ಕೆ.ಪಿ.ಅಶ್ವಿನ್ ರಾವ್
ashwinrao47
೩೯ ಪೋಸ್ಟ್‌ಗಳು
೨೧ ಅನುಯಾಯಿಗಳು
ಸೇರಿದ ದಿನಾಂಕ: ಶುಕ್ರವಾರ, ಜನವರಿ ೧೭, ೨೦೨೦
ಇಂದಿನಿಂದ ಮೂರು ದಿನ (ಸೆ. ೨೭-೩೦) ಬ್ಯಾಂಕ್ ಮುಷ್ಕರ. ಈಗಿನ ಇಂಟರ್ ನೆಟ್ ಬ್ಯಾಂಕಿಂಗ್, ಎಟಿಎಂ, ಯುಪಿಐ ಪಾವತಿ, ನೆಫ್ಟ್, ಆನ್ ಲೈನ್ ಲೋನ್ ಮುಂತಾದ ವ್ಯವಸ್ಥೆಗಳ ನಡುವೆ ಈ ಬ್ಯಾಂಕ್ ಮುಷ್ಕರ ಎಷ್ಟರ ಮಟ್ಟಿಗೆ ಜನ ಸಾಮಾನ್ಯರಿಗೆ ತೊಂದರೆ ನೀಡಬಹುದು?
ಕೆ.ಪಿ.ಅಶ್ವಿನ್ ರಾವ್
ಪ್ರತಿಕ್ರಿಯಿಸಿದ್ದಾರೆ
ಇದೀಗ ಬಂದ ಸುದ್ದಿ. ಮೂರು ದಿನಗಳ ಬ್ಯಾಂಕ್ ಮುಷ್ಕರ ರದ್ದಾಗಿದೆ. ಆದರೂ ನಾನು ಎತ್ತಿದ ಪ್ರಶ್ನೆಗಳು ಪ್ರಸ್ತುತವಾಗಿವೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ಮುಷ್ಕರ ನಡೆದಾಗ ಜನ ಸಾಮಾನ್ಯರು ಎಷ್ಟು ತೊಂದ...
ಪ್ರತಿಕ್ರಿಯೆ ನೋಡಿ →
ಹನ್ನೆರಡು ವರ್ಷಗಳಿಗೊಮ್ಮೆ ಮಾತ್ರ ಅರಳುವ ನೀಲಿ ಕುರಂಜಿ ಹೂವು ನಾಲ್ಕು ವರ್ಷಗಳ ಮೊದಲೇ (ಹಿಂದೆ ಅರಳಿದ್ದು ೨೦೧೮ರಲ್ಲಿ) ಕುದುರೆಮುಖದಲ್ಲಿ ಅರಳಿ ನಿಂತದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಶೋಲ ಅರಣ್ಯಗಳಲ್ಲಿ ಮಾತ್ರ ಕಾಣಸಿಗುವ ಈ ಹೂವು ಅವಧಿಗೂ ಮುಂಚೆ ಅರಳಿ ನಿಂತದ್ದು ಏಕಿರಬಹುದು? ನೀಲಿ ಕುರಂಜಿ ಹೂವಿನ ಹೊಸ ತಳಿಯೊಂದರ ಆಗಮನದ ಮುನ್ಸೂಚನೆಯೇ?
ಪ್ರಭಾಕರ ಹರ್ಲಾಪುರ
ಪ್ರತಿಕ್ರಿಯಿಸಿದ್ದಾರೆ
ಪರಿಸರದ ವ್ಯತಿರಿಕ್ತ ಬದಲಾವಣೆಗಳಿಂದ ಬೇಗನೇ ಅರಳಿರಬಹುದು.
