ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪದ್ಮ.ಎ
ಪ

ಪದ್ಮ.ಎ

padma.A

೧೨೧ ಲೇಖನಗಳು ೩೭,೬೪೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನನಸಾದುದ ನೆನೆ

ಜನ ೦೪ ಬ್ಲಾಗ್ ೪೫ ವೀಕ್ಷಣೆ

ಬರಿಗನಸು ಕಾಣುತಾ ಕಾಲಕಳೆಯದಿರು ನೆನಸಾಗದ ಕನಸ ಕನವರಿಸುತ ಕೂರದಿರು ಕನಸೆಲ್ಲಾ ನೆನಸಾಗದೆಂಬರಿವು ನಿನಗಿರಲಿ ನನಸಾದುದ ನೆನೆದು ನಲಿ-ನೀ ನನ ಕಂದ||

ಮನದ ವಕ್ರತೆಯಳಿಯೆ

ಜನ ೦೧ ಬ್ಲಾಗ್ ೪೮ ವೀಕ್ಷಣೆ

ಮನದ ವಕ್ರತೆ ಅಳಿಯೆ ಅರಳುವುದು ಮಮಕಾರ ಆತಂಕವೆಲ್ಲ ತಂತಾನೆ ಕಳೆಯುವುದು ಬಹುಬೇಗ ಒಡನೆದೊರೆವುದು ಎಲ್ಲೆಲ್ಲೂ ಸಕಲರಿಂ ಸಹಕಾರ ಬಂಗಾರವಾಗುವುದಾಗ ಬಾಳು - ನನ ಕಂದ||

ಇರುವುದರಲಿ ನಲಿ

ಡಿಸೆಂ ೩೧ ಬ್ಲಾಗ್ ೬೩ ವೀಕ್ಷಣೆ

ಅದುಸರಿಯಿಲ್ಲಿದುಸರಿಯಿಲ್ಲೆಂದ್ಹಲುಬದಿರು ಪರಿಪೂರ್ಣತೆಯೆಂಬುದು ಸೃಷ್ಟಿಯೊಳಗಿಲ್ಲè ನ್ಯೂನ್ಯತೆಯೇ ಸಹಜತೆಯೆಂದರಿತು ನಡೆ ಇರುವುದರಲಿ ನಲಿವುದ ಕಲಿ - ನನ ಕಂದ||

ಶುದ್ಧತಪ್ಪು

ಡಿಸೆಂ ೩೦ ಬ್ಲಾಗ್ ೯೮ ವೀಕ್ಷಣೆ

ಮಾಡದಿರುವವರು ಯಾರುಂಟು ಜಗದೊಳಗೆ ತಪ್ಪು ಮಾಡಿದ ತಪ್ಪಮರೆಮಾಚಿ ಮುಚ್ಚಿಹಾಕೋದು ತಪ್ಪು ಮಾಡಿದ ತಪ್ಪತಿದ್ದಿಕೊಳ್ಳದೆ ಮೆರೆಯೋದು ಪರಮತಪ್ಪು ಮಾಡಿದ ತಪ್ಪನೊಪ್ಪಾಗಿಪುದು ಶುದ್ಧತಪ್ಪು - ನನ ಕಂದ ||

ಭ್ರಾಂತಿಯ ಬಿಡು

ಡಿಸೆಂ ೩೦ ಬ್ಲಾಗ್ ೬೦ ವೀಕ್ಷಣೆ

ಇಲ್ಲಿಲ್ಲ ಇನ್ನೆಲ್ಲೋ ಅಮಿತ ಸುಖವಿಹುದೆಂದು ಭ್ರಮಿಸಿ ತೊಳಲದಿರು ಇಹುದಿಲ್ಲೆ ನಮ್ಮೊಳಗೆ ಸುಖ ಶಾಂತಿ ನೆಮ್ಮದಿಯು ತಿಳಿದು ನೋಡೆ ಇದನರಿಯದೆ ಸುತ್ತಾಟ, ಗುದ್ದಾಟ, ಬೆದಕಾಟ, ನಮ್ಮನಮ್ಮೊಳಗೆ ಇರುವುದನನುಭವಿಸು ಬರಿ ಅರಸುವುದ ಬಿಡು - ನನ ಕಂದ ||

ಸಮಾನತೆ ಸಾಧ್ಯವೇ?

