ಕಣ್ಣಲೇ ಕರೆಯೋಲೆ
ಹಾರುವ ಹಕ್ಕಿಯ ಗೂಡಲಿ ಬಂಧಿಸೆ ಹಾರುವುದೆಂತದು ಹೊರಗಡೆಗೆ ಹೂವಿನ ದಳಗಳ ಒಳಗಡೆ ಸಿಲುಕಿದ ದುಂಬಿಯು ಬಂಧಿತ ಹೂವೊಳಗೆ ಪ್ರೀತಿಯ ನೋಟದ ಔತಣ ತೊರೆವೆನೆ? ಕಣ್ಣಲೆ ನೀಡುವೆ ಕರೆಯೋಲೆ ಸರಸದ ಸವಿಯಲಿ ಮೈಯನು ಮರೆತಿರೆ ಬಂಧಿತನಾದೆನು ಒಲವಿನಲೆ ಜಗವನು ಮರೆಸ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಹಾರುವ ಹಕ್ಕಿಯ ಗೂಡಲಿ ಬಂಧಿಸೆ ಹಾರುವುದೆಂತದು ಹೊರಗಡೆಗೆ ಹೂವಿನ ದಳಗಳ ಒಳಗಡೆ ಸಿಲುಕಿದ ದುಂಬಿಯು ಬಂಧಿತ ಹೂವೊಳಗೆ ಪ್ರೀತಿಯ ನೋಟದ ಔತಣ ತೊರೆವೆನೆ? ಕಣ್ಣಲೆ ನೀಡುವೆ ಕರೆಯೋಲೆ ಸರಸದ ಸವಿಯಲಿ ಮೈಯನು ಮರೆತಿರೆ ಬಂಧಿತನಾದೆನು ಒಲವಿನಲೆ ಜಗವನು ಮರೆಸ...
ಕಣಕಣದಲ್ಲಿಯು ಬೆರೆತಿಹ ಪ್ರೇಯಸಿ ತನುಮನ ನಿನ್ನನೆ ಆಶಿಸಿದೆ ಸನಿಹಕೆ ಬಂದರೆ ದೂರಕೆ ಸರಿಯುವೆ ಇನಿಯನ ಕಾಡುವೆ ಇದು ಸರಿಯೆ? ನಗುವಿನ ಮೊಗದಲಿ ಗಲ್ಲದ ಈ ಗುಳಿ ಕಚಗುಳಿ ಇಡುತಿದೆ ಮುಂಗುರಳು ತಾರೆಯ ಹೊಳಪಿನ ಸುಂದರ ಕಣ್ಗಳು ಕಾಡುತಲಿರುವುದು ಹಗಲಿರುಳು...
ಮುಂಜಾನೆಯೊಳು ಮಂಜಿನ ಹನಿಗಳು ಸುಂದರ ಬಲೆಯನು ಹೆಣೆದಿರಲು ಚಳಿಯನು ಸುತ್ತಲು ಹರಡಿದೆ ಇಳೆಯೊಳು ತಂಗಾಳಿಯದು ಬೀಸಿರಲು ಹೊನ್ನಿನ ಕಿರಣವ ಚೆಲ್ಲುತ ನೇಸರ ಮೂಡಿದ ಬಾನಿನ ಬಯಲಿನೊಳು ಬಿಸಿಲಿನ ತಾಪಕೆ ಕರಗಿದ ಇಬ್ಬಲಿ ಹೂವಿನ ದಳದಲಿ ಮುತ್ತುಗಳು ನೀಲಿಯ ಗ...
ಎಳೆಯ ಬಾಲೆಯು ಕರದಲಿರುವುದು ಎಳೆಯ ಮಾವಿನ ಮಿಡಿಗಳು ಕಿತ್ತು ತಂದಳೆ,ಹೇಗೆ ದೊರೆಯಿತು ಮಾವು ಮಿಡಿಗಳ ಗೊಂಚಲು ಒಂದು ಮಿಡಿಯನು ಬಾಯಲಿಟ್ಟಳು ಮುದ್ದು ಮುಖದಲಿ ನಗುವಿದೆ ಮುಗ್ಧ ಬಾಲೆಯು ಮಿಡಿಯ ಕಡಿದರೆ ಮೇಣವಿರುವುದು ಅರಿಯದೆ? ಕೊಂಚ ಸೈರಿಸು ಚೂರಿ ಜೊ...
ಮುನಿದಳೇಕೆ ಅರಿಯದಾದೆ ನಲ್ಲೆ ಇಂದು ಈತರ ದಟ್ಟ ಮುಗಿಲ ಪರದೆಯೊಳಗೆ ಉಳಿದ ಹಾಗೆ ಚಂದಿರ ಏನು ಮರೆತೆ ಮೊಗವ ತಿರುವೆ ನೆನಪು ಮನಕೆ ಬಾರದೆ ರಮಿಸಲೆಂತು ಕಾಂತೆ ಇವಳ ಹಾದಿ ಈಗ ತೋಚದೇ ಮೊನ್ನೆ ತಾನೆ ಜನ್ಮ ದಿನಕೆ ಬೆರಳಿಗಿಟ್ಟೆ ಉಂಗುರ ಮದುವೆ ದಿನವು ದೂರ...