ಪ್ರತಿಕ್ರಿಯೆ ನೋಡಿ →
‘ದಾಸ್ಯದಿಂದ ಆಚೆಗೆ' (Up From Slavery)- ಅಮೆರಿಕಾ ಸಂಯುಕ್ತ ಸಂಸ್ಥಾನವು ಜನ್ಮ ಕೊಟ್ಟ ಪುರುಷ ಶ್ರೇಷ್ಠನೊಬ್ಬನ ಆತ್ಮಕಥೆ. ಗುಲಾಮನಾಗಿ ಹುಟ್ಟಿದ ವ್ಯಕ್ತಿಯೊಬ್ಬ ತನ್ನ ನಿರಂತರ ದುಡಿಮೆ ಮತ್ತು ದರ್ಶನ ಪ್ರತಿಭೆಯಿಂದ ಕಥೆಯಿದು. ತೋಟದಲ್ಲಿ ದಾಸಿಯಾಗಿದ್ದವಳ ಹೊಟ್ಟೆಯಲ್ಲಿ ತಂದೆ ಯಾರೆಂದು ತಿಳಿಯದೆ ಜನಿಸಿದ ವ್ಯಕ್ತಿ ಶಿಕ್ಷಣ ಪಡೆಯಲು ನಡೆಸಿದ ಹೋರಾಟಗಾಥೆಯಿದು. ಯಾರು ಈ ವ್ಯಕ್ತಿ? ತಿಳಿಯಲು ಅವಶ್ಯವಾಗಿ ಈ ಲಿಂಕ್ ಕ್ಲಿಕ್ ಮಾಡಿ…
sampada.net/s/eqs
ಸಂಪದ - Sampada.net
ದಾಸ್ಯದಿಂದ ಆಚೆಗೆ
'ದಾಸ್ಯದಿಂದ ಆಚೆಗೆ' (Up From Slavery)- ಅಮೆರಿಕಾ ಸಂಯುಕ್ತ ಸಂಸ್ಥಾನವು ಜನ್ಮ ಕೊಟ್ಟ ಪುರುಷ ಶ್ರೇಷ್ಠನೊಬ್ಬನ ಆತ್ಮಕಥೆ. ಗುಲಾಮನಾಗಿ ಹುಟ್ಟಿದ ವ್ಯಕ್ತಿಯೊಬ್ಬ ತನ್ನ ನಿರಂತರ ದುಡಿಮೆ ಮತ್ತು ದರ್ಶನ ಪ್ರತಿಭೆಯಿಂದ ಕಥೆಯಿದು. ರಾಜಕೀಯ ಅಧಿಕಾರದ...
ಈ ವರ್ಷ ಮಳೆಯ ವಿಪರೀತ ಕೊರತೆ. ಮಳೆಗಾಲದಲ್ಲಿ ಧಾರಾಳವಾಗಿ ಕಂಡು ಬರುತ್ತಿದ್ದ ಮಿಂಚು ಹುಳುಗಳೂ ನಾಪತ್ತೆಯಾಗಿವೆ. ನಿನ್ನೆ ಅಚಾನಕ್ಕಾಗಿ ಒಂದು ಮಿಂಚು ಹುಳ ನಮ್ಮ ಮನೆಗೇ ಬಂದಿತ್ತು. ರಾತ್ರಿಯಿಡೀ ಬೆಳಗುತ್ತಿತ್ತು. ಅಚ್ಚರಿಯ ಜೊತೆಗೆ ಆನಂದವೂ ಆಯಿತು. ಕೊನೆಗೆ ತುಂಬಾ ನೋವೂ ಆಯಿತು. ರಾಶಿ ರಾಶಿ ಕಾಣಿಸುತ್ತಿದ್ದ ಮಿಂಚು ಹುಳುಗಳ ಸಂಖ್ಯೆ ಕಡಿಮೆ ಏಕಾಯಿತು?
