ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೧೫೯ ವೀಕ್ಷಣೆಗಳು
೧೨೧

ಸ್ಟೇಟಸ್ ಕತೆಗಳು (ಭಾಗ ೧೨೩) - ಭಯದ ಸಾವು

ಮೌನವೇ ಮೌನ ತಾಳಿದ ಹೊತ್ತು. ನಿಶೆಯೊಂದಿಗೆ ತಾರೆಗಳು ಆಗಸದಲ್ಲಿ ಆಟವಾಡುತ್ತಿರುವ ಸಮಯ, ಬಿಸಿಯಾಗಿದ್ದ ರಸ್ತೆ ಉಸಿರೆಳೆದುಕೊಂಡು ನೆಮ್ಮದಿಯ ನಿದ್ರೆಯಲ್ಲಿತ್ತು. ಪಾದಾಚಾರಿ ರಸ್ತೆಗೆ ತಲೆ ಒರಗಿಸಿದ ಡಾಂಬಾರಿಗೆ ನಿದ್ದೆಯ ಮಂಪರು ಆವರಿಸಿತ್ತು. ಆದರೆ...

ಜನವರಿ ೨೦, ೨೦೨೨ · ೯೫ ವೀಕ್ಷಣೆಗಳು
೧೨೨

ಸ್ಟೇಟಸ್ ಕತೆಗಳು (ಭಾಗ ೧೨೪) - ಸಂತೆ

ಇಲ್ಲೊಂದು ಸಂತೆ ಇದೆ. ಆದರೆ ಇದು ವಾರ, ದಿನಗಳಿಗೆ ಸೀಮಿತವಾದದ್ದಲ್ಲ. ಕ್ಷಣ ಕ್ಷಣದ ಸಂತೆ. ನೆರಳು ಬಿಸಿಲಿನ ಭೇದಭಾವವಿಲ್ಲದೆ ಮಾರಾಟವಾಗುತ್ತಿದೆ ವಸ್ತುಗಳು. ಇಲ್ಲಿ ಖರೀದಿಸುವರು ಮಾತ್ರ ಇದ್ದಾರೆ, ಮಾರಾಟಗಾರನಿಲ್ಲ. ನಾವು ಖರೀದಿಸುವ ವಸ್ತುಗಳ ಬೆ...

ಜನವರಿ ೨೧, ೨೦೨೨ · ೮೭ ವೀಕ್ಷಣೆಗಳು
೧೨೩

ಸ್ಟೇಟಸ್ ಕತೆಗಳು (ಭಾಗ ೧೨೫) - ಕಾಡಳುತ್ತಿದೆ!

ಕಾಡಳುತ್ತಿದೆ? ರೋದನೆಯ ಕಂಪನ ನಾಡಿನ ವಿವೇಚಕರ ಕಿವಿಯೊಳಗೆ ಕೇಳಿಸದಿರುವುದು ವಿಪರ್ಯಾಸ. ತನ್ನನ್ನ ತಾನು ಉಳಿಸಿಕೊಳ್ಳಲಾಗದೆ ಇರೋದಕ್ಕೆ ವ್ಯಥೆ ಪಡುತ್ತಿದೆ. ತನಗೆ ಚಲಿಸಕ್ಕಾಗದೇ ಇರೋದು ಈಗ ಶಾಪವೆಂದೆನಿಸಿದೆ. "ಮನುಷ್ಯ ಮೃಗ"ಗಳನ್ನು ತೊರೆದು ದೂರ...

ಜನವರಿ ೨೨, ೨೦೨೨ · ೮೨ ವೀಕ್ಷಣೆಗಳು
೧೨೪

ಸ್ಟೇಟಸ್ ಕತೆಗಳು (ಭಾಗ ೧೨೬) - ಉರುಳಿದ ಮರ

ಇದ್ದ ಬಲವನ್ನೆಲ್ಲಾ ಪ್ರಯೋಗಿಸಿ ಬೇರನ್ನರಳಿಸಲು ಶಕ್ತಿ ತುಂಬಿದರು, ನನ್ನಿಂದ ಸಾಧ್ಯವಾಗುತ್ತಿಲ್ಲ. ನನ್ನೊಳಗಿನ ಜೀವರಾಶಿಗಳಿಗೆ ಕ್ಷಮೆಯಾಚಿಸುತ್ತಾ ಉರುಳುತ್ತಿದ್ದೇನೆ ಎನ್ನುತ್ತಾ ಆ ಮರ ಧರೆಗುರುಳಿತು ‌ಮರದ ಯಾತನೆ ಭೂಮಿಗರಿವಾದ್ದರಿಂದ ತನ್ನ ಕಂಪ...

