ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪೆರ್ಮುಖ ಸುಬ್ರಹ್ಮಣ್ಯ ಭಟ್ 
ಪ

ಪೆರ್ಮುಖ ಸುಬ್ರಹ್ಮಣ್ಯ ಭಟ್ 

೧೮೩ ಲೇಖನಗಳು ೯,೯೫೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮರವಂತೆ

ಆಗಸ್ಟ್ ೦೧ ಕವನ ೬೦ ವೀಕ್ಷಣೆ

ಬಿರುಮಳೆ ಸುರಿದರೆ ನದಿಗಳಿಗೌತಣ ತುಂಬುತ ಹರಿವವು ಮೈಮರೆತು ಮಣ್ಣದು ಮಿಶ್ರಿತ ಕೆಂಪಿನ ಜಲವಿದು ನೋಡಲು ಭಯವನು ತರಿಸಿತ್ತು ಅಡೆತಡೆ ಇಲ್ಲದೆ ಹರಿವವು ರಭಸದಿ ಆತುರ ಕಡಲಿನ ಸಂಗಮಕೆ ಕಲುಷಿತ ನೀರನು ಒಲ್ಲದ ಸಾಗರ ತಡೆಯನು ನೀಡಿತು ಸಂಭ್ರಮಕೆ ಕಡಲಿನ ಅಲ...

ವಿಧಿಗೇಕೆ ಕೋಪ?

ಜುಲೈ ೩೦ ಕವನ ೯೭ ವೀಕ್ಷಣೆ

ತಂದೆಯ ಅಗಲಿಕೆ ತಂದಿತು ಸಂಕಟ ಹರಿಸಿತು ಬಳಗದಿ ಕಣ್ಣೀರಾ ಉದರದ ಪೋಷಣೆ ತಾಯಿಯ ಹೆಗಲಿಗೆ ಬಡತನದಲ್ಲಿದೆ ಸಂಸಾರ ಅನುದಿನ ಮೊಗ್ಗನು ಆರಿಸಿ ತರುವಳು ಮಲ್ಲಿಗೆ ಮಾಲೆಯ ಹೆಣೆಯುವಳು ಪಟ್ಟಣಕೊಯ್ಯುತ ಮಾರಲು ಮಾಲೆಯ ಕಂದನ ಕರದಲಿ ನೀಡುವಳು ದೇವರ ಪೂಜೆಗೆ, ನ...

ತ್ಯಾಗ ಕಾಣದು

ಜುಲೈ ೩೦ ಕವನ ೧೦೮ ವೀಕ್ಷಣೆ

ಕಾಗೆ ಕಟ್ಟಿದ ಗೂಡನರಸುತ ಹಾರಿ ಬಂದಿತು ಕೋಗಿಲೆ ಕಾಗೆ ಇರಿಸಿದ ಮೊಟ್ಟೆ ಜೊತೆಯಲಿ ತನ್ನದಿರಿಸಿತು ಆಗಲೆ ನಡೆಸಿ ಕೋಗಿಲೆ ತಂತ್ರಗಾರಿಕೆ ಅರಿಯದಾಯಿತು ಕಾಗೆಗೆ ಕಾವು ಕೊಟ್ಟಿತು ಮರಿಯ ಮಾಡಿತು ತುತ್ತನಿತ್ತಿತು ಜೊತೆಯಲೆ ರೆಕ್ಕೆ ಬಲಿಯಲು ಪಿಕದ ಮರಿಗಳ...

ಕನಿಕರಿಸು ಭಗವಂತ

ಜುಲೈ ೨೯ ಕವನ ೧೧೦ ವೀಕ್ಷಣೆ

ಕಟ್ಟಿಹರೆ ಅಣೆಕಟ್ಟು ಆಕಾಶದೊಡಲಲ್ಲಿ ಬಿಟ್ಟಿಹರೆ ಕೆಲವೊಂದು ತೂಬು ತೆಗೆದು ಕೆಲವೊಂದು ಜಾಗದಲಿ ಅತಿವೃಷ್ಟಿ ಯಾಗುತಿದೆ ಸಿಲುಕಿಹರು ಕೆಲಮಂದಿ ಗುಡ್ಡ ಕುಸಿದು ಭಗವಂತ ಅರಿತಿರುವ ಮಾನವನು ಬಿಡಲಾರ ಜಲಕಾಗಿ ಅರಸುವನು ಭೂಮಿ ಬಗೆದು ಬುವಿಯೊಡಲು ಬರಿದಾಗಿ...