ಪ್ರಭಾಕರ ಹರ್ಲಾಪುರ
ಪ್ರತಿಕ್ರಿಯಿಸಿದ್ದಾರೆ
ವಿಪರೀತ ವಾಯುಮಾಲಿನ್ಯ ಮತ್ತು ಅತಿಯಾದ ಮೊಬೈಲ್ ಟವರ್ ಗಳ ಸಂಖ್ಯೆ - ಆ ಪುಟ್ಟ ಜೀವಕ್ಕೆ ಕಸಿವಿಸಿಯಾಗುತ್ತದೆ
ಪ್ರತಿಕ್ರಿಯೆ ನೋಡಿ →
ಬಹುತೇಕ ನಗರಗಳಲ್ಲಿ "ಟ್ರಾಫಿಕ್ ಜಾಮ್" ಸಮಸ್ಯೆ. ಬೆಂಗಳೂರಿನಲ್ಲಿ ಸದಾ ಕಂಡುಬರುತ್ತಿದ್ದ ಸಮಸ್ಯೆ ಈಗ ಮಂಗಳೂರು, ಮೈಸೂರು, ಹುಬ್ಳಿ-ಧಾರವಾಡಕ್ಕೂ ಹಬ್ಬಿದೆ. ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಸಮಸ್ಯೆ ಅನುಭವಿಸುವಾಗ ನಿಮ್ಮಲ್ಲಿ ಮೂಡುವ ಭಾವವಾದರೂ ಏನು? ವ್ಯವಸ್ಥೆಯ ಬಗ್ಗೆ ಕೋಪ, ಬೇಗ ಹೊರಟು ಬಾರದೇ ಇರಲು ನಿಮ್ಮ ಮೇಲೆಯೇ ಬೇಸರ, ಅಗತ್ಯಕ್ಕಿಂತ ಜಾಸ್ತಿ ವಾಹನಗಳಿಗೆ ಅನುಮತಿ... ಹೀಗೆ ಅನೇಕ ಕಾರಣಗಳಿರಬಹುದು. ನಿಮಗೆ ಅನಿಸಿದ್ದು ಹೇಳಿ...
ಪ್ರಭಾಕರ ಹರ್ಲಾಪುರ
ಪ್ರತಿಕ್ರಿಯಿಸಿದ್ದಾರೆ
ಬೇಗ ಬರುವುದು ಒಳ್ಳೆಯದು. ಜೊತೆಗೆ ವ್ಯವಸ್ಥೆಯನ್ನು ಇನ್ನೂ ಉತ್ತಮಗೊಳಿಸಬೇಕು. ಎಲ್ಲಿಯೂ ಕೂಡ ವ್ಯವಸ್ಥೆ ಸರಿಯಾಗಿಲ್ಲ.
ಪ್ರತಿಕ್ರಿಯೆ ನೋಡಿ →
ಪ್ರತಿಯೊಂದು ಊರಿಗೂ ಆ ಹೆಸರು ಬರಲು ಒಂದು ಕಾರಣ, ಇತಿಹಾಸ ಇದ್ದೇ ಇರುತ್ತದೆ. ನಮ್ಮ ಊರಿಗೂ ಇದೆ, ನಿಮ್ಮ ಊರಿಗೂ ಇದೆ. ಸುಂದರ ನಗರವಾದ ಸಿಂಗಾಪುರಕ್ಕೆ ಆ ಹೆಸರು ಬರಲು ಕಾರಣವೇನು ಗೊತ್ತೇ?
ಸುಳಿವು ಆ ಹೆಸರಿನಲ್ಲೇ ಇದೆ. ಬೇಗನೇ ಪ್ರತಿಕ್ರಿಯಿಸಿ.
ಕೆ.ಪಿ.ಅಶ್ವಿನ್ ರಾವ್
ಪ್ರತಿಕ್ರಿಯಿಸಿದ್ದಾರೆ
ಸಿಂಗಾಪುರಕ್ಕೆ ಆ ಹೆಸರು ಬಂದ ಕಥೆ ಓದಲು...
https://sampada.net/s/epG ಲಿಂಕ್ ಕ್ಲಿಕ್ ಮಾಡಿ
ಪ್ರತಿಕ್ರಿಯೆ ನೋಡಿ →
ಸತ್ಯ ಹೇಳಿ, ನೀವು ನಿಮ್ಮ ಬಾಲ್ಯದಲ್ಲಿ 'ಅಮರ ಚಿತ್ರ ಕಥಾ, ಬಾಲಮಿತ್ರ, ಬೊಂಬೆಮನೆ, ಇಂದ್ರಜಾಲ ಕಾಮಿಕ್ಸ್, ಚಂದಮಾಮ ಓದಿರುವಿರಾ? ಮಕ್ಕಳಾಗಿರುವಾಗ ಇಂತಹ ಪುಸ್ತಕ ಓದುವುದೇ ಒಂದು ಮಜಾ ಆದರೆ ದೊಡ್ಡವರಾದ ಬಳಿಕವೂ ಬಾಲ್ಯದ ನೆನಪು ತಾಜಾ ಗೊಳಿಸಲು ಅಮರ ಚಿತ್ರ ಕಥಾ ಸರಣಿ ಓದುವುದು ಉತ್ತಮ ಆಯ್ಕೆ...
