Sampada Logo

ಕೆ.ಪಿ.ಅಶ್ವಿನ್ ರಾವ್

೩೯ ಅರಳಿಕಟ್ಟೆಯ ಮಾತುಗಳು

ಕೆ.ಪಿ.ಅಶ್ವಿನ್ ರಾವ್

ಕೆ.ಪಿ.ಅಶ್ವಿನ್ ರಾವ್

ashwinrao47

೩೯ ಪೋಸ್ಟ್‌ಗಳು ೨೧ ಅನುಯಾಯಿಗಳು
ಸೇರಿದ ದಿನಾಂಕ: ಶುಕ್ರವಾರ, ಜನವರಿ ೧೭, ೨೦೨೦
ಕೆ.ಪಿ.ಅಶ್ವಿನ್ ರಾವ್
"ಬರೆಯುವವರು ಓದಲು ಶುರು ಮಾಡಿದರೆ ಪುಸ್ತಕ ಕ್ರಾಂತಿಯಾಗಬಹುದು. ಈಗ ಬರೆಯುವವರಲ್ಲೇ ಓದುವ ಕೊರತೆ ಇದೆ ! ಬಹುತೇಕ ಬರಹಗಾರರಲ್ಲಿ ಓದುವ ಅಭ್ಯಾಸ ಕಡಿಮೆಯಿದೆ." ಇದು ಕಂಡದ್ದು ನನ್ನ ಗೆಳೆಯನೊಬ್ಬನ ಸ್ಟೇಟಸ್ ನಲ್ಲಿ. ನನಗೂ ಚಿಂತಿಸುವಂತೆ ಮಾಡಿತು. ತಿಂಗಳಿಗೆ ಸಾವಿರಾರು ಕನ್ನಡ ಪುಸ್ತಕಗಳು ಬಿಡುಗಡೆಯಾಗುತ್ತವೆ. ಆ ಸರಾಸರಿಯಲ್ಲಿ ಪುಸ್ತಕಗಳು ಮಾರಾಟವಾಗುತ್ತಿವೆಯೇ? ಯೋಚಿಸಬೇಕಾದ ಸಂಗತಿ.
೨೩
ಕೆ.ಪಿ.ಅಶ್ವಿನ್ ರಾವ್
ನಾನು ಸಣ್ಣವರಿದ್ದಾಗ ದೀಪಾವಳಿ ಬಂದಾಗ ದಿನವಿಡೀ ಪಟಾಕಿ ಹೊಡೆಯುತ್ತಿದ್ದೆವು. ಹಗಲಲ್ಲಾದರೆ ಬಿಡಿ ಪಟಾಕಿ, ಬೆಳ್ಳುಳ್ಳಿ, ಕ್ಯಾಪ್, ಪಿಸ್ತೂಲು ಕ್ಯಾಪ್ ಹೀಗೆ ಶಬ್ಧ ಮಾಡುವ ಪಟಾಕಿಯಾದರೆ, ರಾತ್ರಿ ಮಳೆ, ನೆಲಚಕ್ರ, ನಕ್ಷತ್ರ ಕಡ್ಡಿ, ರಾಕೆಟ್ ಹೀಗೆ ಬಣ್ಣದ ಚಿತ್ತಾರ ಮೂಡಿಸುವ ಪಟಾಕಿಗಳನ್ನು ಹೊಡೆಯುತ್ತಿದ್ದೆವು. ದಿನಗಳೆದಂತೆ ಪಟಾಕಿಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎನ್ನುವ ಕಾರಣದಿಂದ ರಾತ್ರಿ ಎರಡು ಗಂಟೆ ಮಾತ್ರ (೮ ರಿಂದ ೧೦) ಪಟಾಕಿ ಹೊಡೆಯಲು ಅನುಮತಿ ನೀಡಲಾಗಿದೆ. ಹಸಿರು ಪಟಾಕಿ ಎಂದು ಮೋಸ ಮಾಡುವವರೂ, ಪಟಾಕಿ ತಯಾರಿಕಾ ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕರೂ ಇದ್ದಾರೆ. ಪಟಾಕಿ ಬಗ್ಗೆ ನಿಮ್ಮ ಅನಿಸಿಕೆ ಏನು?
೬೬
Nagaraja Beleyur Nagaraja Beleyur ಪ್ರತಿಕ್ರಿಯಿಸಿದ್ದಾರೆ
DZ,ಣದಧಹಗಹೆಎಸಸ.ಸ
ಪ್ರತಿಕ್ರಿಯೆ ನೋಡಿ →
ಕೆ.ಪಿ.ಅಶ್ವಿನ್ ರಾವ್
ಕನ್ನಡದ ಖ್ಯಾತ ಸಾಹಿತಿ ಹಾಗೂ ನಾಟಕಕಾರ ಟಿ ಪಿ ಕೈಲಾಸಂ ಅವರನ್ನು ಒಮ್ಮೆ ಯಾರೋ ಕೇಳಿದರಂತೆ "ಕನ್ನಡಿಗರು ಯಾರು?" ಎಂದು. ಕೈಲಾಸಂ ಹೇಳಿದರಂತೆ "ಯಾರು ತಮಿಳರೊಂದಿಗೆ ತಮಿಳಿನಲ್ಲಿ, ಮಲೆಯಾಳಿಗಳೊಂದಿಗೆ ಮಲೆಯಾಳಂ ನಲ್ಲಿ, ಹಿಂದಿಯವರೊಂದಿಗೆ ಹಿಂದಿಯಲ್ಲಿ, ಬಂಗಾಳಿಯವರೊಂದಿಗೆ ಬಂಗಾಳಿಯಲ್ಲಿ, ಒಡಿಯಾದವರೊಂದಿಗೆ ಒಡಿಯಾದಲ್ಲಿ ಹಾಗೂ ಕನ್ನಡದವರೊಂದಿಗೆ ಇಂಗ್ಲೀಷಿನಲ್ಲಿ ಮಾತನಾಡುತ್ತಾರೋ ಅವರೇ ಕನ್ನಡಿಗರು." ಈ ಮಾತನ್ನು ಕೈಲಾಸಂ ಹೇಳಿ ಹಲವು ದಶಕಗಳೇ ಕಳೆದಿರಬಹುದು. ಆದರೆ ಇಂದಿಗೂ ಕನ್ನಡಿಗರ ಸ್ಥಿತಿ ಬದಲಾಗಿಲ್ಲ. ರಾಜ್ಯೋತ್ಸವ ಮಾಸದಂದು ಯಾಕೋ ನೆನಪಾಯ್ತು...
