ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪೆರ್ಮುಖ ಸುಬ್ರಹ್ಮಣ್ಯ ಭಟ್ 
ಪ

ಪೆರ್ಮುಖ ಸುಬ್ರಹ್ಮಣ್ಯ ಭಟ್ 

೧೮೩ ಲೇಖನಗಳು ೯,೯೫೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹರಿಲೀಲೆ

ಮಾರ್ಚ್ ೦೭ ಕವನ ೫೩ ವೀಕ್ಷಣೆ

ನಂದನ ಕಂದನ ಚಂದವ ಕಾಣಲು ಕಣ್ಣುಗಳೆರಡು ಸಾಲದಿದೆ ಹೊಳೆಯುವ ನಯನವು ಮಿನುಗುವ ತಾರೆಯೊ ಅಧರದಿ ಮೂಡಿದೆ ತುಂಟನಗೆ ಕೊರಳಲಿ ಕೌಸ್ತುಭ ಹಾರವ ಧರಿಸಿದ ಮುರಳಿಯ ಹಿಡಿದಿಹ ಕರದಲ್ಲಿ ಭಕ್ತರಿಗೀತರ ದರ್ಶನವೀಯಲು ಸೇರಿದನೇನೂ ನಭದಲ್ಲಿ? ಕೃಷ್ಣನು ಜೀಕಲು ಬಯಸಿ...

ಬರ್ತಾನೇನು ನೋಡಾಕ...?

ಮಾರ್ಚ್ ೦೫ ಕವನ ೪೪ ವೀಕ್ಷಣೆ

ಬೇಯ್ಲೀಕೇನು ಇಟ್ಟೇಯವ್ವ ಒಲೆಯ ಮ್ಯಾಗೆ ಅಕ್ಕೀ ತುಂಬಿ ಇಟ್ಟೇಯೇನು ಪಾತ್ರೇನಾಗೆ ಊಟಕ್ಕೆಂದು ಬಂದಾರೇನು ಹಸಿವಿನಾಗೆ ತಟ್ಟೇ ಇಟ್ಕೊಂಡ್ ಕೂತವ್ರೇನು ಸಾಲಿನಾಗೆ ಸೌದೆ ತುಂಡು ಇಟ್ಟೇಯಲ್ಲ ಒಲೆಯ ಒಳಗೆ ಏನು ಯೋಚ್ನೆ, ಉರಿಯ ಹಚ್ಚು ಉರಿಸು ಕಟ್ಗೆ ರೇಷ್ಮ...

ಸುಂದರ ಸಂಜೆ

ಮಾರ್ಚ್ ೦೨ ಕವನ ೪೦ ವೀಕ್ಷಣೆ

ಅಪರೂಪದ ಅತಿ ಸುಂದರ ಹಿತವಾಗಿದೆ ಈ ಸಂಜೆ ಜೊತೆಯಾಗಿಯೆ ಇರೆ ಪ್ರೇಯಸಿ ಅದ ನೋಡುತ ನಾ ನಿಂದೆ||ಪ|| ಹೊನ್ನಿನ ಬಣ್ಣದ ಸೆರಗನು ಚಾಚಿದೆ ಶರಧಿಯು ಸೂರ್ಯನ ಸ್ವಾಗತಕೆ ಕಡಲಿಗೆ ಒಲಿಯುತ ನೇಸರ ಇಳಿದರೆ ಅಗಲಿಕೆ ಚಿಂತೆಯು ಆಗಸಕೆ ಚಿಲಿಪಿಲಿಗುಟ್ಟುವ ಹಕ್ಕಿಗ...

ಬೆತ್ತಲಾದ ಮರ

ಫೆಬ್ರ ೨೮ ಕವನ ೬೫ ವೀಕ್ಷಣೆ

ಸುತ್ತಮುತ್ತ ನೀರನೀಡೆ ಹೊಳೆಯು ಒಂದು ಹರಿದಿದೆ ದೊಡ್ಡ ಮರದ ರೆಂಬೆ ಕೊಂಬೆ ಹೊಳೆಯ ಬದಿಗೆ ಚಾಚಿದೆ ವೃಕ್ಷ ತನ್ನ ತಲೆಯನೆತ್ತಿ ನೀರಿಗಾಗಿ ಅರಸಿದೆ ಜಲದ ಕಡೆಗೆ ಬೇರು ಸರಿಯೆ ಗುರುತು ಹಾಕಿ ಕೊಟ್ಟಿತೇ? ಮರವು ಪೂರ್ತಿ ಎಲೆಗಳಿರದೆ ಕಾಣುತಿಹುದು ಬೆತ್ತಲ...