'ಸಂಪದ' ಜಾಲ ತಾಣದಲ್ಲಿ ಈ ಸರಣಿಯ ಹಲವಾರು ಪುಸ್ತಕಗಳು ಲಭ್ಯ... ಇಲ್ಲಿದೆ ನೋಡಿ ಲಿಂಕ್ sampada.net/sb/2b
ಕ್ಲಿಕ್ ಮಾಡಿ, ಖರೀದಿಸಿ...
ಸಂಪದ - Sampada.net
ಅಮರ ಚಿತ್ರ ಕಥಾ — ಕನ್ನಡ ಸೆಟ್ (46 ಪುಸ್ತಕಗಳು) — ಅಮರ ಚಿತ್ರ ಕಥಾ
ಅಮರ ಚಿತ್ರ ಕಥಾದ 46 ಕನ್ನಡ ಚಿತ್ರಕಥೆಗಳ ಸಂಪೂರ್ಣ ಸೆಟ್ — ಒಟ್ಟಿಗೆ ಖರೀದಿಸಿ.
ಇಂದು ರಕ್ಷಾ ಬಂಧನ. ಸಹೋದರತೆಯ ಸಂಕೇತ. ನಾನು ಸಣ್ಣವನಿದ್ದಾಗ ನನಗೂ ಒಡಹುಟ್ಟಿದ ಅಕ್ಕ, ತಂಗಿ ಇರಬೇಕು, ಅವರು ನನಗೆ ರಾಖಿ ಕಟ್ಟಬೇಕು ಎನ್ನೋ ಆಸೆ ತುಂಬಾ ಇತ್ತು. ದೊಡ್ಡಪ್ಪ, ಚಿಕ್ಕಮ್ಮನ ಮಕ್ಕಳು ಬಂದು ರಾಖಿ ಕಟ್ಟಿ ಹೋಗುತ್ತಿದ್ದರು. ಮುಂದಿನ ದಿನಗಳಲ್ಲಿ ಪರಿಚಯದ ಹಲವಾರು ಮಂದಿ ರಾಖಿ ಕಟ್ಟುತ್ತಿದ್ದರು. ವರ್ಷಗಳು ಕಳೆದಂತೆ ಕೈಯಲ್ಲಿ ರಾಖಿಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತಿವೆ. ರಾಖಿ ಎನ್ನುವುದು ಕೇವಲ 'ಶೋ ಆಫ್' ವಸ್ತುವಾಯಿತೇ? ಯಾಂತ್ರಿಕ ಬದುಕಿನಲ್ಲಿ ಸಂಬಂಧಗಳನ್ನೇ ಮರೆತೆವಾ? ಇರಲಿ...
ನಿಮ್ಮಲ್ಲಿ ರಕ್ಷಾಬಂಧನ ಹೇಗಾಯಿತು? ಬರೆಯಿರಿ.
ಎಲ್ಲರಿಗೂ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು
ಪ್ರಭಾಕರ ಹರ್ಲಾಪುರ
ಪ್ರತಿಕ್ರಿಯಿಸಿದ್ದಾರೆ
ನನ್ನ ಸಹೋದರಿ ಪೋಸ್ಟ್ ನಿಂದ ರಾಖಿಯನ್ನು ಕಳುಹಿಸಿದ್ದಾರೆ. ತುಂಬಾ ಖುಷಿ ಆಯಿತು.
ಪ್ರತಿಕ್ರಿಯೆ ನೋಡಿ →
ಹಿಂದೆಲ್ಲಾ ಓದಲು ಪುಸ್ತಕಗಳ ಕೊರತೆ ಇತ್ತು, ಈಗ ಪುಸ್ತಕಗಳೇನು ತಿಂಗಳಿಗೆ ನೂರಾರು ಬಿಡುಗಡೆಯಾಗುತ್ತಿವೆ. ಕೊಂಡು ಓದುವ ಮನಸ್ಸುಗಳು ಕಡಿಮೆಯಾಗುತ್ತಿವೆಯೇ? ಕೈಯಲ್ಲಿ ಪುಸ್ತಕ ಹಿಡಿದುಕೊಂಡು ಒಂದೊಂದೇ ಪುಟ ತಿರುವುತ್ತಾ ಓದುವುದೇ ಒಂದು ಮಧುರ ಅನುಭವ. ಅಂದ ಹಾಗೆ ನೀವು ಇತೀಚೆಗೆ ಯಾವ ಪುಸ್ತಕ ಓದಿರುವಿರಿ? ತಿಳಿಸಿ. ನಮಗೂ ಉಪಯೋಗವಾಗಬಹುದು.