ಚಿತ್ರ
೫೨
ಕೆ.ಪಿ.ಅಶ್ವಿನ್ ರಾವ್
ಮಳೆ ಕೊರತೆಯಿಂದ ಸೆಖೆಯ ಪ್ರಮಾಣ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ತಂಪಾಗಿ ಏನಾದರೂ ಕುಡಿಯುವ ಎಂದು ಮನಸ್ಸಾದಾಗ ನನಗೆ ಮೊದಲು ಹೊಳೆಯುವುದೇ ಕಬ್ಬಿನ ಹಾಲು. ಶುಂಠಿ, ನಿಂಬೆ ರಸ ಸೇರಿಸಿ ತಯಾರಿಸಿದ ಕಬ್ಬಿನ ಹಾಲು ಕುಡಿಯಲು ಅಮೃತ ಸಮಾನ. ಆದರೆ ರಸ್ತೆ ಬದಿಯಲ್ಲಿ ಕಬ್ಬಿನ ಹಾಲು ಸೇವಿಸುವಾಗ ಸ್ವಚ್ಛತೆಯ ಬಗ್ಗೆ ಗಮನವಹಿಸಿ. ಮುಖ್ಯವಾಗಿ ತಂಪು ಮಾಡಲು ಬಳಸುವ ಐಸ್ (ಮಂಜುಗೆಡ್ಡೆ) ಬಗ್ಗೆ. ಬೇಗದಲ್ಲೇ ಕಬ್ಬಿನ ಹಾಲಿನ ಬಗ್ಗೆ ವಿವರವಾದ ಲೇಖನ ನಿಮ್ಮ 'ಸಂಪದ' ದಲ್ಲಿ...
ಚಿತ್ರ
೭೨
Ashmith Ashmith ಪ್ರತಿಕ್ರಿಯಿಸಿದ್ದಾರೆ
ಬೇಗದಲ್ಲೇ ಎನ್ನುವ ಪದ ಹೆಚ್ಚಾಗಿ ಬಳಕೆಯಲ್ಲಿ ಇಲ್ಲ ಅಲ್ಲವೇ? ಇನ್ನು ಬೇಗದಲ್ಲೇ ಇದನ್ನು ಬಳಸಲು ಶುರುಮಾಡುವ...
ಎಲ್ಲಾ ೨ ಪ್ರತಿಕ್ರಿಯೆಗಳನ್ನು ನೋಡಿ →
ಕೆ.ಪಿ.ಅಶ್ವಿನ್ ರಾವ್
ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಟಿ ೨೦ ಸರಣಿ ಭಾರತದ ವಶವಾಗಿದೆ. ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಮೂರು ಪಂದ್ಯಗಳನ್ನು ಗೆದ್ದ ಭಾರತ ಕೊನೆಯ ಎರಡು ಪಂದ್ಯಗಳನ್ನು ಸೋಲಬಾರದಿತ್ತು. ಸರಣಿ ಗೆಲುವಿನ ಹುಮ್ಮಸ್ಸಿನಿಂದ ಬೀಗಿ ಕೊನೆಯ ಪಂದ್ಯಗಳನ್ನು ಆಟಗಾರರು ಜವಾಬ್ದಾರಿಯುತವಾಗಿ ಆಡಿಲ್ಲ ಎಂದು ಅನಿಸಿತು. ಚೆನ್ನಾಗಿ ಆಡುತ್ತಿದ್ದ ವೈಭವ್ ಸೂರ್ಯವಂಶಿಯನ್ನು ಈ ಎರಡು ಪಂದ್ಯಗಳಲ್ಲಿ ಆಟವಾಡಿಸದೇ ಇದ್ದದ್ದೂ ತಪ್ಪಾಯಿತೇ? ಕ್ರೀಡಾ ಪ್ರೇಮಿಗಳಾದ ನಿಮಗೆ ಈ ಸರಣಿ ಹೇಗನಿಸಿತು?