ಭರವಸೆಯ ಬೆಳಕಲ್ಲಿ…

ಫೆಬ್ರ ೨೫ ಕವನ ೪೨ ವೀಕ್ಷಣೆ

ದೇಗುಲದ ಎದುರಲ್ಲೆ ಬಾಗಿಹಳು ಕುಳಿತಲ್ಲೆ ಸಾಗಿಸಲು ಬಡತನದ ಬದುಕಿಗಾಗಿ ಹೆಣೆದು ಮಾಲೆಯ ಮಾಡಿ ದಣಿದು ವದನವು ಬಾಡಿ ಮಣಿಸಿ ಬಿಟ್ಟಿಹುದವಳ ತುತ್ತಿಗಾಗಿ ಸಿರಿಯ ಜೊತೆಯಲಿ ಮೆರೆವ ಗುರಿಯು ಆಕೆಯದಲ್ಲ ಭರವಸೆಯ ಕಿರಣವಿದೆ ಬೆನ್ನಹಿಂದೆ ಸದ್ದು ಗದ್ದಲ ಮರೆ...

ಕಂಪು ಸೂಸುವ ಕೆಂಪು ತಟ್ಟೆ

ಫೆಬ್ರ ೨೩ ಕವನ ೫೦ ವೀಕ್ಷಣೆ

ತಂಪು ಜಾಗದಲಿಂತು ಕೆಂಪು ಹವಳದ ತಟ್ಟೆ ಕಂಪು ಸೂಸುತಲಿಹುದು ಯಾರದೆಂದೆ ಹಳದಿ ಮುತ್ತಿದು ಚಂದ ಬಳಿಗೆ ಬಂದಿದೆ ಭೃಂಗ ಬೆಳೆದ ಗಿಡದಲಿ ಹೂವು ಅರಿತುಕೊಂಡೆ ಹಸಿರಿನೆಲೆಗಳ ಗಿಡವು ಬಸಿರಿನಂತಿದೆ ಮೊಗ್ಗು ಕುಸುಮವರಳಿದೆ ಕೆಲವು ಮನವ ಸೆಳೆಯೆ ನಸುಕು ಸರಿಯು...

ನಿರೀಕ್ಷೆಯಲ್ಲಿ....

ಫೆಬ್ರ ೨೨ ಕವನ ೫೧ ವೀಕ್ಷಣೆ

ಕುಳಿತಿಹ ಕಡೆಯಲಿ ಕುಳಿತಿರಲಾಗದೆ ಇಳಿದಿಹೆ ನೆನೆಯಲು ಮಳೆಯೊಳಗೆ ಮಳೆಹನಿ ನೆನೆಸಿದೆ ಚಳಿಯನು ತಾರದೆ ಕಳೆದಿದೆ ಬೇಗುದಿ ನನ್ನೊಳಗೆ ಇನಿಯನು ಬರುವನು ಮನವಿದು ಕಾದಿದೆ ಕನಸಿನ ಚಿಲುಮೆಯು ಉಕ್ಕಲಿದೆ ತನುಮನ ಬೆಸೆಯಲು ದಿನಗಳೆ ಕಾದಿಹೆ ಜನುಮದ ಜೋಡಿಯು ಸ...

ತಂದೆ ಮಕ್ಕಳ ಮಿಲನ

ಫೆಬ್ರ ೨೧ ಕವನ ೪೭ ವೀಕ್ಷಣೆ

ದಿಟ್ಟ ತನದಲಿ ಹಯವ ಬಂಧಿಸಿ ಕಟ್ಟಿ ಛಲದಲಿ ಸಮರಕೆಳಸಿದ ಪುಟ್ಟ ಬಾಲರ ಕಂಡು ಭ್ರಮಿತನು ದೇವ ಶ್ರೀರಾಮ ಸಿಟ್ಟುಗೊಳ್ಳದೆ ನುಡಿದನವರಲಿ ಕೆಟ್ಟ ಹಟವನು ತೊರೆದು ಮೊದಲಲಿ ಬಿಟ್ಟು ಕಳುಹಿರಿ ಯಜ್ಞ ಕುದುರೆಯ, ಬೇಡ ಸಂಗ್ರಾಮ ಇಂತು ಲವ ಕುಶರಲ್ಲಿ ಮಮತೆಯು ಬಂ...