ಪುಸ್ತಕ ಕೊಳ್ಳುವ ಮನಸಿದ್ದಲ್ಲಿ 'ಪುಸ್ತಕ ಸಂಪದ' ಕ್ಕೆ ಭೇಟಿ ನೀಡಿ. ಅಪರೂಪದ ಪುಸ್ತಕಗಳು ನಿಮಗಾಗಿ ಕಾಯುತ್ತಿವೆ....
ಐನಂಡ ಪ್ರಭುಕುಮಾರ್
ಪ್ರತಿಕ್ರಿಯಿಸಿದ್ದಾರೆ
ನಾನೀವಾಗ ಶ್ರೀ ಎಸ್ ಎಲ್ ಭೈರಪ್ಪನವರ "ಭಿತ್ತಿ"ಯನ್ನು ಓದಲಾರಂಭಿಸಿದ್ದೇನೆ. ಎಂದಿನಿಂದಲೋ ಓದಬೇಕು ಎಂದುಕೊಂಡಿದ್ದ ಪುಸ್ತಕ. ನೀವೆಲ್ಲಾ ಅದನ್ನು ಈಗಾಗಲೇ ಓದಿರಬಹುದು.
ಪ್ರತಿಕ್ರಿಯೆ ನೋಡಿ →
ಶ್ರಾವಣ ಮಾಸದಲ್ಲಿ ನಮ್ಮ ಮನೆಯಲ್ಲಿ ಪ್ರತೀ ಶುಕ್ರವಾರ ಮತ್ತು ಭಾನುವಾರ 'ಚೂಡಿ' ಸಂಭ್ರಮ. ಗರಿಕೆ ಹುಲ್ಲಿನ ಜೊತೆ ಹೂವುಗಳನ್ನು ಸೇರಿಸಿ ಬಿಗಿಯಾಗಿ ಕಟ್ಟಿ 'ಚೂಡಿ' ಮಾಡುತ್ತಾರೆ. ಇದನ್ನು ದೇವರ ಬಳಿ, ತುಳಸಿ ಕಟ್ಟೆಯ ಬಳಿ ಇಟ್ಟು ಸುಮಂಗಲಿಯರು ಪೂಜಿಸಿ ಮುಡಿದುಕೊಳ್ಳುತ್ತಾರೆ. ಕುಟುಂಬದ ಸದಸ್ಯರು, ಸ್ನೇಹಿತೆಯರ ಜೊತೆ ಹಂಚಿಕೊಳ್ಳುತ್ತಾರೆ.
ನಿಮ್ಮಲ್ಲಿ ಶ್ರಾವಣ ಪೂಜೆಯ ವಿಶೇಷತೆ ಏನು?
ಸುಮ ನಾಡಿಗ್
ಪ್ರತಿಕ್ರಿಯಿಸಿದ್ದಾರೆ
ನಾನು ಚಿಕ್ಕವಳಿದ್ದಾಗ, ಅಮ್ಮ ಚೂಡಿ ಮಾಡುತ್ತಿದ್ದರು..
ಪ್ರತಿಕ್ರಿಯೆ ನೋಡಿ →
ಈ ವರ್ಷ ಮಂಗಳೂರಿಗೆ ಬಯಲು ಸೀಮೆಯ ಮಳೆ ಬಂದಿದೆ. ದೊಡ್ಡ ಮೋಡ, ಐದೇ ನಿಮಿಷ ಮಳೆ, ಮತ್ತೆ ಬಿರು ಬಿಸಿಲು. ಮಂಗಳೂರು ಸುತ್ತ ಮುತ್ತ ಸಾಕಷ್ಟು ಮಳೆಯಾಗುತ್ತಿದ್ದರೂ ನಗರ ಪ್ರದೇಶದಲ್ಲಿ ದಿನಕ್ಕೆ ಮೂರು-ನಾಲ್ಕು ಸಲ ಮಾತ್ರ ಮಳೆ ಬಂದು ಹೋಗುತ್ತಿದೆ. ಹಿಂದೆಲ್ಲಾ ವಾರವಿಡೀ ಸುರಿಯುತ್ತಿದ್ದ ಮಳೆ ಈ ವರ್ಷ ನೆನಪಾಗಿಯಷ್ಟೇ ಉಳಿದಿದೆ.