ಏಕದಂತ

ಜುಲೈ ೨೬ ಕವನ ೫೭ ವೀಕ್ಷಣೆ

ದೇವ ಗಣಪತಿ ನೀಡು ಸನ್ಮತಿ ಚರಣಕೆರಗುವೆ ಅನುದಿನ ಗಿರಿಜೆ ತನಯಗೆ ಮಂಗಳಾರತಿ ಬೆಳಗಿ ಪೂಜಿಪೆ ದೇವನ ಸುಮುಖ ಗಣಪನ ಉದರ ನೋಡುತ ನಕ್ಕ ಅಣಕಿಸಿ ಚಂದ್ರನು ಅವನ ಕುಹಕದ ಚೇಷ್ಟೆ ಸಹಿಸದೆ ರೋಷಗೊಂಡನು ಗಣಪನು ದಂತ ಒಂದನು ಎಸೆದ ಚಂದ್ರಗೆ ಸಹಿಸಲಾಗದ ರೋಷಕೆ ಚ...

ನಿಷ್ಕಳಂಕ ಮಹಾದೇವ

ಜುಲೈ ೨೫ ಕವನ ೫೧ ವೀಕ್ಷಣೆ

ಪಾಂಡು ಪುತ್ರರು ಸಮರಕಣದಲಿ ತೋರಿ ತಮ್ಮಯ ಶೌರ್ಯವ ಗೆದ್ದು ಯುದ್ಧವ ಕಾರ್ಯ ಮುಗಿಸಲು ನೆರವನಿತ್ತನು ಕೇಶವ ಬಂಧು ಬಾಂಧವರೊಡನೆ ಗುರುಗಳು ಅಳಿದು ಹೋದರು ಸಮರದಿ ಪಾಂಡು ಪುತ್ರರ ಬೆನ್ನಿಗಂಟಿತು ಕೊಂದ ದೋಷದ ಬೇಗುದಿ ಪಾಪ ಕಳೆಯಲು ಹರಿಯ ಬೇಡಲು ದೇವನಿತ್...

ಉಳಿಸು ನಿನ್ನುಸಿರಿಗಾಗಿ...

ಜುಲೈ ೨೧ ಕವನ ೪೯ ವೀಕ್ಷಣೆ

ಅಳಿದಿರುವೆ ನಾನೆಂದು ನೀನಂದುಕೊಂಡಿರುವೆ ಉಳಿದಿಹುದು ಜೀವವಿದು ಕೊಂಚ ಬುಡದಲ್ಲಿ ಉಸಿರಿರಲು ನನ್ನಲ್ಲಿ ಕುಳಿತಿರೆನು ಬರಿಗೈಲಿ ಬಸಿರನ್ನು ಹೊತ್ತಿರುವೆ ಸಫಲ ಯತ್ನದಲಿ ದಾರಿಯಲಿ ಅಡ್ಡವಿದು ಬೇಡೆಂದು ಕಡಿದಿರುವೆ ಬೇರನ್ನು ಉಳಿಸಿದ್ದೆ ನಿನ್ನ ಮರೆವಲ್...

ಬಂಜೆ ಎನ್ನುವ ಮೊದಲು....

ಜುಲೈ ೧೯ ಕವನ ೯೬ ವೀಕ್ಷಣೆ

ಮಡಿಲನು ತುಂಬಲು ಕುಡಿಯನು ಬಯಸಿದೆ ಪಡೆಯದೆ ಹೋದೆನು ಬಾಳಿನೊಳು ಬಿಡುವರೆ ನೆರೆಹೊರೆ ಕಿಡಿಯನು ಹಚ್ಚುವ ನುಡಿಗಳು ಕೂತಿವೆ ಮನಸಿನೊಳು ಬಂಜೆಯು ಎನುವರು ರಂಜನೆ ಅವರಿಗೆ ಗಂಜಿಯು ಸೇರದು ಗಂಟಲೊಳು ಅಂಜುತ ಕುಳಿತಿಹ ಪಂಜರ ಪಕ್ಷಿಗೆ ನಂಜನು ಉಣಿಸುವ ಕೃತ್...

