ನಿನಗೆ ಅರ್ಥವಾಗಬೇಕು, ಆತ ನಿನ್ನನ್ನ ಬೈದು ದೂರವಿಟ್ಟಿದ್ದಾನೆ ಅಂತ ಅಂದ್ರೆ ನೀನೇನೊ ತಪ್ಪು ಮಾಡಿದ್ದೀಯಾ ಅಂತ. ಮನೆಗೆ ಬಾಗಿಲು ಕಿಟಕಿ ಗೋಡೆ ಇದೆಲ್ಲವೂ ಮನೆಯೊಳಗಿನ ಪ್ರವೇಶವನ್ನು ನಿರ್ಬಂಧಿಸುತ್ತೆ. ಬಾಗಿಲು ಕಿಟಕಿಗಳನ್ನ ಹಾಕಿದೆ ಅಂದ ಕಾರಣಕ್ಕೆ ಮನೆಯೊಳಕ್ಕೆ ಪ್ರವೇಶವಿಲ್ಲ ಅಂತರ್ಥ. ಹಾಗೆಯೇ ನೀನು ನಿನ್ನೆದುರುಗಿ ನಿಂತಿರುವ ವ್ಯಕ್ತಿಯ ಆತನೇ ಏಕಾಂತಕ್ಕೆ ಭಂಗ ತರ್ತಾ ಇದಿಯೋ ಆತನ ಮಾತಿಗೆ ನೀನು ಪ್ರವೇಶವಾಗಬೇಕೋ ಆತನನ್ನ ಪೂರ್ತಿ ಅರ್ಥೈಸಿಕೊಳ್ಳಬೇಕೋ ಆತ ಕಿಟಕಿ ಬಾಗಿಲು ಗೋಡೆಗಳನ್ನು ಹಾಕಿಕೊಂಡಿದ್ದಾನೋ ಇದೆಲ್ಲವನ್ನು ಗಮನಿಸಬೇಕು. ಪ್ರತಿಯೊಬ್ಬನಿಗೂ ಆತನ ಏಕಾಂತ ಅಂತ ಇರುತ್ತೆ ಅದನ್ನ ಅರ್ಥ ಮಾಡಿಕೊಂಡು ವ್ಯವಹರಿಸಿದರೆ ಪ್ರತಿಯೊಬ್ಬನ ಜೊತೆಗೂ ಉತ್ತಮ ಸಂವಹನ ಏರ್ಪಡುತ್ತೆ. ಆ ಕಾರಣಕ್ಕೆ ಇಂದು ಅವನು ಬೈದಿರೋದು ಅಪ್ಪ ಅರ್ಥವಾಗುವ ಹಾಗೆ ಹೇಳಿದ ಮಾತು ಮನಸ್ಸಿನ ಬಳಗೆ ಪ್ರವೇಶವಾಯಿತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!