ಇನ್ನು ಅಷ್ಟಮಿ, ಚೌತಿ, ನವರಾತ್ರಿ ಹೊತ್ತಿಗೆ ಮಳೆ ಬರುತ್ತಾ, ಕಾದು ನೋಡಬೇಕು... ಅಂದ ಹಾಗೆ ನಿಮ್ಮೂರಿನಲ್ಲಿ ಮಳೆ ಹೇಗಿದೆ?
ಪ್ರಭಾಕರ ಹರ್ಲಾಪುರ
ಪ್ರತಿಕ್ರಿಯಿಸಿದ್ದಾರೆ
ನಮ್ಮೂರಲ್ಲಿಯೂ ಕೂಡ ಮಳೆ ಕಡಿಮೆ
ಪ್ರತಿಕ್ರಿಯೆ ನೋಡಿ →
ಇಂದು (ಆಗಸ್ಟ್ ೧೭) ನಾಡಿಗೆ ದೊಡ್ದ ಹಬ್ಬವಾದ ನಾಗರ ಪಂಚಮಿ ಆಚರಣೆ ಮಾಡುವ ದಿನ. ಅವಿಭಜಿತ ದಕ್ಷಿಣ ಕನ್ನಡದ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಹಬ್ಬದ ಆಚರಣೆ ಕಳೆ ಕಟ್ಟಿದೆ. ಆದರೆ ಬಹಳಷ್ಟು ನಾಗ ಬನಗಳು ಕಾಂಕ್ರೀಟ್ ಕಾಡಿನ ಒಳಗೆ ಬಂಧಿಯಾಗಿವೆ. ಇಂತಹ ವಾತಾವರಣದಲ್ಲಿ ನಿಜವಾದ ನಾಗರ ಹೇಗೆ ಬದುಕುತ್ತದೆ? ಹಾವುಗಳು ಸಹಜವಾಗಿ ಬದುಕುವ ಪರಿಸರ ನಿರ್ಮಾಣವಾಗಬೇಕು. ನಿಮ್ಮ ಕುಟುಂಬದಲ್ಲಿ ನಾಗಬನ ಇದ್ದರೆ ಅದು ಹೇಗಿದೆ? ಪರಿಸರಕ್ಕೆ ಸೂಕ್ತವಾಗಿದೆಯೇ? ಹಾವುಗಳು ವಾಸಿಸಲು ಯೋಗ್ಯವೇ? ಪೂಜೆ ಹೇಗೆ ಮಾಡಿದಿರಿ? ಎಲ್ಲವನ್ನೂ ಬರೆಯಿರಲ್ಲ...
ಎಲ್ಲರಿಗೂ ೮೦ ನೇ ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಶಯಗಳು. ಪ್ರತೀ ವರ್ಷ ಸ್ವಾತಂತ್ರ್ಯ ದಿನ ಬಂದಾಗ ನನ್ನ ಮನಸ್ಸು ೩೫-೪೦ ವರ್ಷಗಳ ಹಿಂದೆ ನಾವು ಮಕ್ಕಳಾಗಿದ್ದಾಗ ಆಚರಣೆ ಮಾಡುತ್ತಿದ್ದ ನೆನಪು ಆಗುತ್ತದೆ. ತೆಂಗಿನ, ಈಚಲು ಮರದ ಗರಿಗಳನ್ನು ಸಂಗ್ರಹಿಸಿ ಅದರಿಂದ ಸ್ಟೇಜ್ ಅನ್ನು ಅಲಂಕರಿಸಿ, ಹಿರಿಯರಿಂದ ಧ್ವಜಾರೋಹಣ ಮಾಡಿಸಿ, ಲಡ್ಡು ತಿಂದ ನೆನಪು ಎಂದೂ ಮರೆಯಲಾಗದ್ದು.
ನಿಮ್ಮ ಬಾಲ್ಯದ ಸ್ವಾತಂತ್ರ್ಯ ದಿನದ ನೆನಪುಗಳನ್ನು ಹಂಚಿಕೊಳ್ಳಬಹುದಲ್ಲ...