ಅನುಭವವಿಲ್ಲದೆ ಸಾಹಿತ್ಯ ಬರವಣಿಗೆ ಸಾಧ್ಯವಿಲ್ಲ ಅನ್ನೋದು ಅವರ ವಾದ. ಅವರು ತಮ್ಮ ಪ್ರತೀ ಬರವಣಿಗೆಯಲ್ಲಿ ತನ್ನ ಅನುಭವವನ್ನೇ ದಾಖಲಿಸುತ್ತಿದ್ದರು. ಜನರಿಗೆ ಅದು ಇಷ್ಟವಾಗ್ತಾ ಇತ್ತು. ಇತ್ತೀಚಿಗೆ ಅವರಿಗೆ ರಾಷ್ಟ್ರಮಟ್ಟದ ಬಹುಮಾನ ಘೋಷಣೆಯಾಯಿತು .ಅದು ಅವರ ಅಸಾಮಾನ್ಯ ಕವನಕ್ಕೆ. ಕವನದ ಶೀರ್ಷಿಕೆ ಪ್ರಸವ ವೇದನೆ ಕವನವನ್ನು ಓದಿದ ಪ್ರತಿಯೊಬ್ಬರಿಗೂ ಆ ತಾಯಿಯ ನೋವು ಅರ್ಥವಾಗುತ್ತಿತ್ತು. ಪ್ರತಿಯೊಂದು ಹೆಣ್ಣು ಆ ಕವನವನ್ನು ಗೌರವಿಸಿ ಒಪ್ಪಿಕೊಂಡಿದ್ದಳು. ಬಹುಮಾನವನ್ನು ಸ್ವೀಕರಿಸಿ ವೇದಿಕೆಯಲ್ಲಿ ನಿಂತು ಮಾತನಾಡುವಾಗ ಅವರಂದ್ರು ಅನುಭವ ದೇಹಕ್ಕೆ ಮಾತ್ರವಲ್ಲ ನೋಡುವ ಕಣ್ಣುಗಳಿಗೆ ಕೇಳುವ ಕಿವಿಗಳಿಗೆ ಮತ್ತು ಅಂತರಾಳದ ಮನಸ್ಸಿಗೆ ಅರ್ಥವಾದರೆ ಅದ್ಭುತ ಕೃತಿಗಳು ರಚನೆಯಾಗುತ್ತವೆ ಎಂದು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!