ನಾವ್ಯಾಕೆ ಇಲ್ಲಿದ್ದೇವೆ? ನಿಮ್ಮೂರಲ್ಲಿ ಜೈಲ್ ಒಳಗೆ ಬದುಕುತ್ತಿರುವವರು ಯಾವುದೋ ತಪ್ಪು ಮಾಡಿದ್ದ ಕಾರಣಕ್ಕೆ ಬೇರೆಯವರಿಗೆ ತೊಂದರೆ ಕೊಟ್ಟ ಕಾರಣಕ್ಕೆ ಮೋಸ ಮಾಡಿದ ಕಾರಣಕ್ಕೆ ಹೀಗೆ ತಾವು ಮಾಡಿದ ತಪ್ಪಿಗೆ ಪ್ರಾಯಶ್ಚಿತ ಅನುಭವಿಸುವುದಕ್ಕೆ ಕಂಬಿಗಳ ಒಳಗೆ ಬದುಕು ಸಾಗಿಸುತ್ತಿರುತ್ತಾರೆ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ ಬದುಕುತ್ತಿದ್ದವರನ್ನು ಕರೆ ತಂದು ಇಲ್ಲಿ ಪಂಜರದ ಒಳಗೆ ದೊಡ್ಡ ಬೇಲಿಯ ಒಳಗೆ ಗೋಡೆಯ ಒಳಗೆ ಕೂಡಿಹಾಕಿ ನೋಡುಗರಿಗೆ ರಂಜನೆಯನ್ನು ನೀಡುತ್ತಿದ್ದಾರೆ. ಬಂದವರೆಲ್ಲರೂ ನಮ್ಮನ್ನ ನೋಡುತ್ತಾ ನೋಡುತ್ತಾ ಸಾಗುತ್ತಿದ್ದಾರೆ ನಾವು ಅವರಿಗೆ ಮನರಂಜನೆಯ ವಸ್ತುವಾಗಿದ್ದೇವೆ. ನಾವು ಇಲ್ಲಿ ಬಂಧನವಾಗಿರುವುದಕ್ಕೆ ಕಾರಣವಾದರೂ ಏನು? ನಾವು ಯಾರಿಗೂ ತೊಂದರೆ ನೀಡಿದವರಲ್ಲ ತಪ್ಪು ಮಾಡಿದವರಲ್ಲ ಸ್ವಚ್ಛಂದವಾಗಿ ಸ್ವತಂತ್ರವಾಗಿ ಬದುಕುತ್ತಿದ್ದವರನ್ನು ಇಲ್ಲಿನ ನಿಮ್ಮ ಗೂಡಿನೊಳಗೆ ಬಂಧಿಸಿದ್ದು ಅದೇನು ಸಾಧಿಸುವುದಕ್ಕೆ ಅರ್ಥವಾಗುತ್ತಿಲ್ಲ. ನಮ್ಮಿಷ್ಟದಂತೆ ಓಡಾಡ್ತಾ ಹಾರಾಡ್ತ ಕುಣಿದಾಡ್ತಾ ಬದುಕಬೇಕು ಅಂತ ಆಸೆ ಆದರೆ ಪ್ರತಿದಿನ ಅದೇ ಕಲ್ಲು, ಅದೇ ಹುಲ್ಲು ಅದೇ ನೆಲ ಅದೇ ಬೇಲಿಯನ್ನು ನೋಡುತ್ತಾ ದಿನದೂಡುವ ದುರ್ವಿಧಿ. ಬಂಧಿಯಾಗಿರುವುದೇನಕೆ ಅಂತ ಗೊತ್ತಾಗ್ತಾ ಇಲ್ಲ. ಸಂಜೆ ಏಳಾಗುವಾಗ ನಾನೊಬ್ಬನೇ ಇರುವುದನ್ನು ಕಂಡು ಮೃಗಾಲಯದ ಪುಟ್ಟ ಸಿಂಹದಮರಿ ಕೇಳಿದಂತಾಯಿತು. ನನ್ನಲ್ಲಿ ಉತ್ತರವಿರಲಿಲ್ಲ. 

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