ಚಿತ್ರ
೫೬
ಕೆ.ಪಿ.ಅಶ್ವಿನ್ ರಾವ್
ಇನ್ನೇನು ರಾಜ್ಯೋತ್ಸವ ಬಂದೇ ಬಿಟ್ಟಿತು.. ಖರೀದಿಸಿ ಬಹು ಸಮಯದಿಂದ ಓದದೇ ಇದ್ದ ಕನ್ನಡ ಪುಸ್ತಕಗಳಲ್ಲಿ ಕನಿಷ್ಟ ಐದನ್ನಾದರೂ (ವಾರಕ್ಕೆ ಒಂದರಂತೆ) ಓದಬೇಕು ಎಂದು ನಿರ್ಧಾರ ಮಾಡಿರುವೆ. ಮಹಾ ಯೋಗಿನಿ, ರೇಷ್ಮೆ ಬಟ್ಟೆ, ಬಣ್ಣದ ಜಿಂಕೆ, ನಮ್ಮ ಊರಿನ ರಸಿಕರು ಮತ್ತು ಬಹುದೇಶವಾಸಿ ಪಟ್ಟಿಯಲ್ಲಿದೆ. ಎಷ್ಟು ಓದಿ ಮುಗಿಸುವೆ ನೋಡಬೇಕು. ನಿಮ್ಮ ಪುಸ್ತಕದ ಓದು ಹೇಗಿದೆ? ಯಾವೆಲ್ಲಾ ಪುಸ್ತಕ ಓದ ಬೇಕು ಎಂದು ಯೋಜನೆ ಹಾಕಿಕೊಂಡಿರುವಿರಿ? ಪುಸ್ತಕ ಖರೀದಿಗೆ ಈಗ ನೀವು ಅಂಗಡಿಗೆ ಹೋಗಬೇಕಿಲ್ಲ. ಮನೆಯಲ್ಲೇ ಕೂತು ಬುಕ್ ಆರ್ಡರ್ ಮಾಡಿ, ಮನೆಗೇ ಪುಸ್ತಕ ಬರುತ್ತೆ. ಇಲ್ಲಿದೆ ನೋಡಿ ಲಿಂಕ್... sampada.net/shop
ಚಿತ್ರ
ಸಂಪದ - Sampada.net
ಪುಸ್ತಕ ಸಂಪದ — ಸಂಪದ
ಕನ್ನಡದ ಆಯ್ದ ಪುಸ್ತಕಗಳು — ಮನೆ ಮನೆಗೂ ಕನ್ನಡ ಪುಸ್ತಕಗಳು.
೫೬
ಕೆ.ಪಿ.ಅಶ್ವಿನ್ ರಾವ್
ಕಾಡಿನಿಂದ ನಾಡಿಗೆ ಬರುವ ನವಿಲು, ಕಾಡು ಹಂದಿ, ಅಳಿಲು, ಮುಳ್ಳು ಹಂದಿ ಇವೆಲ್ಲಾ ತಮ್ಮ ಸಹಜ ಆಹಾರ ಪದ್ಧತಿಯನ್ನು ಬಿಟ್ಟು ಊರಿನಲ್ಲಿ ಸಿಗುವ ಅನ್ನ, ಬ್ರೆಡ್ ಮೊದಲಾದುವುಗಳನ್ನು ತಿನ್ನತೊಡಗಿವೆ. ಇಂದು ಬದುಕಿ ಉಳಿಯಲು ಯಾವುದೇ ಆಹಾರ ಅನಿವಾರ್ಯವೇ ಆದರೂ, ಸಹಜ ಆಹಾರ (ಕಾಡು ಹಣ್ಣು, ಕಾಯಿ, ಗೆಡ್ಡೆ ಗೆಣಸು) ಪದ್ಧತಿಯನ್ನು ಮರೆತ ಪ್ರಾಣಿ, ಪಕ್ಷಿಗಳು ಭವಿಷ್ಯದಲ್ಲಿ ಹೇಗೆ ಜೀವನ ಸಾಗಿಸಬಲ್ಲವು?
೬೫
ಕೆ.ಪಿ.ಅಶ್ವಿನ್ ರಾವ್
ಪ್ಯಾರಾ ಏಷ್ಯಾಡ್ ಕ್ರೀಡಾ ಕೂಟದ ಪದಕ ಪಟ್ಟಿಯಲ್ಲೂ ಭಾರತ ನಾಲ್ಕನೇ ಸ್ಥಾನ ಗಳಿಸಿದೆ. ಆದರೆ ಕಳೆದ ವರ್ಷಕ್ಕಿಂತಲೂ ಅಧಿಕ ಪದಕಗಳನ್ನು ಕ್ರೀಡಾಳುಗಳು ಗೆದ್ದಿದ್ದಾರೆ. ತಮ್ಮ ದೈಹಿಕ ಕೊರತೆಯನ್ನು ಮೆಟ್ಟಿ ನಿಂತು ದಾಖಲೆ ನಿರ್ಮಿಸಿದ್ದಾರೆ. ಆತ್ಮ ಸ್ಥೈರ್ಯವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟ ಕ್ರೀಡಾಳುಗಳಿಗೆ ಅಭಿನಂದನೆಗಳು. ರಾಜ್ಯದ ಕ್ರೀಡಾಳುಗಳೂ ಸಾಕಷ್ಟು ಮಂದಿ ಪದಕ ಗೆದ್ದಿದ್ದಾರೆ. ಇವರ ಮುಂದಿನ ಭವಿಷ್ಯಕ್ಕೆ ಅನುಕೂಲವಾಗುವಂತೆ ಸರಕಾರವು ನೌಕರಿ, ಪ್ರೋತ್ಸಾಹ ಧನ, ತರಬೇತಿಗೆ ಬೆಂಬಲ ನೀಡಬೇಕು ಎಂದು ನನ್ನ ಅನಿಸಿಕೆ. ನೀವೇನಂತೀರಿ?