ಶಂಕೆ ಕಳೆಯಿತು

ಜುಲೈ ೧೨ ಕವನ ೪೩ ವೀಕ್ಷಣೆ

ಸುತ್ತ ದನುಜೆಯರಿರಲು ಕಾವಲು ಚಿತ್ತ ಸೀತೆಯ ನೋವ ಬಲೆಯೊಳು ಚಿತ್ತದೊಲ್ಲಭನೆಂದು ಬರುವನು ತನ್ನ ಪತಿರಾಯ ಇತ್ತ ಬಂದಿಹ ಸದ್ದನಾಲಿಸಿ ಕತ್ತು ಹೊರಳಿಸಿ ನೋಡೆ ಜಾನಕಿ ಬಿತ್ತು ಕಣ್ಣಿಗೆ ಸನಿಹ ವಂದಿಸಿ ನಿಂತ ಕಪಿವರ್ಯ ದನುಜರಾಡುವ ಕಪಟ ನಾಟಕ- -ವೆನುತ ರೋ...

ಚುಕ್ಕಿಯಾದರು ಗಗನದೆ...

ಜುಲೈ ೧೧ ಕವನ ೪೧ ವೀಕ್ಷಣೆ

ಕಣಿಪುರೇಶನ ಪರಮಪಾವನ ಪುಣ್ಯ ನಾಡಿದು ಕಣಿಪುರ ಭೂಮಿತಾಯಿಗೆ ಹಸಿರಿನುಡುಗೆಯ ತೊಡಿಸಿದಂತಹ ಪರಿಸರ ಯಕ್ಷಗಾನಕೆ ಮುತ್ತು ರತ್ನದ ಗಢಣ ನೀಡಿದ ನಾಡಿದು ಜನರ ಮನದಲಿ ಅಚ್ಚು ಒತ್ತಿದ ಯಕ್ಷಪ್ರೇಮದ ಊರಿದು ಹಾವಭಾವದ ನಟನೆ,ಮಾತಿನ ಪ್ರತಿಭೆ ತುಂಬಿದ ಸಾಗರ ಯಕ...

ಈಗ ಸೆಳೆವುದು ಜೋಗ…

ಜುಲೈ ೦೭ ಕವನ ೪೬ ವೀಕ್ಷಣೆ

ಇಂದೀಗ ಕಣ್ತುಂಬಿಕೊಳ್ಳುವಾ ವಿಶ್ವ ವಿಖ್ಯಾತ ಜೋಗಾ ಜಲಪಾತವಾ ||ಪ|| ಮಳೆಯೀಗ ಸೊಗಸಾಗಿ ಸುರಿದಿದೆ ನಾಡ ಬರಗಾಲ ಸಂಕಟ ಕಳೆದಿದೆ ಮೈಯೆಲ್ಲ ಹಸಿರುಟ್ಟು ಭೂರಮೆ ಪದವು ಸಿಗದೀಗ ಮಾಡಲು ಬಣ್ಣನೆ ಮೈತುಂಬಿ ಹರಿದ ಶರಾವತಿ ಚೆಲುವ ಮಲೆನಾಡ ಸೆರಗಿನ ಐಸಿರೀ ಜಲ...

ಮಳೆಗಾಲದಲ್ಲಿ ಹಳ್ಳಿಯಲ್ಲಿ...

ಜುಲೈ ೦೫ ಕವನ ೪೭ ವೀಕ್ಷಣೆ

ಉಪ್ಪಿನ ಅಳೆತೆಯು ತಪ್ಪಿದೆ ಖಾದ್ಯಕೆ ಸಪ್ಪೆಯೆ ಎನಿಸುವ ಸಾಂಬಾರು ತಪ್ಪನು ನೆನೆಯದೆ ಒಪ್ಪದಿ ಉಣ್ಣಲು ಹಪ್ಪಳ ಸಂಡಿಗೆ ಹುರುದುಬಿಡು ಉಪ್ಪಿನ ಕಾಯಿಯೊ ಸೊಪ್ಪಿನ ಸಾರಲಿ ಒಪ್ಪದು ಮನವಿದು ಉಣ್ಣಲಿಕೆ ತುಪ್ಪವ ಸುರಿದರೆ ಸಪ್ಪೆಯು ಕಳೆವುದೆ ಚಪ್ಪರಿಸುಣ್ಣ...