ಹೆಸರ ತರುವಂತಿರಲಿ ಕೆಲಸ
ಹೆಸರಿನ ಬಯಕೆಯಲಿ ಕೆಸರಿಗೆ ಬೀಳದಿರು ಹೆಸರ ಹಂಬಲಿಸಿ ಅನ್ಯದಾರಿಗಳ ಹಿಡಿಯದಿರು ಹೆಸರಿಗಾಗಿಯೇ ಕೆಲಸವನೆಂದೂ ಮಾಡದಿರು ಹೆಸರತರುವಂತಿರಲಿ ನಿನ ಕೆಲಸ - ನನ ಕಂದ ||
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
padma.A
ಹೆಸರಿನ ಬಯಕೆಯಲಿ ಕೆಸರಿಗೆ ಬೀಳದಿರು ಹೆಸರ ಹಂಬಲಿಸಿ ಅನ್ಯದಾರಿಗಳ ಹಿಡಿಯದಿರು ಹೆಸರಿಗಾಗಿಯೇ ಕೆಲಸವನೆಂದೂ ಮಾಡದಿರು ಹೆಸರತರುವಂತಿರಲಿ ನಿನ ಕೆಲಸ - ನನ ಕಂದ ||
ಹಸಿರುಟ್ಟ ವನದೇವಿ ಉಸಿರ ಕೊಟ್ಟಿಹಳು ಹರಸುತ್ತ ಬಾಳ ಹಸನುಗೊಳಿಸುವಳು ಹಸಿರಿಲ್ಲದಿರೆ ಉಸಿರಿಲ್ಲ ಬರಿಯುರಿಬಿಸಿಲು ಹಸಿರುಳಿಸುತ್ತ ನೀ ಬಾಳು- ನನ ಕಂದ||
ಓರ್ವನ ಪತನದಲಿ ಹಲವರಭ್ಯುದಯ ಹಲವರ ಪರಿಶ್ರಮದಿ ಓರ್ವನಭ್ಯುದಯ ಯಾರ ಪತನ, ಪರಿಶ್ರಮ, ಯಾರ ಏಳ್ಗೆಗೋ? ಯಾರು ಬಲ್ಲರು ವಿಧಿ ವಿಲಾಸವ -ನನ ಕಂದ |||
ಕ್ಯಾಟ್‌ಬರಿಸ್, ಕಿಟ್‌ಕ್ಯಾಟ್ ಬಿಟ್ಟು,ತಂಬಿಟ್ಟು, ಹುರಿಟ್ಟು, ಕಜ್ಜಾಯ, ಸವಿದುಕುಕ್ಕಿಸ್, ಕೇಕುಬಿಟ್ಟು, ಉಂಡೆ ತಿನ್ನುತದಷ್ಟಪುಷ್ಟದಿ ಬೆಳೆ ನೀನು - ನನ ಕಂದ ||
ಅಜ್ಜಿ ತಿಂಡಿಯುಳಿಸಿ ಖಾದಿಯ ಧರಿಸಿಗ್ರಾಮೀಣ ಸೊಗಡ ಬಿಡದೆಲ್ಲೆಡೆ ಬೆಳಸಿದೇಸಿಯತೆನೆಂದೂ ಮರೆಯದೆ ಮೆರೆಸಿಭಾರತೀಯನಾಗು ನೀ -ನನ ಕಂದ ||
ಟೊಳ್ಳು ಬಾಂಧವ್ಯದಲಿ ತೊಳಲಾಡುತಿದೆ ಬದುಕಿಂದು ಸೋದರಿಕೆಯ ಸೌಹಾರ್ದ ಸೋರಿ ಹೋಗಿದೆ ಇಂದು ಮಕ್ಕಳು ಮೊಮ್ಮಕ್ಕಳಲಿ ಮಮಕಾರವಿಲ್ಲವಾಗಿದೆ ಇಂದು ಅಜ್ಜ ಅಜ್ಜಿಯರ ಅಕ್ಕರೆಯ ನುಡಿ ಅಣಕವಾಗುತಿವೆ ಇಂದು ನಾಗಾಲೋಟಕೆ ನಲುಗಿ ನರಳುತಿದೆ ಬದುಕು ಯಾಂತ್ರಿಕತೆಯಲ...
ಅಧಿಕಾರದಮಲಲ್ಲಿ ಅವಿವೇಕವೆಲ್ಲಡೆ ಮೆರೆಯುವುದು ಅಭಿವೃದ್ಧಿ ಕಾರ್ಯ ತಾನಾಗೆ ಹಿಂದೆ ಸರಿಯುವುದು ಅನರ್ಥವೆಲ್ಲೆಡೆ ತಂತಾನೆ ತಾಂಡವವಾಡುವುದು ಅವನತಿಯ ಹಾದಿ ತಾನಾಗೆ ತೆರೆವುದು - ನನ ಕಂದ ||
ಯಾವ ಕಾಲಕೆ ಯಾರ ಮೇಲಿಹುದೊ ಕಾಲನಾ ದೃಷ್ಟಿ ನೋವು ನಲಿವುಗಳ ತನ್ನೊಡಲೊಳಗಿರಿಸಿದೆ ಸೃಷ್ಟಿ ಜವರಾಯನ ದೃಷ್ಟಿಗೆ ವಿಧಿರಾಯ ಕೊಡುವನು ಪುಷ್ಟಿ ವಿಧಿಯಾಟವನು ಬಲ್ಲವನು ಯಾರು - ನನ ಕಂದ ||
1. ಥಟ್ ಎಂದು ಹೇಳಿರೆಂದು ಪ್ರಶ್ನಿಸುವ ಸೋಮಶೇಖರ್ ಹರಟೆಯಲಿ ವಿಚಾರವ ಮಂಡಿಸುವ ಜಾಣ ಜಾಣೆಯರು ಎದೆತುಂಬಿಹಾಡಿ ಹಾಡಿಸುವ ಗಾನಯೋಗಿಬಾಲಸುಬ್ರಹ್ಮಣ್ಯ ಕೇಳುಗರ ಮನವ ನಿತ್ಯವೂ ತಣಿಸುತಿಹರು- ನನ ಕಂದ ಹರ್ಷದಾ ಹೊನಲು ಹರಿಯೆ ಪುಳಕಗೊಳುವುದು ಮನವು ಹುಚ್ಚ...
1. ಮತ್ತೂರ ಭಾರತ, ಕಣ್ಣನಾ ನುಡಿಯಗ್ಗ ಬನ್ನಂಜೆ ರಾಮಾಯಣ, ಭಟ್ಟರಾ ಕಗ್ಗ ಕನ್ನಡ ಸಾರಸ್ವತಲೋಕದಾ ಜನಕೆ ಸಗ್ಗÎ ಈ ನಾಕದಲಿ ನಲಿದುಬೆಳೆ ನೀ -ನನ ಕಂದ|| ಇಗೋ ಕನ್ನಡದ ಧೀಮಂತ ನಡೋಜ ಜಿ.ವಿ ಕರುನಾಳು ಬಾ ಬೆಳಕೆಂದ ಗುರುರಾಜ ಕರ್ಜಗಿ ಮೈಸೂರು ಮಲ್ಲಗೆಯ ಕ...