ಚಿತ್ರ
೧೪೨
ಹರಿ ಪ್ರಸಾದ್ ನಾಡಿಗ್ ಹರಿ ಪ್ರಸಾದ್ ನಾಡಿಗ್ ಪ್ರತಿಕ್ರಿಯಿಸಿದ್ದಾರೆ
ನಮ್ಮ ಶಿವಮೊಗ್ಗದ ಸಹಪಾಠಿ ಹಾಗೂ ಕನ್ನಡಿಗರಾದ ಸುಹಾಸ್ ಯತಿರಾಜ್ ಕೂಡ ಈ ಕ್ರೀಡಾಕೂಟದಲ್ಲಿ ಪದಕ ಪಡೆದಿದ್ದಾರೆ: https://x.com/suhas_ly
ಎಲ್ಲಾ ೨ ಪ್ರತಿಕ್ರಿಯೆಗಳನ್ನು ನೋಡಿ →
ಕೆ.ಪಿ.ಅಶ್ವಿನ್ ರಾವ್
ಮೊನ್ನೆ ಶಿವಮೊಗ್ಗದ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಆನೆ ಏಕಾಏಕಿ ಅಡ್ಡಾದಿಡ್ಡಿ ಓಡಾಡಿ ಅನಾಹುತವನ್ನೇ ಸೃಷ್ಟಿಸಿತು. ಪುಣ್ಯಕ್ಕೆ ಪ್ರಾಣಹಾನಿಯಾಗಲಿಲ್ಲ. ಆನೆಗಳು ಎಷ್ಟೇ ತರಬೇತಿ ಹೊಂದಿದರೂ ಅವುಗಳು ತಾಳ್ಮೆ ಕಳೆದುಕೊಳ್ಳುವುದು ಅವುಗಳ ಪ್ರಾಣಿ ಸಹಜ ಗುಣ. ಅಸಂಖ್ಯ ಜನರು, ಬ್ಯಾಂಡ್ ವಾದ್ಯಗಳ ಗದ್ದಲಗಳ ನಡುವೆ ಆನೆಗಳನ್ನು ಬಳಸಿಕೊಂಡು ಶೋಭಾಯಾತ್ರೆ ಹೊರಡುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಮತ್ತೊಮ್ಮೆ ಎದ್ದಿದೆ. ಈ ಬಗ್ಗೆ ನೀವೇನಂತೀರಿ?
೬೯
ಕೆ.ಪಿ.ಅಶ್ವಿನ್ ರಾವ್
ಇಂದು (ಅ.೨೧) ಮಂಗಳೂರು ದಸರಾ ಸಂಭ್ರಮ. ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಪೂಜಿಸಲ್ಪಟ್ಟ ಶಾರದಾ ದೇವಿ, ನವ ದುರ್ಗೆಯರು, ಶ್ರೀ ಗಣಪತಿ ದೇವರ ವಿಗ್ರಹಗಳನ್ನು ಶೋಭಾಯಾತ್ರೆಯಲ್ಲಿ ನೋಡುವುದೇ ಕಣ್ಣಿಗೆ ಹಬ್ಬ. ಮಂಗಳೂರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರುದಿನ ಉಷಾಕಾಲಕ್ಕೆ ಕುದ್ರೋಳಿ ಕ್ಷೇತ್ರದಲ್ಲಿ ವಿಸರ್ಜನೆಗೊಳ್ಳಲಿರುವ ಈ ದಸರಾ ಸಂಭ್ರಮ ನೋಡಲು ಬನ್ನಿ. ನಿಮ್ಮ ಊರಿನಲ್ಲಿ ದಸರಾ ಮಹೋತ್ಸವ ಹೇಗೆ?
ಚಿತ್ರ
೯೯
ಕೆ.ಪಿ.ಅಶ್ವಿನ್ ರಾವ್
ಕಳೆದ ವಾರ ತಾಮ್ರದ ಪಾತ್ರೆಗಳೆರಡನ್ನು ಕಲಾಯಿ (ಪಾಲಿಷ್) ಗೆ ಕೊಟ್ಟಿದ್ದೆ ಅಂದಿದ್ದೆನಲ್ಲಾ. ನಿನ್ನೆ ಕಲಾಯಿ ಆಗಿ ಬಂದಿವೆ. (ಚಿತ್ರ ನೋಡಿ). ದರ ಸ್ವಲ್ಪ ದುಬಾರಿಯೇ ಆಯಿತು ಆದರೆ ಅಮ್ಮನಿಗೆ ಖುಷಿ ಆಗಿದೆ. ಅಷ್ಟು ಸಾಕು.
