ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪದ್ಮ.ಎ
ಪ

ಪದ್ಮ.ಎ

padma.A

೧೨೧ ಲೇಖನಗಳು ೩೭,೬೪೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹತ್ತಿದೇಣಿಯ ಒದೆಯದಿರು

ಜನ ೨೧ ಬ್ಲಾಗ್ ೬೧ ವೀಕ್ಷಣೆ

ಮುಂದೆ ಬಂದಿಹೆನೆಂದು ಹಿಂದಿನದು ಮರೆಯದಿರು ಹಿಂದಿನ ಅರಿವೆ ಮುಂದಿನ ಅಭ್ಯುದಯಕೆ ನಾಂದಿ ಇಂದಿನ ಹಿಂದು ನೆನ್ನೆ, ನಾಳೆಯಾ ಹಿಂದು ಇಂದು ಹತ್ತಿದೇಣಿಯನೆಂದೂ ಒದೆಯದಿರು - ನನ ಕಂದ ||

ಸುಲಭವಾಗಿಸು

ಜನ ೨೧ ಬ್ಲಾಗ್ ೫೩ ವೀಕ್ಷಣೆ

ಸಹಕಾರವಿದ್ದಲಿ ಸರ್ವ ಕಾರ್ಯಗಳು ಸುಗಮಸಲಿಗೆಯಿದ್ದಲ್ಲಿ ಸಹಕಾರ ಪಡೆವುದು ಸುಗಮಸಂಯಮವಿದ್ದಲ್ಲಿ ಜಯವ ಗಳಿಪುದು ಸುಲಭಸುಲಭವಾಗಿಸುತ ನಡೆ ನೀ ನನ ಕಂದ ||

ಪ್ರಕೃತಿಯಿಂದಲೆ

ಜನ ೨೧ ಬ್ಲಾಗ್ ೭೩ ವೀಕ್ಷಣೆ

ಪ್ರಕೃತಿ ಒಡಲಲಿ ಹುಟ್ಟಿ ಬೆಳೆಯುತಿಹೆವು ಪ್ರಕೃತಿ ಮಡಿಲಲಿ ಬಾಳಿಬದುಕುತಿಹೆವು ಪ್ರಕೃತಿಯಿಂದಲೇ ಎಲ್ಲ ಪಡೆಯುತಿಹೆವು ಪ್ರಕೃತಿಯ ವಿಕೃತಿಗೊಳಿಸದಿರು-ನನ ಕಂದ||

ಪೂರ್ವನಿರ್ಧರಿತವಾಗಿಹುದು

ಜನ ೨೧ ಬ್ಲಾಗ್ ೫೮ ವೀಕ್ಷಣೆ

Editಗೆ ಹೋಗಿ Save ಮಾಡಲಾದೀತೆ Fileನ ಬಳಸಿ Copy Paste ಮಾಡಲಾದೀತೆ ಪೂರ್ವನಿರ್ಧರಿತವಾಗಿಹುದು ಅವುಗಳಾಕಾರ್ಯ ಅರಿತು ಕಲಿತು ಬಳಸಿ ನಲಿ ನೀ - ನನ ಕಂದ ||

ಕೆಳಗೆಳೆಯದಿರು

ಜನ ೨೦ ಬ್ಲಾಗ್ ೬೪ ವೀಕ್ಷಣೆ

ಮೇಲೇರಲೇ ಬೇಕೆಂದು ತಾ ನಿತ್ಯವು ಹಂಬಲಿಸಿ ಮೇಲಿರುವವರ ಕಂಡು ತಾ ನಿರಂತರ ಹಪಹಪಿಸಿ ಮೇಲೇರಲಾರೆನೆಂಬ ತಳಮಳದಿ ಕರುಬಿ ಕಳವಳಸಿ ಮೇಲಿನವರ ತನ್ನೆಡೆಗೆಳೆವುದು ಸರಿಯೆ?-ನನ ಕಂದ||

ಸ್ಫುರದ್ರೂಪಿ ಪೂತನಿಯರು

ಜನ ೨೦ ಬ್ಲಾಗ್ ೬೬ ವೀಕ್ಷಣೆ

ಸ್ಫುರದ್ರೂಪಿ ಪೂತನಿಯರು ಹಾಲುಣಿಸೆ ಸಜ್ಜಾಗಿಹರು ಸುಸಮಯಕಾಗಿ ಕಾದುನಿಂತು ಹೊಂಚು ಹಾಕಿಹರು ಹುನ್ನಾರವನರಿಯದೆ ಹೂಟಕ್ಕೆ ಬಲಿಯಾದೊಡೆ ನಿನ್ನ ಯಮಪುರಿಗೆ ಅಟ್ಟುವರು ನಿರ್ದಯದಿ - ನನ ಕಂದ||

