲೆಡೆ ಸಹಕಾರ ದೊರೆವುದು -ನನ ಕಂದ||
ಚೈತ್ರಾಗಮನಕೆ ಚಿನ್ನದ ಚಿಗುರು ವೈಶಾಖಕೆ ಸುಡು ಸುಡು ಬಿಸಿಲು ವರ್ಷಕಾಲಕೆ ಮಳೆರಾಯನಟ್ಟಹಾಸ ಶಿಶಿರಕೆ ನಗ್ನಚೆಲುವು -ನನಕಂದ|| ಚಿತ್ರ ಗೂಗಲ್ ಕೃಪೆ
ಸುಖದುಃಖಗಳ ಸಮಭಾವದಿಂದನುಗಾಲ ಸ್ವೀಕರಿಸುವ ಚಿತ್ತತಳೆದುಮಮತೆ ಮಮಕಾರಗಳ ಮಾತಾರೂಪಿಯ ಹೃದಯವನೇ ಹೊಂದಿನಿಷ್ಠೆಯಿಂದಲೇ ಕಾರ್ಯಗಳೆಲ್ಲವನು ಕೊನೆಯುಸಿರಿರುವತನಕ ಗೈದುಗೆಲುವಿನ ಹಾದಿಯಲೇ ಸಾಗಿ ನೀ ಜಯಿಸು ಜೀವನವ-ನನ ಕಂದ||
ಸಮಸ್ಯೆಗಳ ಸರಮಾಲೆಯ ಧರಿಸಿ ಕಷ್ಟ ಕಾರ್ಪಣ್ಯಗಳ ಸುಳಿಗೆ ಸಿಲುಕಿಬವಣೆಯಿಂದ ಬದುಕ ಬರಡಾಗಿಸಿ ನಲುಗಿ ನರಳದಿರು -ನನ ಕಂದ||
ಭಾರತದ ಸಾಂಸ್ಕøತಿಯ ಏಕತೆಯನ್ನು ಕಾಪಾಡುವಲ್ಲಿ ಈಶ್ವರ ತತ್ವ ಮಹತ್ವದ ಸ್ಥಾನವನ್ನು ಪಡೆದಿದೆ. ಅಮೃತೇಶ್ವರ, ಅಮರನಾಥ, ಓಂಕಾರೇಶ್ವರ, ಏಕಾಂಬರ, ಏಕಾಂಬ್ರನಾಥ, ಧಾರೇಶ್ವರ, ಬ್ರಹ್ಮೇಶ್ವರ, ವಾಕೇಶ್ವರ, ಕಪಿಲೇಶ್ವರ, ಶಿಶಿರೇಶ್ವರ, ಚಂದ್ರಮೌಳೀಶ್ವರ, ಭ...
ವಿಶಧರಾಭರಣ, ಚರ್ಮಾಂಬರ, ಬೂದಿಬಡುಕ, ಸ್ಮಶಾನವಾಸಿ, ಮರುಳುಪಡೆಗಳ ಒಡಯನಾಗಿ ಭಿಕ್ಷಾವೃತ್ತಿಯ ಮಾಡಿದರೇನು ಲೋಕಪೂಜ್ಯ ಮಾನ್ಯತೆ,ಮನ್ನಣೆ ಅಂತಃಸತ್ವದಿಂದ- ನನಕಂದ|| -ಚಿತ್ರ ಗೂಗಲ್ ಕೃಪೆ