ಚಿತ್ರ
೧೦೧
ಕೆ.ಪಿ.ಅಶ್ವಿನ್ ರಾವ್
ನಮಗೆ ಮಾರಣಹೋಮ (Genocide) ಎಂಬ ವಿಷಯ ಕಂಡೊಡನೆಯೇ ನೆನಪಾಗುವುದು ಹಿಟ್ಲರ್ ನು ಮಾಡಿದ ಹತ್ಯೆಗಳ ಸರಪಣಿ. ನಮ್ಮ ನೆರೆಯ ಕಾಂಬೋಡಿಯಾದಲ್ಲಿ ಐದು ದಶಕಗಳ ಹಿಂದೆ ಅಂದರೆ ೧೯೭೫ರಲ್ಲಿ. ಬರೋಬ್ಬರಿ ೧೩೬೪ ದಿನಗಳು ಅಂದರೆ ೧೯೭೯ರ ಇಸವಿಯ ತನಕ ನಡೆದ ಈ ಮಾರಣಹೋಮದಲ್ಲಿ ಸತ್ತವರ ಸಂಖ್ಯೆ ಸುಮಾರು ಇಪ್ಪತ್ತು ಲಕ್ಷ ಎಂದು ಅಂದಾಜಿಸಲಾಗಿದೆ. ಅಂದರೆ ಅಂದಿನ ಕಾಂಬೋಡಿಯಾದ ಜನ ಸಂಖ್ಯೆಯ ಕಾಲು ಭಾಗದಷ್ಟು. ಈ ಮಾರಣ ಹೋಮದ ದಾರುಣ ಕಥೆ ಹೇಳಲು ಹೊರಟಿದ್ದಾರೆ ಕತೆಗಾರ್ತಿ ಸಂಜೋತಾ ಪುರೋಹಿತ.... ಮಾಹಿತಿ ಓದಿ ಮತ್ತು ಪುಸ್ತಕ ಖರೀದಿಸಿ... sampada.net/s/ev2
ಚಿತ್ರ
ಸಂಪದ - Sampada.net
ಶಿಲಾವಲ್ಕ
ನಮಗೆ ನರಮೇಧ ಅಥವಾ ಮಾರಣಹೋಮ (Genocide) ಎಂಬ ವಿಷಯ ಕಂಡೊಡನೆಯೇ ನೆನಪಾಗುವುದು ಹಿಟ್ಲರ್ ನು ಮಾಡಿದ ಹತ್ಯೆಗಳ ಸರಪಣಿ, ಆತನ ಕ್ರೂರವಾದ ಗ್ಯಾಸ್ ಚೇಂಬರ್ ಹತ್ಯೆಗಳು. ಇಂತಹ ಒಂದು ಹತ್ಯಾ ಸರಣಿ ನಮ್ಮ ಪಕ್ಕದ ದೇಶವಾದ ಕಾಂಬೋಡಿಯಾದಲ್ಲೂ ನಡೆದಿದೆ ಎಂದ...
೮೧
ಕೆ.ಪಿ.ಅಶ್ವಿನ್ ರಾವ್
ಮೊನ್ನೆ ಅಟ್ಟದಲ್ಲಿ ಏನೋ ಹುಡುಕುವಾಗ ಹಳೆಯ ಎರಡು ತಾಮ್ರದ ಪಾತ್ರೆಗಳು ಸಿಕ್ಕವು. ನೋಡುವಾಗಲೇ ಬಹಳ ಹಿಂದಿನವು ಎಂದು ಗೊತ್ತಾಗುತ್ತಿತ್ತು. ಅದನ್ನು ನೋಡಿದ ಕೂಡಲೇ ಅಮ್ಮನಿಗೆ ಅದಕ್ಕೆ 'ಕಲಾಯಿ' (ಪಾಲಿಷ್) ಮಾಡಿಸುವ ಮನಸ್ಸಾಯಿತು. ಎಲ್ಲಾ ಕಡೆ ಕೇಳಿದೆವು. ಈಗ ಕಲಾಯಿ ಹಾಕುವವರೇ ಇಲ್ಲ. ದೇವಸ್ಥಾನದಲ್ಲೂ ಕೇಳಿದೆವು. ಅಲ್ಲಿಯೂ ಸ್ಟೀಲ್ ಪಾತ್ರೆಗಳದ್ದೇ ಕಾರುಬಾರು. ಕೊನೆಗೆ ಒಂದು ಪಾತ್ರೆಯ ಅಂಗಡಿಯಲ್ಲಿ ಕಲಾಯಿ ಹಾಕುವವರು ಒಬ್ಬರು ಸಿಕ್ಕರು. ಬೆಲೆ ಜಾಸ್ತಿ ಆಗುತ್ತೆ ಎಂದು ಎಚ್ಚರಿಸಿಯೇ ಬಿಟ್ಟರು. ಹಣ ಎಷ್ಟಾದರೂ ತೊಂದರೆ ಇಲ್ಲ ಕಲಾಯಿ ಹಾಕಿಸೋದೇ ಎಂದ ಬಳಿಕ ಪಾತ್ರೆ ಕೊಟ್ಟು ಬಂದಿರುವೆ. ರೆಡಿ ಆದ ಬಳಿಕ ಚಿತ್ರ ಹಾಕುವೆ
ಚಿತ್ರ
೨೩೧
ಹರಿ ಪ್ರಸಾದ್ ನಾಡಿಗ್ ಹರಿ ಪ್ರಸಾದ್ ನಾಡಿಗ್ ಪ್ರತಿಕ್ರಿಯಿಸಿದ್ದಾರೆ
ತಿರುವಣ್ಣಾಮಲೈಗೆ ಹೋದಾಗ ತಾಮ್ರದ ಪಾತ್ರೆಗಳಿಗೆ ಕಲಾಯಿ ಹಾಕುತ್ತಿರುವುದನ್ನು ನೋಡಿದ್ದೆ. ಈಗ ನಮ್ಮ ರಾಜ್ಯದ ಸಣ್ಣ ಊರುಗಳಲ್ಲಿ ಕಲಾಯಿ ಹಾಕುವವರು ಸಿಗುವುದೇ ಇಲ್ಲ. ಕೆಲವು ತಾಮ್ರದ ಪಾತ್ರೆಗಳನ...