ಜನವರಿ ೨೩, ೨೦೨೨ · ೧೦೧ ವೀಕ್ಷಣೆಗಳು
೧೨೫

ಸ್ಟೇಟಸ್ ಕತೆಗಳು (ಭಾಗ ೧೨೭) - ಬಣ್ಣ

ಅಲ್ಲಿ ಬಣ್ಣಗಳು ಮಾತನಾಡುತ್ತವೆ. ಅಲ್ಲಿಗೆ ಬಂದವರು ಮೌನದ ಕಾಲ್ನಡಿಗೆ ನಡೆಸುತ್ತಾರೆ. ನಮ್ಮೊಳಗಿನ ಯೋಚನೆಗೊಂದು ಕೆಲಸ ಕೊಡಿಸಬೇಕಾದರೆ ಇದರೊಳಗೆ ಕಾಲಿಡಲೇಬೇಕು. ಆ ಮೂಲೆಯಲ್ಲಿ ನೆರಳಿನ ನಡುವೆ ಕುಳಿತಿದ್ದಾನೆ ಅವನು. ಆತನ ಕಣ್ಣೊಳಗೆ ಬಣ್ಣಗಳು ಪ್ರತ...

ಜನವರಿ ೨೪, ೨೦೨೨ · ೭೯ ವೀಕ್ಷಣೆಗಳು
೧೨೬

ಸ್ಟೇಟಸ್ ಕತೆಗಳು (ಭಾಗ ೧೨೮) - ಸಮಯ

ಈ ಮುಳ್ಳು ಸಂತಸವನ್ನು ನೀಡುತ್ತದೆ, ನೋವನ್ನು ನೀಡುತ್ತಿದೆ. ಇಲ್ಲಿ ಬದುಕು ಕ್ಷಣದ ಲೆಕ್ಕದಲ್ಲಿ ಬಿಕರಿಯಾಗುತ್ತದೆ. ನಿಂತರೆ ಕಲ್ಲಾಗುವ ಕಾರಣ ಚಲಿಸುತ್ತಲೇ ಇರಬೇಕಾಗಿದೆ, ಹೀಗೆ ಪಾದ ಸವೆಸಿ ನಿಲ್ದಾಣವೊಂದರಲ್ಲಿ ಸದ್ಯಕ್ಕೆ ನಿಂತಿದ್ದಾನೆ ಭಾರ್ಗವ....

ಜನವರಿ ೨೫, ೨೦೨೨ · ೧೧೫ ವೀಕ್ಷಣೆಗಳು
೧೨೭

ಸ್ಟೇಟಸ್ ಕತೆಗಳು (ಭಾಗ ೧೨೯) - ವಿದಾಯ

ಮನೆಯವರು ನಡೆಯಬೇಕಿತ್ತು ಮಸಣದೆಡೆಗೆ. ಜವಾಬ್ದಾರಿಗೆ ಹೆಗಲು ಕೊಟ್ಟು, ಹೊಟ್ಟೆಗೆ ಅನ್ನ ನೀಡಲು ದುಡಿಯುತಿದ್ದ ಅಪ್ಪ ಉಸಿರ ನಿಲ್ಲಿಸಿದ್ದ. ಹೊರಗಿನ ಕೋಣೆಯಲ್ಲಿ ನಿಶ್ಚಲವಾಗಿತ್ತು ದೇಹ. ದಿನವೂ ಮಲಗುವ ಜಾಗದಲ್ಲೇ. ಮನೆಯಲ್ಲಿ ಅಳುವಿನ ಸ್ವರ ಏರುಗತಿಯ...

ಜನವರಿ ೨೬, ೨೦೨೨ · ೮೯ ವೀಕ್ಷಣೆಗಳು
೧೨೮

ಸ್ಟೇಟಸ್ ಕತೆಗಳು (ಭಾಗ ೧೩೦) - ಏನು ಫಲ?

"ಮಾರ್ಗ ಬದಿಯಲ್ಲಿ ಸಾಲು ಕಂಬಗಳನ್ನು ಊರಿ ಪತಾಕೆಗಳನ್ನು ಕಟ್ಟಿದ್ದಾರೆ. ಸೂರ್ಯನಿಳಿದಾಗ ನೀವೊಮ್ಮೆ ಹಾದು ಹೋಗಬೇಕು. ಇಲ್ಲಿ ಬೆಳಕಿನ ಚಿತ್ತಾರ ಮಿನುಗುತ್ತದೆ. ಬಣ್ಣದ ಬೆಳಕು ಓಡುತ್ತದೆ, ಹಾರುತ್ತದೆ, ಮಾಯವಾಗುತ್ತಿದೆ. ಇದನ್ನನುಸರಿಸಿ ಒಳ ನಡೆದಾಗ...

