ಆತನ ನಂಬಿ ಆಕೆ ಹೆಜ್ಜೆ ಇಟ್ಟಿದ್ದಳು. ಪರಿಚಯವಿಲ್ಲದ ಊರಿನಲ್ಲಿ ಪುಟ್ಟ ಕೋಣೆಯೊಳಗೆ ತನ್ನನ್ನ ಆತನಿಗೆ ಅರ್ಪಿಸಿಕೊಂಡಿದ್ದಳು. ಆಕೆಯ ದೇಹವು ಕೇಳಿತು ಆತನ ದೇಹವು ಅದನ್ನು ಸ್ವೀಕರಿಸಿತ್ತು. ದಿನಗಳು ಉರುಳಿದಂತೆ ಆಕೆಯ ದೇಹದ ಬೆವರಿನ ವಾಸನೆ ಆತನಿಗೆ ಪ್ರಿಯವೆನಿಸಲಿಲ್ಲ. ಆಕೆ ಒಬ್ಬಂಟಿಯಾದಳು, ಬದುಕನ್ನ ಎದುರಿಸುವುದಕ್ಕಾಗದೆ ಉಸಿರು ನಿಲ್ಲಿಸಿದಳು. ಅವಳು ಮರಣ ಹೊಂದಲಿಲ್ಲ ಆಕೆಯನ್ನ ನಂಬಿದ ಕುಟುಂಬ, ಬಳಗ ದಿನವೂ ಕೊರಗಿ ಸಾಯುತ್ತಿದೆ. ಆತನು ಅವನ ಬದುಕನ್ನ ಕಟ್ಟಿಕೊಂಡಿದ್ದ. ಇವಳ ಮನೆಯಲ್ಲಿ ಅವಳ ಭಾವಚಿತ್ರವನ್ನು ನೋಡುತ್ತಾ ಕಣ್ಣೀರು ಇಳಿಸುತ್ತಿದ್ದರು. ಸ್ವರ್ಗದಲ್ಲಿ ನಿಂತು ಆಕೆ ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತಕ್ಕಾಗಿ ಅಳುತ್ತಿದ್ದಳು ಆದರೆ ಅದು ಯಾರಿಗೂ ಕೇಳಲು ಇಲ್ಲ ಕಾಣಲೂ ಇಲ್ಲ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!