ಅವಳದೇ ಕಾರ್ಯಕ್ರಮ. ಹಾಗಾಗಿ ನಗು ತುಂಬಿಕೊಂಡಿದ್ದಾಳೆ. ಬಂದವರೆಲ್ಲರೂ ಹರಸಿ ಆಶೀರ್ವಾದ ನೀಡಿದ್ದಾರೆ. ಇಡೀ ದಿನವೂ ಆಕೆಯ ಮುಖದಲ್ಲಿ ನಗುವಿನ ಬೆಳಕು ಮಿಂಚುತ್ತಿದೆ. ಮನೆಯವರು ಬಂಧುಗಳು ಸ್ನೇಹಿತರು ಎಲ್ಲರೂ ಸಂಭ್ರಮದಲ್ಲಿ ಮುಳುಗೆಳುತ್ತಿದ್ದಾರೆ. ಆದರೆ ವೇದಿಕೆಯಲ್ಲಿ ಅವಳ ನಗುವಿನ ಹಿಂದೆ ನೋವು ಕಾಣದ ಹಾಗೆ ಓಡಾಡುತ್ತಿದೆ. ನಿನ್ನೆಯವರೆಗೂ ತನ್ನದಾಗಿದ್ದ ಮನೆ ಇಂದಿನಿಂದ ತನ್ನದಲ್ಲ. ಆಡಿ ಬೆಳೆದು ಓಡಾಡಿ ಸಣ್ಣ ಪುಟ್ಟ ಜಗಳ ಅಮ್ಮನ ಕೈ ತುತ್ತು ಅಪ್ಪನ ಹೆಗಲು ಯಾವುದು ದಿನಂಪ್ರತಿ ಸಿಗೋದಿಲ್ಲ. ಪ್ರತಿದಿನವೂ ಕಣ್ಣ ಮುಂದೆ ಓಡಾಡುತ್ತಿದ್ದವರು ಇನ್ಮು ಮುಂದೆ ಪೋನಿನಲ್ಲಿ ಮಾತ್ರ ಸಿಗುತ್ತಾರೆ, ಯಾವಾಗಲೋ ಭೇಟಿಯಾಗುವ ಅವಕಾಶ. ಗುರುತಿಲ್ಲದ ಊರಿನಲ್ಲಿ ಗುರುತು ಕಟ್ಟಿಕೊಳ್ಳಬೇಕು, ತನ್ನದಲ್ಲದ ನಾಲ್ಕು ಸುತ್ತದ ಗೋಡೆಯನ್ನು ತನ್ನದಾಗಿಸಿಕೊಳ್ಳಬೇಕು, ಹೊಸತೊಂದು ಬದುಕನ್ನ ಗಟ್ಟಿಗೊಳಿಸಬೇಕು ಪ್ರೀತಿ ಹಂಚಬೇಕು ಎಲ್ಲವನ್ನು ಅನುಭವಿಸಿ ಜವಾಬ್ದಾರಿ ನಿಭಾಯಿಸಬೇಕು. ಭಯವಿದೆ ಆದರೂ ನಗುತ್ತಿದ್ದಾಳೆ. ನಾಳೆಯಿಂದ ಬದುಕು ನೆನ್ನೆಯ ಹಾಗಿರುವುದಿಲ್ಲ ಅನ್ನುವುದು ಅವಳಿಗೆ ಖಾತ್ರಿ ಇದೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!