ಪ್ರತಿಕ್ರಿಯೆ ನೋಡಿ →
ಕೆ.ಪಿ.ಅಶ್ವಿನ್ ರಾವ್
ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ನವರಾತ್ರಿ ಬಳಿಕ ವಿಜಯ ದಶಮಿ. ದಸರಾ ಮಹೋತ್ಸವ. ನಮ್ಮ ಮಂಗಳೂರಿನಲ್ಲಿ ಕುದ್ರೋಳಿ ಕ್ಷೇತ್ರದಲ್ಲಿ ನವದುರ್ಗೆ ಹಾಗೂ ಶಾರದಾ ಮಾತೆಯ ಪ್ರತಿಷ್ಟಾಪನೆ ಮಾಡಲಾಗುತ್ತದೆ. ವಿಜಯ ದಶಮಿಯಂದು ನಡೆಯುವ ಭವ್ಯ ಮೆರವಣಿಗೆಯೇ 'ಮಂಗಳೂರು ದಸರಾ'. ನಿಮ್ಮ ಮನೆಯಲ್ಲಿ, ಊರಿನಲ್ಲಿ ನವರಾತ್ರಿ ಆಚರಣೆ ಹೇಗೆ?
ಚಿತ್ರ
೮೪
ಕೆ.ಪಿ.ಅಶ್ವಿನ್ ರಾವ್
ಗಿರಿಮನೆ ಶ್ಯಾಮರಾವ್ ಅವರು ಬರೆದ "ಮಕ್ಕಳನ್ನು ಬೆಳೆಸುವುದು ಹೇಗೆ?' ಇದರ ಮೂರೂ ಭಾಗಗಳು ಲಭ್ಯವಿದೆ. ಮಕ್ಕಳನ್ನು ಬೆಳೆಸುವುದು ಹೇಗೆ (ಭಾಗ ೧), ಮಕ್ಕಳೊಡನೆ ಆಟ-ಪಾಠ ಒಡನಾಟ (ಭಾಗ ೨) ಮತ್ತು ನಾವು, ಮಕ್ಕಳು ಮತ್ತು ಶಿಕ್ಷಣ (ಭಾಗ ೩) ಒಂದೇ ಸೆಟ್ ನಲ್ಲಿ ಲಭ್ಯ. ವಿಶೇಷ ರಿಯಾಯಿತಿಯೂ ಇದೆ... sampada.net/sb/4X
ಚಿತ್ರ
ಸಂಪದ - Sampada.net
ಮಕ್ಕಳನ್ನು ಬೆಳೆಸುವುದು ಹೇಗೆ (ಭಾಗ 1,2 ಮತ್ತು 3) — ಗಿರಿಮನೆ ಶ್ಯಾಮರಾವ್
ಗಿರಿಮನೆ ಶ್ಯಾಮರಾವ್ ಅವರು ಬರೆದ "ಮಕ್ಕಳನ್ನು ಬೆಳೆಸುವುದು ಹೇಗೆ?' ಇದರ ಮೂರೂ ಭಾಗಗಳು ಲಭ್ಯವಿದೆ. ಮಕ್ಕಳನ್ನು ಬೆಳೆಸುವುದು ಹೇಗೆ (ಭಾಗ ೧), ಮಕ್ಕಳೊಡನೆ ಆಟ-ಪಾಠ ಒಡನಾಟ (ಭಾಗ ೨) ಮತ್ತು ನಾವು, ಮಕ್ಕಳು ಮತ್ತು ಶಿಕ್ಷಣ (ಭಾಗ ೩) ಒಂದೇ ಸೆಟ್ ನ...
೧೨೪
ಪ್ರಭಾಕರ ಹರ್ಲಾಪುರ ಪ್ರಭಾಕರ ಹರ್ಲಾಪುರ ಪ್ರತಿಕ್ರಿಯಿಸಿದ್ದಾರೆ
ಈ ಪುಸ್ತಕಗಳು ಇವತ್ತಿನ ಆಧುನಿಕ ಬದುಕಿಗೆ ತುಂಬಾ ಸಹಾಯವಾಗುತ್ತವೆ.
ಪ್ರತಿಕ್ರಿಯೆ ನೋಡಿ →
ಕೆ.ಪಿ.ಅಶ್ವಿನ್ ರಾವ್
ಬಾಲಿವುಡ್ ನ ಖ್ಯಾತ ನಟ, ನಿರ್ದೇಶಕ ನಾನಾ ಪಾಟೇಕರ್ ಇಂದು ನಿಧನರಾಗಿದ್ದಾರೆ. ನಾನಾ ಪಾಟೇಕರ್ ಎಂದ ಕೂಡಲೇ ನೆನಪಾಗುವುದು ಅವರ ಡೈಲಾಗ್ ಡೆಲಿವರಿಯ ಶೈಲಿ. ಅಸ್ಖಲಿತ, ಚಾಚೂ ತಪ್ಪದ ಉದ್ದನೆಯ ಸಂಭಾಷಣೆಗಳನ್ನು ಅವರು ಚಿತ್ರದಲ್ಲಿ ಹೇಳುತ್ತಿದ್ದರು. ಅವರ ಕ್ರಾಂತಿವೀರ್, ಅಬ್ ತಕ್ ಚಪ್ಪನ್, ಯಶವಂತ್, ಪ್ರಹಾರ್, ವೆಲ್ ಕಂ, ತಿರಂಗ, ಗುಲಾಮ್ ಎ ಮುಸ್ತಫಾ ಮೊದಲಾದ ಸಿನೆಮಾಗಳು ಮತ್ತೆ ಮತ್ತೆ ನೋಡುವಂತಹವುಗಳು. ನಾನಾ ಪಾಟೇಕರ್ ಅವರಿಗೆ ಶ್ರದ್ಧಾಂಜಲಿಗಳು...
