ಸಹಿಸುವುದೆಂತು
ಮ್ಯಾಟು ಬ್ಯಾಟು ಕಾಯಲ್ಗಳಿಗೆ ಸವಾಲು ಎಸೆದಿದೆ ಸೊಳ್ಳೆ ಗುಯ್ ಗುಟ್ಟುತ ರಕ್ತವ ಹೀರುತ ನಿದ್ದೆಯಾ ಕೆಡಿಸಿದೆ ಸೊಳ್ಳೆ ಆಧುನಿಕ ಬದುಕನು ಅಣಕಿಸಿ ಅಟ್ಟಹಾಸದಿ ಮೆರೆದಿದೆ ಸೊಳ್ಳೆ ಸೋಲೊಪ್ಪದಾ ಸೊಳ್ಳೆಯನು ಸಹಿಸುವುದೆಂತು-ನನ ಕಂದ||
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
padma.A
ಮ್ಯಾಟು ಬ್ಯಾಟು ಕಾಯಲ್ಗಳಿಗೆ ಸವಾಲು ಎಸೆದಿದೆ ಸೊಳ್ಳೆ ಗುಯ್ ಗುಟ್ಟುತ ರಕ್ತವ ಹೀರುತ ನಿದ್ದೆಯಾ ಕೆಡಿಸಿದೆ ಸೊಳ್ಳೆ ಆಧುನಿಕ ಬದುಕನು ಅಣಕಿಸಿ ಅಟ್ಟಹಾಸದಿ ಮೆರೆದಿದೆ ಸೊಳ್ಳೆ ಸೋಲೊಪ್ಪದಾ ಸೊಳ್ಳೆಯನು ಸಹಿಸುವುದೆಂತು-ನನ ಕಂದ||
ನಿಸ್ವಾರ್ಥದ ನೆಲದಲ್ಲಿ ಸ್ವಾರ್ಥ ಬಿತ್ತವ ಬಿತ್ತಾಗಿದೆ ಸಮೃದ್ಧ ಬೆಳೆಬೆಳೆದು ಕೊಯ್ಲಿಗೆ ಸಿದ್ಧವಾಗಿನಿಂತಿದೆ ಸತ್ವಹೀನವಾಗಲೀ ಫಸಲು ಮರುಬಿತ್ತನೆಗೆ ಬಾರದಿರಲಿ ನೆಲದ ಗುಣದ ನಿಜಸಾರ ಉಳಿಯಲಿ - ನನ ಕಂದ||
ಪಡೆನುಡಿ, ನುಡಿಗಟ್ಟು ಇವೆರಡೂ ಒಂದೇ ಅಲ್ಲವೆ? ಪ್ರಶ್ನೆಪತ್ರಿಕೆಗಳಲ್ಲಿ ಎರಡು ಬೇರೆ ಎಂಬಂತೆ ಬಳಸುತ್ತಾರೆ. ವ್ಯತ್ಯಾಸವಿದ್ದರೆ ಪಡೆನುಡಿ, ನುಡಿಗಟ್ಟು ಇವೆರಡರ ನಡುವೆ ಇರುವ ವ್ಯತ್ಯಾಸವೇನು? ದಯವಿಟ್ಟು ಉದಾಹರಣೆಯೊಂದಿಗೆ ತಿಳಿಸಿ.
ನಾಗಾಲೋಟಕೆ ನಲುಗಿ ನರಳುತಿದೆ ಬದುಕು ಯಾಂತ್ರಿಕತೆಯಲಿ ಯಂತ್ರವಾಗುತಿದೆ ಬದುಕು ತಂತ್ರಜ್ಞಾನದ ಹೆಸರಿನಲಿ ತತ್ತರಿಸುತಿದೆ ಬದುಕು ಆಧುನಿಕತೆಯಬ್ಬರದಿ ಅತಂತ್ರವಾಗಿದೆಯದು-ನನ ಕಂದ||
ನನ್ನ ಕಣ್ಮುಂದಿನ ಪುಟ್ಟ ಹುಡುಗಿನನ್ನ ನೆರಮನೆಯ ಮುದ್ದು ಹುಡುಗಿನನ್ನಿಂದಲೇ ಕಲಿತು ಬೆಳೆದ ಹುಡುಗಿನನ್ನೊಡನೆ ಬಾಳ ಬಯಸಿದಾ ಬೆಡಗಿನನ್ನಲಿ ಭಾವಗಳ ಬಿತ್ತಬಯಸಿದಾ ಬೆಡಗಿನಾನ್ನೊಲ್ಲೆನೆಂದರೂ ಬೆನ್ನಹತ್ತಿದ ಹುಡುಗಿನನ್ನೊಡನೆ ಬೆರೆತು ಮನವ ಕದ್ದ ಹುಡು...