ಜನವರಿ ೨೭, ೨೦೨೨ · ೧೦೬ ವೀಕ್ಷಣೆಗಳು
೧೨೯

ಸ್ಟೇಟಸ್ ಕತೆಗಳು (ಭಾಗ ೧೩೧) - ವೈರುದ್ಯ

ಮತ್ತೆ ಬಸ್ ಏರಬೇಕು. ಗಾಲಿ ತಿರುಗುತ್ತಾ ಊರ ಗಡಿ ದಾಟಬೇಕು. ಬದುಕಿನ ನಾವೇ ಉತ್ತರದ ಕಡೆಗೆ ಸೆಳೆದಿರುವಾಗ, ಹೋಗದಿರುವುದು ಹೇಗೆ? ಬ್ಯಾಗು ಹೆಗಲಿಗೇರಿಸಿದ್ದೇನೆ, ಹೃದಯದೊಳಗೆ ಅವ್ಯಕ್ತ ಭಾವನೆಯೊಂದು ಹನಿಗೂಡಿದೆ. ವಿದಾಯದ ಇಳಿಸಂಜೆ ಭಾರವಾಗಿದೆ. ಈ...

ಜನವರಿ ೨೯, ೨೦೨೨ · ೧೦೦ ವೀಕ್ಷಣೆಗಳು
೧೩೦

ಸ್ಟೇಟಸ್ ಕತೆಗಳು (ಭಾಗ ೧೩೨) - ಶಿಕ್ಷಣ-ಸಂಸ್ಕಾರ

ವ್ಯರ್ಥವಾಗಿ ಎಸೆದಿದ್ದನ್ನು ಆಯೋನು ಅವನು. ಆ ದಿನ ಭಯಗೊಂಡು ರಸ್ತೆ ಬದಿ ರಾಶಿಯಾಗಿದ್ದು ಮಣ್ಣನ್ನು ಹರಡುತ್ತಿದ್ದಾನೆ, ಕೈ ಹಾಕಿ ಒಳಗೇನಿದೆ ಅಂತ ನೋಡುತ್ತಿದ್ದಾನೆ. ನೋಡುವಾಗ ಬುದ್ಧಿ ಭ್ರಮಣೆಯಾಗಿದೆ ಎಂದೆನಿಸುತ್ತಿದೆ. ಆದರೆ ಮಣ್ಣು ಕೆದರಿದಂತೆ...

ಜನವರಿ ೨೯, ೨೦೨೨ · ೮೯ ವೀಕ್ಷಣೆಗಳು
೧೩೧

ಸ್ಟೇಟಸ್ ಕತೆಗಳು (ಭಾಗ ೧೩೩) - ದೂರ

ಅಲೆಗಳು ದಡಕ್ಕಪ್ಪಳಿಸುತ್ತಿದೆ. ಹೊರಟಿದೆ ಯಾನ ನೀಲಿ ಶರಧಿಯೊಳಗೆ. ಅದೊಂದು ತೈಲ ಸಂಗ್ರಹಣೆಯ ಹಡಗು. ಅಲೆಯ ಮೇಲಿನ ತೇಲುವ ಬದುಕು ಅವರದು. ವರ್ಷಕ್ಕೊಮ್ಮೆ ಮನೆಯ ಹೊಸ್ತಿಲು ತುಳಿಯುತ್ತಾರೆ. ಕ್ಷಣವೂ ಅಲೆಗಳು ತೀರವ ತಾಕುವಂತೆ ಅವರ ನೆನಪು ಮನೆಯವರಿಗೆ...

ಜನವರಿ ೩೧, ೨೦೨೨ · ೧೦೬ ವೀಕ್ಷಣೆಗಳು
೧೩೨

ಸ್ಟೇಟಸ್ ಕತೆಗಳು (ಭಾಗ ೧೩೪) - ಉತ್ತರ ಸಿಗದ ಪ್ರಶ್ನೆ?

ಅವನೊಳಗೆ ಮೌನ ಗಲಾಟೆ ನಡೆಸುತ್ತಿತ್ತು. ಮೌನವಾದ್ರಿಂದ ಕಾರಣವೇ ತಿಳಿಯುತ್ತಿಲ್ಲ. ಪರಿಣಾಮ ಮಾತ್ರ ತುಂಬಾ ತೀವ್ರತರವಾಗುತ್ತಿತ್ತು. ಋತುಚಕ್ರವು ತಿರುಗಿದಂತೆ ಅವನ ಬದುಕಿನಲ್ಲಿ ಅನಿರೀಕ್ಷಿತ ಘಟನೆಗಳು ಘಟಿಸಿ ಭಯವು ಮೃದು ಹೆಜ್ಜೆಗಳನ್ನು ಬಲವಾಗಿ ಊರ...

ಜನವರಿ ೩೧, ೨೦೨೨ · ೧೧೦ ವೀಕ್ಷಣೆಗಳು