ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪೆರ್ಮುಖ ಸುಬ್ರಹ್ಮಣ್ಯ ಭಟ್ 
ಪ

ಪೆರ್ಮುಖ ಸುಬ್ರಹ್ಮಣ್ಯ ಭಟ್ 

೧೮೩ ಲೇಖನಗಳು ೯,೯೫೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ದೊರೆಯಲಿ ಪ್ರೋತ್ಸಾಹ

ಸೆಪ್ಟೆಂ ೧೫ ಕವನ ೫೭ ವೀಕ್ಷಣೆ

ತವಕವು ತುಂಬಿದ ಮನದಲಿ ಬರೆಯುವ ಕವನವನೋದುವ ಜನರಿಲ್ಲ ಕವಿಮನ ಕಲ್ಪಿಸಿ ಬರಹಕೆ ಇಳಿಸಿದ ಕವಿತೆಯ ಓದುವ ಮನವಿಲ್ಲ ಕರದಲಿ ಹಿಡಿಯುತ ಪುಸ್ತಕ ಲೇಖನಿ ಬರಹವು ಅರ್ಧದೆ ಅದು ನಿಂತು ಭರವಸೆ ತೊರೆಯುತ ಬರೆವುದ ಮರೆತರೆ ಗುರಿಯನು ತಲಪುವ ಬಗೆಯೆಂತು ಬಿಸಿಲಿನ...

ಬಣ್ಣಿಸಲಾಗದು ನನಗೆ

ಸೆಪ್ಟೆಂ ೦೬ ಕವನ ೬೪ ವೀಕ್ಷಣೆ

ಒಂದೇ ಬಳ್ಳಿಯಲರಳಿದ ಹೂಗಳು ಒಂದೆಡೆ ಸೇರಿದ ಖುಷಿಗೆ ಅಂದದ ನಸುನಗು ಹೊಮ್ಮಿದೆ ಮೊಗದಲಿ ಚಂದದೆ ನಿಂತರು ನುಡಿಗೆ ನೀಲಿಯ ಬಣ್ಣದ ಸೀರೆಯನುಟ್ಟರು ಹೋಲುವ ಬಣ್ಣದ ರವಿಕೆ ಬಾಲೆಯರೀರ್ವರ ಶಿರದಲಿ ಗಿಳಿಗಳು ನೀಲಿಯ ವರ್ಣವು ಅವಕೆ ಹಿರಿಯಳು ಚಂದದಿ ಬಾಚಿದ ತ...

ಮತಿಯಲಿ ಹುರುಪಿರಲಿ

ಸೆಪ್ಟೆಂ ೦೨ ಕವನ ೭೦ ವೀಕ್ಷಣೆ

ಶತಕದ ಪರಿಧಿಯ ಮಿತಿಯನು ನೆನೆಯದೆ ಮತಿಯಲಿ ಯೌವನ ಹುರುಪಿನಲಿ ಸತಿಯನು ನಗಿಸುತ ಪತಿಯವ ನಿಂತಿಹ ಚ್ಯುತಿಯನು ತಾರದೆ ಒಲವಿನಲಿ ಹಿಂದಿನ ಬದುಕಿನ ಸುಂದರ ಕ್ಷಣಗಳ ಚಂದವ ಬಣ್ಣಿಸಿ ಪತಿರಾಯ ಬಂಧದ ಖುಷಿಯನು ಹೊಂದುತ ಮಡದಿಯು ಕುಂದದೆ ಬೀರಲು ನಸುನಗೆಯ ಗಂಡನ...

ಜಗಕೆ ಮಾದರಿ

ಸೆಪ್ಟೆಂ ೦೨ ಲೇಖನ ೫೭ ವೀಕ್ಷಣೆ

ಕೇಳು ನಮ್ಮ ಚಿಂತೆಯನ್ನು ನಂದನರಸಿ ಯಶೋದೆ ದೂರು ಕೊಡಲು ಬಂದೆವಿಂದು ಕೃಷ್ಣನಾಟ ತಾಳದೆ ಮುದ್ದೆ ಬೆಣ್ಣೆ ಕದ್ದ ಕೃಷ್ಣ ಅದನು ಮೆದ್ದುದಲ್ಲದೆ ಮೊಸರು ಗಡಿಗೆ ಒಡೆದನಿಂದು ಮೊಸರು ಪೂರ್ತಿ ಚೆಲ್ಲಿದೆ ನಗುವೆಯೇಕೆ ರಾಣಿ ನೀನು ನಾವು ದೂರು ನೀಡಿರೆ ಕಳ್ಳ...