ಚಿತ್ರ
೧೭೮
ಪ್ರಭಾಕರ ಹರ್ಲಾಪುರ ಪ್ರಭಾಕರ ಹರ್ಲಾಪುರ ಪ್ರತಿಕ್ರಿಯಿಸಿದ್ದಾರೆ
ನಾನಾ ಪಾಟೇಕರ್ ಅವರ ವ್ಯಕ್ತಿತ್ವವನ್ನು ನೋಡಿದರೆ, ಸರಳತೆ, ನೇರ ನಡೆ, ಆತ್ಮಗೌರವ ಮತ್ತು ಮಾನವೀಯತೆ ಪ್ರಮುಖವಾಗಿ ಕಾಣಿಸುತ್ತವೆ. ನಟನಾಗಿ ಅವರು ತಮ್ಮ ವಿಶಿಷ್ಟ ಧ್ವನಿ, ತೀವ್ರ ಅಭಿನಯ ಮತ್ತು ಸಹಜ...
ಪ್ರತಿಕ್ರಿಯೆ ನೋಡಿ →
ಕೆ.ಪಿ.ಅಶ್ವಿನ್ ರಾವ್
ಶ್ರೀ ಗಿರಿಮನೆ ಶ್ಯಾಮರಾವ್ ಇವರ 'ಮಲೆನಾಡಿನ ರೋಚಕ ಕಥೆಗಳು' ಸರಣಿಯ ಹೊಸ ಪುಸ್ತಕ 'ಬೀಟೆ ಕಾಡು' ಈಗ ಸಂಪದ ಪುಸ್ತಕ ಅಂಗಡಿಯಲ್ಲಿ ಲಭ್ಯವಿದೆ. ಒಂದಿಷ್ಟು ರಿಯಾಯಿತಿಯೂ ಇದೆ. ಮಲೆನಾಡಿನ ರೋಚಕ ಕಥೆಗಳು ಸರಣಿಯ ಎಲ್ಲಾ ಪುಸ್ತಕಗಳೂ ಮಾರಾಟಕ್ಕೆ ಲಭ್ಯವಿದೆ. sampada.net/sb/4O
ಚಿತ್ರ
ಸಂಪದ - Sampada.net
ಬೀಟೆ ಕಾಡು — ಗಿರಿಮನೆ ಶ್ಯಾಮರಾವ್
'ಬೀಟೆ ಕಾಡು' ಎಂಬುದು ಪ್ರಸಿದ್ಧ ಲೇಖಕ ಗಿರಿಮನೆ ಶ್ಯಾಮರಾವ್ ಅವರ ರೋಚಕ ಹಾಗೂ ಕುತೂಹಲಕಾರಿ ಕಥೆಗಳ ಸಂಕಲನವಾಗಿದೆ. ಮಲೆನಾಡಿನ ಸೊಬಗು ಹಾಗೂ ಅಲ್ಲಿನ ಕಾಡುಗಳ ರಹಸ್ಯಗಳನ್ನು ಆಧರಿಸಿ ಈ ಕೃತಿಯು ಮೂಡಿಬಂದಿದೆ. ಮಲೆನಾಡಿನ ರೋಚಕ ಕಥೆಗಳು ಸರಣಿಯ ಇಪ್ಪ...
೮೩
ಕೆ.ಪಿ.ಅಶ್ವಿನ್ ರಾವ್
ಖ್ಯಾತ ಕಾದಂಬರಿಕಾರ ಮತ್ತು ರಾಜಕಾರಣಿ ಜೆಫ್ರಿ ಆರ್ಚರ್ (Jeffery Archer) ಅಕ್ಟೋಬರ್ ೫ರಂದು ತಮ್ಮ ೮೬ನೇ ವಯಸ್ಸಿನಲ್ಲಿ ಲಂಡನ್ ನಲ್ಲಿ ನಿಧನರಾಗಿದ್ದಾರೆ ಎನ್ನುವ ಸುದ್ದಿ ಬಂದಿದೆ. ಆಂಗ್ಲ ಭಾಷೆಯಲ್ಲಿ ಉತ್ತಮ ಸಾಹಿತ್ಯ ಕೃತಿಗಳನ್ನು ರಚಿಸಿದ ಇವರು ಲಕ್ಷಾಂತರ ಓದುಗರ ಕಣ್ಮಣಿಯಾಗಿದ್ದರು. ಇವರ ಇಂಗ್ಲಿಷ್ ಕೃತಿಗಳನ್ನು ಓದಿದ 'ಸಂಪದ' ಓದುಗರ ಅವರ ನೆನಪುಗಳನ್ನು ಹಂಚಿಕೊಳ್ಳಬಹುದು...
