ನೋವು ನಿನಗಿರಲಿ ಸಂತಸ ಎಲ್ಲರಿಗಾಗಿರಲಿ
ನಿನ್ನೆಲ್ಲ ನೋವು ನಿನಗಿರಲಿ, ಅನ್ಯರನದು ಭಾದಿಸದಿರಲಿನಿನ್ನ ದಾರಿದ್ರ ನಿನಗಿರಲಿ, ಅನ್ಯರಿಗದೆಂದೂ ತಟ್ಟದಿರಲಿನಿನ್ನ ದುರ್ವಿಧಿ ನಿನಗಿರಲಿ, ಅನ್ಯರನದು ಕಾಡದಿರಲಿನಿನ್ನ ಸಂತಸದ ಕ್ಷಣಗಳೆಲ್ಲರಿಗಾಗಿರಲಿ - ನನಕಂದ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
padma.A
ನಿನ್ನೆಲ್ಲ ನೋವು ನಿನಗಿರಲಿ, ಅನ್ಯರನದು ಭಾದಿಸದಿರಲಿನಿನ್ನ ದಾರಿದ್ರ ನಿನಗಿರಲಿ, ಅನ್ಯರಿಗದೆಂದೂ ತಟ್ಟದಿರಲಿನಿನ್ನ ದುರ್ವಿಧಿ ನಿನಗಿರಲಿ, ಅನ್ಯರನದು ಕಾಡದಿರಲಿನಿನ್ನ ಸಂತಸದ ಕ್ಷಣಗಳೆಲ್ಲರಿಗಾಗಿರಲಿ - ನನಕಂದ
ಎಲ್ಲ ಸರಿಯಿರುವತನಕ ಯಾವುದರ ಹಂಗೆಮಗೇಕೆ? ಕೈಮೀರುತಿದೆಯೆಂದೊಡೆ ಮುಕ್ಕೋಟಿ ದೈವಕೂಮೊರೆ ಧ್ಯಾನ, ಧಾನ ಧರ್ಮ, ಹರಕೆ ಯಾತ್ರೆ, ವ್ರತ ಕಥೆ, ನೋವುನಲಿವ ಸಮನ್ವಯದಿಕಾಣು ನೀ -ನನ ಕಂದ||
ಹೊಟ್ಟೆಹಸಿವನಿಂಗಿಸುತಿಹುದಿಂದು ಬಿಸಿಯೂಟ ಜ್ಞಾನದ ಹಸಿವ ತಣಿಪುದು ವಿಧ್ವನ್ಮಣಿಗಳ ಪಾಠ ಮನಕೆ ಉಲ್ಲಾಸವನೀವುದು ಸಕಲರೀತಿಯಾಟ ಊಟಮಾಡಿ, ಪಾಠಓದಿ, ಆಟವಾಡು-ನನಕಂದ||
ಅರಿತು ನಡೆವವರ ಕೂಡ ಅರೆಗಳಿಗೆ ನೋವಿಲ್ಲ ಅರಿಯದ ಅರಿಗಳ ಕೂಡ ಅರೆಗಳಿಗೆ ಸುಖವಿಲ್ಲ ಅರಿತು ಎಲ್ಲರೊಡಗೂಡಿ ಬಾಳೆ ಬಾಳು ಬಂಗಾರ ಅರಿತನವನಳಿದು ಅರವಿಂದನಾಗು ನೀ-ನನ ಕಂದ||
ಗಗನ ನೌಕೆ ನೆಲದಿ ತೆವಳಿ ತೆವಳಿ ಮೇಲೆ ಮೇಲೆ ಹಾರು ತಿರಲು ಎತ್ತ ನೋಡಲತ್ತ ಮೋಡ ಸುತ್ತ ಮುತ್ತ ಮೋಡವು ಕೆಳಗೆ ಮೋಡ ಮೇಲೆ ಮೋಡ ಹಿಂದೆ ಮೋಡ ಮುಂದೆ ಮೋಡ ಬಿಳಿಯ ಮೋಡ ನೀಲ ಮೋಡ ಕಪ್ಪು ಮೋಡ ಬೂದ ಮೋಡ ತಿಳಿಯ ಮೋಡ ದಟ್ಟ ಮೋಡ ಸಂದೇಶಗಳ ಹೊತ್ತ ಮೋಡ ಸಂದೇಶ...
