ಉಸಿರು ನಿಲ್ಲಿಸಿದವ ಮೇಲೆ ತಲುಪಿ ಮತ್ತೆ ಯೋಚಿಸುತ್ತಿದ್ದ. ಇವರ್ಯಾರಿಗೂ ಬದುಕಿದ್ದಾಗ ನಾನು ನೆನಪಾಗಿಲ್ಲ. ಬದುಕಿದ್ದಾಗ ನನ್ನ ಅಭಿನಯ ಕಾಣಲಿಲ್ಲ ವೇದಿಕೆಯಲ್ಲಿ ಅವಕಾಶ ಸಿಗಲಿಲ್ಲ ನನ್ನ ಪ್ರತಿದಿನದ ಕಷ್ಟ ನನ್ನ ಮಾತು ನಾನು ಹೇಳಿದ ವಿಚಾರ ನನ್ನ ಗೆಳೆಯರ ಬಳಗ ನನ್ನ ಜೀವನದ ಅನುಭವ ಇದರ ಬಗ್ಗೆ ಮಾತನಾಡಲಿಲ್ಲ. ನಾನು ಮರಣಿಸಿ ಉಸಿರು ನಿಲ್ಲಿಸಿದ ಮೇಲೆ ಎಲ್ಲರೂ ತಮ್ಮ ತಮ್ಮ ಅನುಭವಗಳನ್ನು ದಾಖಲಿಸುತ್ತಿದ್ದಾರೆ. ಇಂಥವರು ಇನ್ನು ಹೆಚ್ಚು ಬದುಕಬೇಕಿತ್ತು ಅಂತ ಅಂದುಕೊಳ್ಳುತ್ತಿದ್ದಾರೆ. ಹೀಗೆ ಬದುಕಿದ್ದಾಗ ನನ್ನ ಜೊತೆಗೆ ಮಾತನಾಡಿ ತಮ್ಮ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಿದ್ದರೆ ನಾನು ಹೆಚ್ಚು ಸಂತೋಷವಾಗಿರುತ್ತಿದ್ದೆ. ಇನ್ನೊಂದು ನಾಲ್ಕು ದಿನ ಹೆಚ್ಚು ಬದುಕುತ್ತಿದ್ದೇ. ಕೆಲವರು ಅದಕ್ಕೆ ಕಾಯ್ತಾ ಇರ್ತಾರೆ. ದಯವಿಟ್ಟು ಬದುಕಿದ್ದಾಗ ಒಳ್ಳೆಯದು ಮಾತನಾಡಿ ಬದುಕಿದ್ದಾಗಲೇ ಹೊಗಳಿ ಬದುಕಿದ್ದಾಗಲೇ ಆರಾಧಿಸಿ ಬದುಕಿದ್ದಾಗಲೇ  ಹೇಳುವ ವಿಚಾರ ಕೇಳುವವನಿಗೆ ತಲುಪುವುದು. ನಿಮ್ಮಲ್ಲಿ ಬೇಡಿಕೆ ಇಷ್ಟೇ ಬದುಕಿದ್ದಾಗಲೇ ಹೊಗಳಿ ಬಿಡಿ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