ಜಗದ ಒಡೆಯನೆ ರಾಮಚಂದಿರ ಸಿದ್ಧಗೊಂಡಿದೆ ರಾಮಮಂದಿರ ಪ್ರಾಣ ಪ್ರತಿಷ್ಠೆಯ ಕ್ಷಣವು ಸುಂದರ ನೋಡಿ ಧನ್ಯತೆ ಪಡೆವ ಕಾತರ ನೆಲೆಸಿ ಭಕ್ತರ ಹೃದಯ ಮಂದಿರ ಕೇಳಿ ಬರುತಿದೆ ನಾಮದಿಂಚರ ರಾಮ ನಾಮದ ಘೋಷ ಸುಸ್ವರ ಮೇರೆ ಮೀರಿದ ಪುಳಕದಾತುರ ಎನಿತು ಪುಣ್ಯವ ಪಡೆದ ದ...
ಬೆವರಿನ ಹನಿಗಳು ಮೂಡಿತೆ ತನುವಲಿ ಇನಿಯನ ಸರಸದ ದೆಸೆಯಿಂದ ನಿನ್ನಯ ಸುಂದರ ನಗುವನು ನೋಡುಲು ಮನದಲಿ ಉಕ್ಕಿದೆ ಆನಂದ ಗಿಡದಲಿ ಅರಳಿದ ಹೂವಿನ ಸೊಬಗಿದು ನೋಡಲು ಕಣ್ಣಿಗೆ ಬಲು ಚಂದ ಹೂವಿನ ಎದೆಯಲಿ ತುಂಬಿದ ಜೇನಿದೆ ದುಂಬಿಗೆ ಔತಣ ಮಕರಂದ ಘಮಘಮ ಪರಿಮಳ ಹ...
ಹಳದಿಯ ಕದವನು ಮೆಲ್ಲಗೆ ಸರಿಸುತ ಇಣುಕುವ ಸುಂದರಿ ನೀನ್ಯಾರೆ ನಲ್ಲನು ಬರುವನೆ ಸೇರಲು ನಿನ್ನನು ಲಜ್ಜೆಯ ತೊರೆಯುತ ನೀ ಬಾರೆ ಬಿರಿದಿಹ ಕ್ಷಣದಲೆ ಸರಸದ ಬಯಕೆಯೆ ಏತಕೆ ಈತರ ವೈಯಾರ ಕೊಂಚವೆ ಸೈರಿಸು ಆತುರ ಸಲ್ಲದು ಅರಸುತ ಬರುವನು ಸರದಾರ ನೆತ್ತರ ಕೆಂಪ...
ನಂದನ ಕಂದನ ಚಂದವ ಕಾಣಲು ಕಣ್ಣುಗಳೆರಡು ಸಾಲದಿದೆ ಹೊಳೆಯುವ ನಯನವು ಮಿನುಗುವ ತಾರೆಯೊ ಅಧರದಿ ಮೂಡಿದೆ ತುಂಟನಗೆ ಕೊರಳಲಿ ಕೌಸ್ತುಭ ಹಾರವ ಧರಿಸಿದ ಮುರಳಿಯ ಹಿಡಿದಿಹ ಕರದಲ್ಲಿ ಭಕ್ತರಿಗೀತರ ದರ್ಶನವೀಯಲು ಸೇರಿದನೇನೂ ನಭದಲ್ಲಿ? ಕೃಷ್ಣನು ಜೀಕಲು ಬಯಸಿ...
ದೂರನು ತಂದರು ನಾರೀ ಮಣಿಗಳು ಕೇಳುತ ಸುಮ್ಮನೆ ಹೇಗಿರಲಿ ಅವರುಗಳೆದುರಲಿ ನಿನ್ನನು ಬೈದೆನು ಮುನಿಸನು ಕಳೆಯುವ ನಿಟ್ಟಿನಲಿ ನನ್ನಯ ಮುದ್ದಿನ ಕಂದನ ಜರೆವೆನೆ ಅರಿಯೆಯ ಮಾತೆಯ ಮನಸನ್ನು ಮುನಿಸನು ತೊರೆಯುತ ನಸುನಗು ಹೊಮ್ಮಲಿ ಈತರ ಕೋಪವು ಸಾಕಿನ್ನು ಮಡಿ...
ಎಂಥ ಚಂದ ಕ್ಷೇತ್ರವಿಲ್ಲಿ ಎನಿತು ಸುಂದರ ಮರೆತು ಹೋದೆ ನನ್ನ ನಾನೆ ಶಿಶಿಲೇಶ್ವರ||ಪ|| ಪುಣ್ಯನಾಡು ಹರನು ಇಲ್ಲಿ ಆಗಿ ಉದ್ಭವ ನಂಬಿದವರ ಬಿಡದೆ ಪೊರೆವ ಶಿಶಿಲೇಶ್ವರ ಭಕ್ತಿಯಲ್ಲಿ ಬರುವ ಮಂದಿ ಅರುಹೆ ಕಷ್ಟವ ಕಳೆದುಬಿಡುವ ಒಲವಿನಿಂದ ದೇವ ಈಶ್ವರ|| ಕಪ...
ಕೆಲವೊಮ್ಮೆ ಅನಿಸುವುದು ನಿನಗೆಷ್ಟು ಕರವೋ ಏಕ ಕಾಲಕ್ಕೆ ಅದೆಷ್ಟು ಕಾರ್ಯ ನೀ ಮುಗಿಸಿಬಿಡುವೆ ಕೆಲವೊಮ್ಮೆ ಅನಿಸುವುದು ನಿನಗೆಷ್ಟು ಸಹನೆ ಒತ್ತಡದ ನಡುವಲ್ಲಿಯೂ ನೀ ಶಾಂತ ವದನೆ ಕೆಲವೊಮ್ಮೆ ಅನಿಸುವುದು ನೀನೊಂದು ಯಂತ್ರ ಕೆಲಸ ಮುಗಿಸುವುದೇ ನಿನ್ನೊಳಗ...