ಅನ್ಯರ ಸುಖದಿ ತನ್ನ ಸುಖವಕಂಡು ಅನ್ಯರ ಸಂಕಷ್ಟಗಳ ತಾನು ಉಂಡುಅನ್ಯರಿಗೆ ಸರ್ವಸ್ವವನು ನೀಡಿದೊಡೆಅನ್ಯರಾಗೆ ಉಳಿವರು- ನನ ಕಂದ||
ಏನಿದ್ದರೇನುಎಂತಿದ್ದರೇನುನಾನಳಿವತನಕನಾನಾ ನಾನುಗಳುನನ್ನ ತುಂಬಿರಲುನಾನಳಿವುದೆಂತುನಾನಳಿಯದೆನನ್ನುಳಿವದೆಂತುಎಲ್ಲ ನಾನಾವರಿಸಿಎಲ್ಲ ನಾನಾಗಿರೆನಾಕವೆಲ್ಲಿಹುದು?ಬರೀ ನರಕ !ನಾನಳಿದು ನಾವಾಗೆನಾವೆಲ್ಲ ಒಂದಾಗೆನಮಗಾಗ ಸಗ್ಗಸುಖ ************
ಮಂದಿಯ ಮನಗೆಲ್ಲದ ಮುಂದಾಳಿನ ಕಾರ್ಯ ಮುಂದಾಲೋಚನೆಯಿಲ್ಲದೆ ಮಾಡಿದ ಕಾರ್ಯ ಮನಸ್ಸಿಲ್ಲದ ಮನಸಿಂದ ಮಾಡುವ ಕಾರ್ಯ ಮಣ್ಣಾಗಿ ಭೂಗರ್ಭಸೇರುವುವು- ನನ ಕಂದ||
ಪ್ರಕೃತಿ ಒಲಿದೊಡೆ ಸಕಲ ಸಂಪದವು ಪ್ರಕೃತಿ ಮುನಿದೊಡೆ ಉಳಿವೆಲ್ಲಿ ಜಗಕೆ ಪ್ರಕೃತಿಯೇ ಜೀವನ, ದೈವ ಸರ್ವಸ್ವ ಪ್ರಕೃತಿ ಆರಾಧಕನಾಗು - ನನ ಕಂದ||
ಅಜ್ಜಿಯಾ ಮುದ್ದು ಅಮ್ಮನ ಗುದ್ದುಅಜ್ಜನತಿ ಪ್ರೀತಿ ಅಪ್ಪನಾ ಭೀತಿಅಕ್ಕನ ಆರೈಕೆ ಅಣ್ಣನ ಹಾರೈಕೆಅರಳಿಸುವುದು ನಿನ್ನ- ನನ ಕಂದ ||
ಮಿಂಚಂಚೆಯಲ್ಲಿ ಸುಳಿದಾಡಿದ ಚಾಣಕ್ಯನ ಸುಪ್ರಸಿದ್ಧ ಸೂಕ್ತಿಗಳು ಕನ್ನಡ ಅನುವಾದ v “ಬೇರೆಯವರು ಎಸಗುವ ತಪ್ಪುಗಳಿಂದ ಕಲಿಯಬೇಕು. ನೀವೇ ಅವೆಲ್ಲವನ್ನೂ ಮಾಡಿ ಕಲಿಯುವಷ್ಟು ಕಾಲಾವಕಾಶ ನಿಮಗಿಲ್ಲ.” v “ ಮನುಷ್ಯನು ಅತೀವವಾದ ಪ್ರಾಮಾಣಿಕತೆಯಿಂದಿರಬಾರದು...
ಜಗದ ಪೋಷಕ ಹಗಲದೀವಿಗೆ ದಿನಕರಗಿಲ್ಲ ಕಿಂಚಿತಹಂಕಾರ ತಂಬೆಳಕನಿತ್ತು ತಂಪೆರೆವಾ ತಂಗದಿರಗಿಲ್ಲ ಒಂದಿನಿತಹಂಕಾರ ತಂನೆಳಲು, ತಣಿವಣ್ಣು, ಹೂವನೀವ ವೃಕ್ಷಕ್ಕಿಲ್ಲಿಂತಿಷ್ಟಹಂಕಾರ ನಿನಗೇಕೆ ಬೇಕು ಸಲ್ಲದ ಬಿಂಕ ಬಿಗುಮಾನ - ನನ ಕಂದ||