ಡಿಸೆಂ ೨೯ ಬ್ಲಾಗ್ ೭೬ ವೀಕ್ಷಣೆ

ಸಮಾನತೆ ಎಲ್ಲಿಹುದು ಸೃಷ್ಟಿ ನಿಯಮದಲ್ಲಿ ಸಮಾನತೆ ಎಲ್ಲೆಡೆಯಿರೆ ವೈವಿಧ್ಯತೆಗೆಡೆಯೆಲ್ಲಿ? ಸಮಾನತೆಯ ಸಾಧಿಸೆ ಸೃಷ್ಟಿಯುಳಿವುದಿನ್ನೆಲ್ಲಿ? ಸಮಾನತೆಯನೆಲ್ಲೆಡೆ ಬಯಸಲಾಗದು - ನನ ಕಂದ

ಎಚ್ಚರ

ನವೆಂ ೨೦ ಉಲ್ಲೇಖಗಳು ೭೭೪ ವೀಕ್ಷಣೆ

ಅತ್ಯುತ್ಸಾಹದಿ ಬಲೂನಿನಂತೆ ನೀ ಊದದಿರು ಸೂಚಿಹಿಡಿದು ನಿಂತಿಹರು ನಿನ್ನ ಸುತ್ತುವರಿದು ಸೂಜಿಯಲುಗೊಂದಿಷ್ಟು ತಾಕಿದರು ಸಾಕಷ್ಟೆ ಸಿಡಿದು ಛಿದ್ರಛಿದ್ರವಾಗುವೆ ನೀ - ನನಕಂದ||

ಬೇಡ

ನವೆಂ ೧೧ ಉಲ್ಲೇಖಗಳು ೫೨೩ ವೀಕ್ಷಣೆ

ಸಿಟ್ಟಾಗಿ ಬಂದವನ ಮುಂದೆ ನೀ ನಿಲಲು ಬೇಡ ನಿಷ್ಠೆಯಲಿ ಕೆಲಸಮಾಡುವವರನೆಂದೂ ಕೈ ಬೇಡ ಅರ್ಥ ಮಾಡಿಕೊಳ್ಳದವರ ಜೊತೆ ಸೇರಲು ಬೇಡ ಅನ್ಯಮಾರ್ಗದಲೆಂದು ಹೋಗ ಬೇಡ ನೀ - ನನಕಂದ||

ಅರ್ಥ ತಿಳಿಸಿ ಸುಂದರ ಹೆಸರನ್ನು ಸೂಚಿಸಿ

ನವೆಂ ೦೫ ಬ್ಲಾಗ್ ೨೪೨ ವೀಕ್ಷಣೆ

ರಿಶಿತ್ ಪದದ ಅರ್ಥ ಗೊತ್ತಿದ್ದರೆ ತಿಳಿಸಿ. ನನ್ನ ಗೆಳತಿಯ ಮೊಮ್ಮಗನಿಗೆ `ರಿ` ರಿಂದ ಆರಂಭವಾಗುವ ಒಳ್ಳೆ ಅರ್ಥವಿರುವ ಹೆಸರು ಬೇಕು. ಇದೇ ತಿಂಗಳು 8 ಅಥವಾ 9ನೇ ತಾರೀಕು ನಾಮಕರಣ

ಶುಭಾಶಯ

ನವೆಂ ೦೧ ಬ್ಲಾಗ್ ೪೭ ವೀಕ್ಷಣೆ

ವ್ಯಕ್ತಿತ್ವದಂತೆ ಹಾವ ಭಾವ ನಡೆನುಡಿಯು ಸಂಸ್ಕೃತಿಯಂತೆ ಮನದ ಕಾರ್ಯವೈಖರಿಯು ಆಲೋಚನೆ, ಅವಲೋಕನೆಯಂತೆ ಸಾಧನೆಯು ಸಾಧನಾ ಪಥದಲಿ ಸಾಗು ನೀ-ನನ ಕಂದ ನಮ್ಮ ನಾಡು ಕನ್ನಡ, ನಮ್ಮ ನುಡಿ ಕನ್ನಡ, ನಮ್ಮ ಸಂಸ್ಕೃತಿ ಕನ್ನಡ . ನಮ್ಮ ವ್ಯಕ್ತಿತ್ವ ಅದಕ್ಕನುಗುಣ...

ಚಲೋ ಮಲ್ಲೇಶ್ವರ ೨೧ರ ಜೊತೆಗೆ

ಅಕ್ಟೋ ೩೦ ಬ್ಲಾಗ್ ೧೦೨ ವೀಕ್ಷಣೆ

ಮಲ್ಲೇಶ್ವರಂ 7ನೇ ಅಡ್ಡರಸ್ತೆಲ್ಲಿರು ಪರಿಸರ ಆರ್ಗ್ಯಾನಿಕ್ ಗೆ ಹೋಗೋಣ ಅಂತ ಆಟೋ ಇಳಿತಾ ಇದ್ದೆ. ಆತುರಾತರವಾಗಿ ಗಣೇಶ್ ಓಡ್ತಿರುವುದನ್ನು ನೋಡಿದೆ. ಏನೋ ತೊಂದರೆ ಆಗಿರ ಬೇಕು ಎಂದು ಒಂದು ನಿಮಿಷ ತಡೆಯಪ್ಪ ನಮ್ಮ ಪರಿಚಯದವರು ಏನೋ ತೊಂದರೆಯಲ್ಲಿ ಇರುವ...