ಚಿತ್ರ
೮೮
ಕೆ.ಪಿ.ಅಶ್ವಿನ್ ರಾವ್
ನಾಡಿಗ್ ಸರ್ ಬರೆದ 'ಸುಬ್ಬಣ್ಣನ ಸರ್ಕ್ಯುಲೇಟಿಂಗ್ ಲೈಬ್ರೆರಿ' ಓದಿ ನನಗೂ ಬಾಲ್ಯದ ದಿನಗಳು ನೆನಪಾದವು. ಆಗ ಮಂಗಳೂರಿನಲ್ಲಿ ಕೇಂದ್ರ ಗ್ರಂಥಾಲಯ ಜೊತೆಗೆ ಹಲವಾರು ಖಾಸಗಿ ಗ್ರಂಥಾಲಯಗಳೂ ಇದ್ದವು. ಅದರಲ್ಲಿ ಆಗ್ನೆಸ್ ಕಾಲೇಜು, ಬೆಂದೂರು ಬಳಿಯ ನಂದನ್ ಲೈಬ್ರೆರಿಯೂ ಒಂದು. ನನಗೆ ಪತ್ತೇದಾರಿ ಕಾದಂಬರಿಗಳ ಹುಚ್ಚು ಹಿಡಿಸಿದ್ದು ಇದೇ ಲೈಬ್ರೆರಿ. ಎನ್ ನರಸಿಂಹಯ್ಯನವರ ಎಲ್ಲಾ ಹಳೆಯ ಪತ್ತೇದಾರಿ ಕಾದಂಬರಿಗಳು ಇಲ್ಲಿ ಸಿಗುತ್ತಿದ್ದವು. ತಲಾ ೨೫ ಪೈಸೆ ಬಾಡಿಗೆಯ ಮೇಲೆ ತೆಗೆದುಕೊಂಡು ಬಂದು ಓದುತ್ತಿದ್ದೆ. ಈಗ ಮಂಗಳೂರಿನಲ್ಲಿ ಖಾಸಗಿ ಗ್ರಂಥಾಲಯಗಳೇ ಇಲ್ಲವಾಗಿದೆ. ಈಗ ನಂದನ್ ಲೈಬ್ರೆರಿಯೂ ಇಲ್ಲ. ಅಪರೂಪದ ಪುಸ್ತಕಗಳು ಏನಾದುವೋ?
೧೬೭
ಹರಿ ಪ್ರಸಾದ್ ನಾಡಿಗ್ ಹರಿ ಪ್ರಸಾದ್ ನಾಡಿಗ್ ಪ್ರತಿಕ್ರಿಯಿಸಿದ್ದಾರೆ
ಅಪರೂಪದ ಪುಸ್ತಕಗಳು ಏನಾದವು ಅಂತ ನಾನೂ ಯೋಚಿಸುತ್ತಿದ್ದೆ. ಅಕಸ್ಮಾತ್ ಪುಸ್ತಕಗಳು ಸಿಕ್ಕಲ್ಲಿ ನೋಡಿ - ನಾವೇ ಒಂದು ಮಂಗಳೂರಿನಲ್ಲಿ ಲೈಬ್ರರಿ ಮಾಡುವ!
ಪ್ರತಿಕ್ರಿಯೆ ನೋಡಿ →
ಕೆ.ಪಿ.ಅಶ್ವಿನ್ ರಾವ್
ನಮ್ಮ ದೇಶದ ಎರಡನೇ ಅತೀ ದೊಡ್ಡ ತೈಲ ಸಂಸ್ಕರಣ ಸಂಸ್ಥೆಯಾದ ಎಂ ಆರ್ ಪಿ ಇಲ್ ನಲ್ಲಿ ಇತ್ತೀಚೆಗೆ ದುರ್ಘಟನೆಯೊಂದು ನಡೆದು ಅಮಾಯಕ ಜೀವವೊಂದು ಬಲಿಯಾಯಿತು. ಇದನ್ನೇ ನೆಪವಾಗಿಟ್ಟುಕೊಂಡು ಕಾರ್ಖಾನೆಯನ್ನು ಮುಚ್ಚಬೇಕು ಎಂದು ಕೆಲವು ಮಂದಿ ಕೂಗಾಡುತ್ತಿರುವುದು ಎಷ್ಟು ಸರಿ? ಸಾವಿರಾರು ಮಂದಿಗೆ ಕೆಲಸ ನೀಡಿದ ಮತ್ತು ಇನ್ನೂ ಸಾವಿರಾರು ಮಂದಿಗೆ ಪರೋಕ್ಷವಾಗಿ ಆದಾಯ ನೀಡುತ್ತಿರುವ ಇಷ್ಟೊಂದು ದೊಡ್ಡ ಸಂಸ್ಥೆಯನ್ನು ಬಂದ್ ಮಾಡಿ ಎಂದು ಹೇಳುವುದು ನ್ಯಾಯೋಚಿತವೇ? ಕನ್ನಡಿಗರಿಗೆ ಇನ್ನೂ ಸ್ವಲ್ಪ ಮಟ್ಟಿನ ಪ್ರಾಧಾನ್ಯತೆಯನ್ನು ನೀಡಬೇಕಾಗಿರುವುದು ಉಚಿತವೇ ಆದರೂ ಇಡೀ ಸಂಸ್ಥೆಯನ್ನೇ ಬಂದ್ ಮಾಡಿ ಎನ್ನುವ ಕೂಗು ಎಷ್ಟರ ಮಟ್ಟಿಗೆ ಸರಿ?
೧೨೧
ಪ್ರಭಾಕರ ಹರ್ಲಾಪುರ ಪ್ರಭಾಕರ ಹರ್ಲಾಪುರ ಪ್ರತಿಕ್ರಿಯಿಸಿದ್ದಾರೆ
ಇಡೀ ಸಂಸ್ಥೆಯನ್ನೇ ಬಂದ್ ಮಾಡಿ ಎನ್ನುವುದು ಸರಿಯಲ್ಲ, ಸಾವಿರಾರು ಜನರಿಗೆ ಉದ್ಯೋಗದ ಆಸರೆ ನೀಡಿರುವ ಕಂಪನಿ ಅದು.
ಪ್ರತಿಕ್ರಿಯೆ ನೋಡಿ →