ಜ್ಯೋತಿ ಸ್ವರೂಪ

ಆಗಸ್ಟ್ ೩೧ ಕವನ ೧೧೨ ವೀಕ್ಷಣೆ

ಶರಣು ಹರಿಹರ ತನಯಾ ಮಣಿಕಂಠ ಜ್ಯೋತಿ ಸ್ವರೂಪ ಕಲಿಯುಗ ವರದಾ ದಯೆ ತೋರೋ ಅಯ್ಯಪ್ಪ ಕಾಯೊ ತಂದೆ ನಾ ನಿನ್ನ ನೋಡಲೆಂದೆ ಇರುಮುಡಿಯ ಹೊತ್ತು ಬಂದೆ ಬೇಡಿ ದರ್ಶನ ||ಅಯ್ಯಪ್ಪ|| ಉದಯದಲ್ಲಿ ಎದ್ದು ಬೇಗ ಶುದ್ಧನಾಗುವೆ ಅನ್ನದಾನ ಪ್ರಭುವೆ ನಿನ್ನ ನಿತ್ಯ ನೆನ...

ಸಿರಿದೇವತೆಗೆ ಸುಪ್ರಭಾತ

ಆಗಸ್ಟ್ ೨೯ ಕವನ ೧೧೬ ವೀಕ್ಷಣೆ

ಹಾಲಿನ ಕಡಲಿನ ಮಥನದ ವೇಳೆ ಭಾಗ್ಯದ ದೇವತೆ ಉದಿಸಿದೆಯಂತೆ ಜಗದೋದ್ದಾರಕ ಶ್ರೀ ಹರಿ ಹೃದಯದೆ ಒಲವಲಿ ನೀನು ನೆಲೆಸಿದೆಯಂತೆ ತಾವರೆ ಹೂವನು ಕರದಲಿ ಹಿಡಿದು ಪೂಜಿಸೆ ನಿಂತರು ಭಕ್ತರು ಬಂದು ಮಾತೆಗೆ ಬಯಸುತ ಸುಪ್ರಭಾತಾ ಒಲವಲಿ ನೋಡೆಯ ಭಕ್ತಜನರತ್ತ ಕೋಗಿಲ...

ಹೇಗೆ ಸುಮ್ಮನಿರಲಿ?

ಆಗಸ್ಟ್ ೨೭ ಕವನ ೬೨ ವೀಕ್ಷಣೆ

ಮೇಘವರ್ಣನೆ ಏಕೆ ಈತರ ಕಾಡುತಿರುವೆಯೊ ಕಂದನೇ ನಾರಿಮಣಿಗಳು ದೂರು ತಂದಿರೆ ಹೇಗೆ ಇರುವುದು ಸುಮ್ಮನೆ ಗಡಿಗೆ ಒಡೆಯುವೆ ಬೆಣ್ಣೆ ಕದಿಯುವೆ ಎಂಬ ಮಾತನು ನುಡಿವರು ಜಳಕಕಿಳಿದಿರೆ ತರುಣಿ ನದಿಯಲಿ ಸೀರೆ ಕದಿಯುವೆ ಎನುವರು ವಿಷದ ಉರಗವ ಹಿಡಿದು ಬಾಗಿಸಿ ಶಿರ...

ಗೆಳೆಯರ ಗುಂಪು

ಆಗಸ್ಟ್ ೨೬ ಕವನ ೬೨ ವೀಕ್ಷಣೆ

ಹಗಲಿರುಳೆನ್ನದೆ ಸುರಿದಿಹ ಮಳೆಯದು ಈದಿನ ಏತಕೊ ಸುರಿದಿಲ್ಲ ಆಡುವ ವಯಸ್ಸಿನ ಚಿಣ್ಣರ ಮನದಲಿ ಆಡುವ ಆಸೆಗೆ ಕೊನೆಯಿಲ್ಲ ವಾರದ ನಂತರ ಒಟ್ಟಿಗೆ ಸೇರಿತು ಗೆಳೆಯರ ಗುಂಪದು ಸಂತಸದಿ ಊರಿನ ನಡುವಿನ ಬಯಲಿಗೆ ಬಂದರು ತೊಡಗಿದರಾಟಕೆ ಖುಷಿಯಲ್ಲಿ ಬಾನಿನ ಸೂರ್ಯ...