ಭ್ರಮಿಸಿದನೆ ಚಂದ್ರಮ

ಫೆಬ್ರ ೧೯ ಕವನ ೪೩ ವೀಕ್ಷಣೆ

ಭಾನು ಪಡುವಣ ಕಡಲಿಗಿಳಿದಿರೆ ಬಾನಿಗೇರಿದ ಚಂದ್ರಮ ತಾನು ರಾತ್ರಿಯ ರಾಜನೆನ್ನುತ ಜಾಣನೆನ್ನುವ ಸಂಭ್ರಮ ಗಿಡದ ಮೊಗ್ಗನು ನೋಡಿ ಚಂದಿರ ತಡೆಯಲಾರದೆ ಹೋದನೆ ಹಿಡಿವ ಬಯಕೆಯು ಮೂಡಿ ಮನದಲಿ ಕಡೆಗೆ ಚುಂಬಿಸೆ ಬಂದನೆ? ತನ್ನ ಪ್ರೇಯಸಿ ಹೂವು ನೈದಿಲೆ- -ಯನ್ನು...

ಮಾತೆಯೇಕೆ ಮುನಿದಳು?

ಫೆಬ್ರ ೧೮ ಕವನ ೩೩ ವೀಕ್ಷಣೆ

ವಿಷದ ಹಾವಿನ ಜೊತೆಯಲಾಡುವೆ ಕುಸಿದು ಹೋದೆನು ನೋಡಿ ಭಯದಲಿ ಮಸೆದು ಹಲ್ಲನು ಜರೆದು ಹರಿಯನು ಮಾತೆ ರೋಷದಲಿ ಹಸಿವೆಗೆನ್ನುತ ನನ್ನ ಕೇಳದೆ ಮೊಸರು ಗಡಿಗೆಯನೆತ್ತಿಕೊಳ್ಳುವೆ ತುಸುವೆ ಬೆಣ್ಣೆಯನರಸಿ ಗಡಿಗೆಯನೊಡೆದೆ ನೋಡಲ್ಲಿ|| ಕರುಣೆಯಿಲ್ಲದ ದನುಜ ಕಾಡಿ...

ಬೆಟ್ಟದ ತುದಿಯಲಿ ಪುಟ್ಟ ಮರ

ಫೆಬ್ರ ೧೬ ಕವನ ೭೪ ವೀಕ್ಷಣೆ

ಅರಸಿನ ಪುಡಿಯನು ಬೆರೆಸುತ ಜಲದಲಿ ಕರದಲಿ ಉಂಡೆಯ ಮಾಡಿದರೆ? ತರುವಿನ ಕೊಂಬೆಗೆ ಮಾಡಿದ ಉಂಡೆಯ ಸರದಿಯಲಂಟಿಸಿ ಇಟ್ಟಿಹರೇ? ಬೆಟ್ಟದ ತುದಿಯಲಿ ಎತ್ತರ ಜಾಗದಿ ಹುಟ್ಟಿದೆ ಗಿಡವಿದು ಚಂದದಲಿ ಕೊಟ್ಟವರಾರದು ಬದುಕಲು ಜಲವನು ಕಟ್ಟೆಯ ಕಟ್ಟಿದರಾರಲ್ಲಿ ಏಣಿಯ...

ಕರ ಮುಗಿವೆ...

ಫೆಬ್ರ ೧೩ ಕವನ ೫೯ ವೀಕ್ಷಣೆ

ಬಿರಿದಿಹ ತಾವರೆಯಂದದ ಮೊಗವು ಅರಳಿದೆ ಮೊಗದಲಿ ಸುಂದರ ನಗುವು ಹುಬ್ಬಲಿ ಕುಳಿತಿದೆ ಕಾಮನ ಬಿಲ್ಲು ಗಲ್ಲವ ಸವರುವ ಆ ಮುಂಗುರುಳು|| ಹೆಣೆದಿಹ ತುರುಬಲಿ ಮಲ್ಲಿಗೆ ಹೂವು ಸುತ್ತಲು ಹರಡಿದೆ ಮಲ್ಲೆಯ ಘಮವು ಮುತ್ತಿನ ಸರವನು ಹೊತ್ತಿಹ ಕೊರಳು ಉಂಗುರ ತೋರಿದ...