ಇವತ್ತೇನೋ ಸಂಭ್ರಮ, ಎಲ್ಲರೂ ಸಿಹಿ ಹಂಚುವವರು, ಶುಭಾಶಯ ತಿಳಿಸುವವರು, ನಂಬಿದವಳ ಜೊತೆ ಬದುಕನ್ನ 25 ಸಂವತ್ಸರಗಳನ್ನ ದಾಟಿಯಾಗಿದೆ. ಬದುಕೆಲ್ಲವೂ ನಗುವಿನ ತೋರಣವಲ್ಲ ಅಲ್ಲಲ್ಲಿ ಬಾಡಿದ ಮುಖಗಳು ಕಣ್ಣೀರಿನ ಹನಿಗಳು ನೋವಿನ ಹೆಜ್ಜೆಗಳು ಕಳೆದುಕೊಂಡ ವ್ಯಥೆಗಳು, ಗೆಲುವಿನ ನಗುಗಳು ,ಬೆನ್ನಿಗೆ ನಿಂತವರ ಸಮಾಧಾನ ಮಾತುಗಳು ಎಲ್ಲವೂ ಜೊತೆಯಾಗಿದ್ದವು. ಕೆಲವೊಮ್ಮೆ ಬದುಕಿಷ್ಟು ದೂರದವರೆಗೆ ಸಾಗಿ ಬರುತ್ತೆ ಅನ್ನುವ ಯೋಚನೆಯೂ ಕೂಡ ಇರಲಿಲ್ಲ. ಇವತ್ತು ಜೋರು ಮಳೆಗೂ ನೆಮ್ಮದಿಯಾಗಿ ಮಲಗಬಹುದೆಂಬ ಅನುಭವವ ಜೊತೆಯಾಗಿದೆ, ಸೂರಿದೆ ನಂಬಿಕೆ ಇದೇ ಪ್ರೀತಿ ವಿಶ್ವಾಸ ಜೊತೆಗಿದೆ ಸಂವತ್ಸರಗಳು ಸುಲಭವಾಗಿ ಸಾಗುತ್ತವೆ ನಂಬಿಕೆ ಇರಬೇಕು ಆತ್ಮವಿಶ್ವಾಸ ಜೊತೆಗಿರಬೇಕು ನಮ್ಮವರು ಅಂದುಕೊಂಡವರು ನಮ್ಮ ಜೊತೆಗಿರಬೇಕು ಹೆಜ್ಜೆಗಳನ್ನ ದಾಟಿ ಬಂದಮೇಲೆ ಒಮ್ಮೆ ತಿರುಗಿ ನೋಡಿದಾಗ ಅಲ್ಲಿ ನೋವು ನಲಿವು ಕಣ್ಣೀರುಗಳಿದ್ದಾಗ ಮಾತ್ರ ಸಾಗಿ ಬಂದ ದಾರಿಗೂ ಗೌರವ ಹೆಚ್ಚುತ್ತದೆ. ಹಾಗಾಗಿ ಬದುಕಿನ ಯಾತ್ರೆಯನ್ನ ಇನ್ನೂ ದೂರ ಸಾಗಿಸುವವರಿದ್ದೇವೆ .ಹೀಗೆ ಜೊತೆಗಿರೋಣ ಇನ್ನೊಂದಷ್ಟು ಹೆಚ್ಚು ಜನರನ್ನು ಜೊತೆ ಸೇರಿಸೋಣ. ಹೀಗಂದ ದಂಪತಿಗಳ ಮಾತು ಸುತ್ತ ನಿಂತವರಿಗೆ ಪ್ರೇರೇಣೆಯನ್ನು  ನೀಡಿತು. ಹಾಗೆ ಕೇಳಿದವನು ಒಳ್ಳೆಯ ವಿಚಾರಗಳನ್ನ ಜೇಬಿನೊಳಕ್ಕೆ ತುಂಬಿಸಿಕೊಂಡು ಮನೆ ಕಡೆಗೆ ನಡೆಯ ಹೊರಟೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