ಎಷ್ಟು ಗಳಿಸಿದರೇನು?

ಆಗಸ್ಟ್ ೨೬ ಕವನ ೬೦ ವೀಕ್ಷಣೆ

ಇವನು ಭೃಷ್ಟ ಎನುವನಾತ ಅವನು ಭೃಷ್ಟ ಎನುವನೀತ ಯಾರ ಮಾತು ಸತ್ಯವೆಂದು ಅರಿಯದಾಗಿದೆ ಇಬ್ಬರಲ್ಲು ಹುಳುಕು ಇದ್ದು ಹೊಡೆದುದೆಲ್ಲ ಜನರ ದುಡ್ಡು ಯಾರು ಎಷ್ಟು ಹೊಡೆದರೆಂದು ಅರಿಯಬೇಕಿದೆ ಮುಷ್ಟಿಯೊಳಗೆ ಗುಟ್ಟನಿಟ್ಟು ವೈರಿಕಡೆಗೆ ನೋಟ ನೆಟ್ಟು ತನ್ನ ಹೊಲ...

ನೀನುಳಿದೆ ಬದಲದೇ...

ಆಗಸ್ಟ್ ೨೪ ಕವನ ೭೧ ವೀಕ್ಷಣೆ

ಕಪ್ಪು ಬಿಳುಪಿನ ಕಾಲ ಸಂದಿದೆ ಈಗ ಬಣ್ಣದ ಜಗವಿದು ನೀನು ಏತಕೆ ರೂಪ ಬದಲದೆ ಹಿಂದಿನಂತೆಯೆ ಉಳಿದುದು ಹೊಸತು ಕಂಡರೆ ಹಳತು ಮೂಲೆಗೆ ಸರಿಸಿ ಬಿಡುವರು ಈ ಜನ ಸೊಗಸಿನೆಲ್ಲವು ತನ್ನದೆನ್ನುತ ಬಳಸಿ ಎಸೆಯುವ ದುರ್ಗುಣ ನಿನ್ನ ಸ್ವಂತಿಕೆ ಉಳಿಸಿಕೊಂಡಿಹೆ ಅದು...

ದಡದಿ ನಿಂತಳೇತಕೆ?

ಆಗಸ್ಟ್ ೨೨ ಕವನ ೭೩ ವೀಕ್ಷಣೆ

ನಸುಕಿನಲ್ಲಿ ಮುಸುಕನೆಳೆದು ಖುಷಿಯ ನಿದ್ರೆ ಮಾಡದೆ ಬಿಸಿಲು ತರುವ ಬಿಸಿಗೆ ಬೆದರಿ ನಿಶೆಯಲೆದ್ದು ಬಂದಳೆ ಕೊಡವನೊಂದು ನಡುವಲಿಟ್ಟು ನಡೆದಳಾಕೆ ನೀರಿಗೆ ಕುಡಿವ ಜಲವ ಕೊಡದಿ ತುಂಬಿ ದಡದಿ ನಿಂತಳೇತಕೆ ಕೊಳದಲಿಳಿದು ಜಳಕ ಗೈದು ಬಳುಕುತಿರುವ ಬಾಲೆಗೆ ಗೆಳ...

ಧನಿಕರಿಗೆ ಸೀಮಿತವೇ ?

ಆಗಸ್ಟ್ ೨೨ ಕವನ ೭೪ ವೀಕ್ಷಣೆ

ನಗುವೆಂಬ ಸಿರಿಯೊಂದು ಮೊಗದಲ್ಲಿ ಮೂಡಿಹುದು ಸೊಗಸಾದ ನೋಟವಿದು ಕಣ್ಣಮುಂದೆ ಹಗಲಲ್ಲಿ ದುಡಿಮೆಯಲಿ ಮಗುವ ಮುದ್ದಿಸೆ ಬಿಡನು ಬಿಗುಮಾನದೆಜಮಾನ ಬೆನ್ನ ಹಿಂದೆ ಹಸಿವನ್ನು ನೀಗಿಸಲು ಬಿಸಿಲಲ್ಲಿ ದುಡಿವವಳು ವಸುಧೆಯಂತೆಯೆ ನಾರಿ ಶಾಂತ ಮೂರ್ತಿ ಬಸವಳಿದ ದೇಹ...