ಒಳಹೊರಗೆಲ್ಲ ಪರಿಶುದ್ಧವಾಗಿರುವಲ್ಲಿ ಆಲೋಚನೆಗೆಂದೆಂದೂ ಮಲಿನತೆಯಿಲ್ಲ ಅನೀತಿ ಅಧರ್ಮಕ್ಕೆ ಎಡೆಯಿಲ್ಲವೇಯಿಲ್ಲ ನಿಷ್ಕಲ್ಮಷಮನ ಬೇಕದಕೆ-ನನ ಕಂದ||
ನನ್ನ ಮನವ ಕದ್ದ ಹುಡುಗಿ ನನ್ನ ಮನವ ಗೆದ್ದ ಹುಡುಗಿ ನನ್ನ ಮನದಿ ಕುಳಿತಳಡಗಿ ನನ್ನ ಮನಕೆ ಅವಳೆ ಬೆಡಗಿ ನನ್ನ ಜೀವದ ಜೀವವವಳು ನನ್ನ ಪ್ರೇಮದ ಹುಡುಗಿಯವಳು ನನ್ನ ಬಾಳಸಾರ ಸರ್ವಸ್ವವವಳು ನನ್ನ ಮುದ್ದು ಮಡದಿಯವಳು ನನ್ನ ಬದುಕಿನ ಬೆಡಗಿ ಅವಳು ನನ್ನ ಮನ...
ಸತ್ಯಮೇವ ಜಯತೆಯೆಂದ ನಾಡಲ್ಲಿ ಸತ್ಯವಂತರಿಗೆ ಉಳಿಗಾಲವಿಲ್ಲವಾಗಿದೆ ಆದರ್ಶವೆಂಬುದ್ಯಾರಿಗೂ ಬೇಡವಾಗಿದೆ ಕರ್ತವ್ಯದರಿವಿಲ್ಲವಾಗುತಿದೆ-ನನ ಕಂದ||
ತಿರುತಿರುಗಿ ಸುತ್ತಿ ಬಸವಳಿದು ಬೆಂಡಾಗಿ ತನುದಣಿದಿರಲ್ ಹರಿವ ಕಿರುಝರಿಯ ಬೊಗಸೆ ನೀರದುವೆ ದಣಿವಾರಿಪಂತೆ ಬೆಂದು ನೊಂದು ಕಿನ್ನತೆಯಿಂದ ಜರ್ಜರಿತವಾಗಿಹ ಮನವ ಸಂತೈಪುದು ಸಾಂತ್ವನದ ನುಡಿಯೊಂದು - ನನ ಕಂದ||
ಕಡುಹಸುರಿನ ದಟ್ಟಕಾನನಗಳ ಕ್ರೌರ್ಯದಿಂ ಕಬಳಿಸುತ ಭೂಗರ್ಭದಿಂ ಖನಿಜಗಳ ದೌರ್ಜನ್ಯದಿಂ ಬರಿದಾಗಿಸುತ ಜೀವಜಲಮೂಲಗಳ ನಿರ್ದಯೆಯಿಂ ಕಲುಷಿತಗೊಳಿಸುತ ಭೂದೇವಿಯ ಮರಣಕೂಪಕೆ ತಳ್ಳುತಿಹರು -ನನ ಕಂದ||
ಸಿಂಗಾರದ ಹುಡುಗಿ ಬಂಗಾರದ ಗುಣ ಚಂದುಳ್ಳಿ ಚಲುವೆ ಇನ್ನೆಲ್ಲಿ ದೊರೆತಾಳು ಎಂದೆಲ್ಲಾ ಬಣ್ಣಿಸಿ ಮಗನ ಮಡದಿಮಾಡಿ ಮನೆ ತುಂಬಿಸಿಕೊಂಡು ಮೆರೆದರಂದು ಮನ ತುಂಬಲಿಲ್ಲ ಮಮತೆ ಮೂಡಲಿಲ್ಲ ಅನುರಾಗವರಳಲೇ ಇಲ್ಲ, ಇನ್ನೆಲ್ಲಿ ವಾತ್ಸಲ್ಯ ? ಇನ್ನೆಲ್ಲಿಯ ಬದುಕು...
ಅನಿರೀಕ್ಷಿತ ಫಲದೊರೆತಂದು ಅತ್ಯುತ್ಸಾಹ ನಿರೀಕ್ಷಿತ ಫಲ ದೊರೆಯದಿದ್ದೊಡೆ ಖಿನ್ನತೆ ಭಾವನೆಗಳ ಹೊಯ್ದಾಟದಲಿ ಭಾವೋದ್ವೇಗ ನಿರ್ಲಿಪ್ತತೆ ಸಮಚಿತ್ತದಿಂದ - ನನ ಕಂದ||