ಆಹಾರದಲ್ಲೇ ಆರೋಗ್ಯ

ಜನ ೧೯ ಬ್ಲಾಗ್ ೫೬ ವೀಕ್ಷಣೆ

ಲೇಸು, ಕುರ್ ಕುರೆ ಬಿಟ್ಟು, ಚಕ್ಕುಲಿ ಗೋಡು ಬಳೆ ಮೆದ್ದುಫಿಸ್ಜಾ, ಬಗ್ರರ್ ಬಿಟ್ಟು, ರೊಟ್ಟಿ,ದೋಸೆ,ಇಡ್ಲಿ ಚಟ್ನಿ ತಿಂದುತಂಸಪ್, ಫಾಂಟಬಿಟ್ಟು, ಎಳನೀರು, ಪಾನಕ, ಪಾಯ್ಸಕುಡ್ದುಆಹಾರದಲೇ ಆರೋಗ್ಯ ವರ್ಧಿಸುತ ನೀ - ನನ ಕಂದನೆ||

ಸರಿಸಿ ಬಿಡು

ಜನ ೧೯ ಬ್ಲಾಗ್ ೪೦ ವೀಕ್ಷಣೆ

ಸರಿದು ಬಿಡು ಬಹುದೂರ ಮನಕೆ ಬೇಸರವಾಗುವೆಡೆಯಿಂದ ಸರಿದು ಬಿಡು ಮನದ ಬೇಗುದಿಯ ಕಳೆಯಲಾಗದೆಡೆಯಿಂದ ಸರಿಸಿ ಬಿಡು ಮನದ ನೋವುಗಳ ಅನ್ಯರಿಗೆ ಎರವಾಗದಂತೆ ಸರಿಪಡಿಸೆ ಎಲ್ಲವನು ಮನವ ಹದಗೊಳಿಸು ನೀ-ನನ ಕಂದ||

ಪ್ರಸ್ತುತ ಸ್ಥಿತಿ

ಜನ ೧೮ ಬ್ಲಾಗ್ ೫೧ ವೀಕ್ಷಣೆ

ದೊಡ್ಡವರ ಸಣ್ಣತನ ಸಾಮ್ರಾಜ್ಯವಾಳುತಿದೆ ಕಿರಿಯರಲಿ ಹಿರಿತನದ ಹೆಡೆಯೆತ್ತಿ ಆಡುತಿದೆ ಮುಖವಾಡ ನಿಜಮುಖವ ಮರೆಮಾಚುತಿದೆ ಅಹಮಿನಲಿ ಎಲ್ಲ ಬರಡಾಗುತಿದೆ-ನನ ಕಂದ

ಹದವರಿತು ದುಡಿ

ಜನ ೧೮ ಬ್ಲಾಗ್ ೫೬ ವೀಕ್ಷಣೆ

ಸಂಪಾದನೆಯ ಹಾದಿಲಿ ಸಂಸಾರ ಸೊರಗದಿರಲಿ ಸಮರಸವು ಎಂದೆದೂ ಹಿಂದೆ ಸರಿಯದಿರಲಿ ಮನೆಯಲ್ಲಿ ಕಿಲಕಿಲನಗು ಮಾಯವಾಗದಿರಲಿ ಹದವರಿತು ದುಡಿ ನೀನು- ನನ ಕಂದ ||

ಎಲ್ಲರೊಳಗೂಡಿ ಸಂಭ್ರಮಿಸು

ಜನ ೧೭ ಬ್ಲಾಗ್ ೫೧ ವೀಕ್ಷಣೆ

ಸಹಬಾಳ್ವೆ ಇದ್ದಲ್ಲಿ ಸಹಕಾರ ದೊರೆವಲ್ಲಿ ಸಡಗರ ಸಂತಸವು ತಾನಾಗೆ ಇರುವಲ್ಲಿ ಮಾಡುವ ಕೆಲಸಗಳೆಲ್ಲಾ ಹಸನಾಗುವುದಲ್ಲಿ ಎಲ್ಲರೊಳಗೂಡಿ ಸಂಭ್ರಮಿಸು ನೀ-ನನ ಕಂದ||

ಮಂಕುತಿಮ್ಮನ ಕಗ್ಗ

ಜನ ೧೨ ಉಲ್ಲೇಖಗಳು ೬೧೬ ವೀಕ್ಷಣೆ

ದೇವರೆಂಬುದೇನು ಕಗ್ಗತ್ತಲೆಯ ಗವಿಯೆ? ನಾವರಿಯಲಾರದೆಲ್ಲದರರೊಟ್ಟು ಹೆಸರೆ ? ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು? ಸಾವು ಹುಟ್ಟುಗಳೇನು?‍ ಮಂಕುತಿಮ್ಮ||