ಆಕೆಯ ಕಣ್ಣುಗಳು ಕೆಂಪಾಗಿದ್ದವು. ಉಸಿರಿನ ಏರಿಳಿತ ಹೆಚ್ಚಾಗಿತ್ತು. ದೇಹ ಕಂಪಿಸುತ್ತಿತ್ತು ನಿರ್ಧಾರ ಬಲವಾಗಿತ್ತು ಆತನನ್ನು ಸಾಯಿಸುವ ನಿರ್ಧಾರಕ್ಕೆ ಬಂದಿದ್ದಳು. ನಾಲ್ಕು ಬಾರಿ ಗುಂಡು ಹಾರಿಸಿ ಹೊರಟು ಹೋದಳು ಆಕೆಯ ಬಂಧನವಾಯಿತು. ಕಟ ಕಟೆಯಲ್ಲಿ ನಿಂತು ಆಕೆ ತನ್ನ ಮಾತನ್ನು ಆರಂಭಿಸಿದಳು. ನೋವಾಗಿರುವುದು ನನಗೆ, ಅತ್ಯಾಚಾರವಾಗಿರೋದು ನನ್ನ ಮೇಲೆ, ಬಿಡುಗಡೆ ಮಾಡುವುದಕ್ಕೆ ನೀವು ಯಾರು?. ಆತ ತಾನು ಮಾಡಿದ ತಪ್ಪಿಗೆ ನಿಮ್ಮ ಮುಂದೆ ಕ್ಷಮೆ ಕೇಳಿದ್ದಕ್ಕೆ ನೀವು ಕ್ಷಮಿಸಿ ಆತನಿಗೆ ಬದುಕುವುದಕ್ಕೆ ಅವಕಾಶ ಮಾಡಿಕೊಡಬಹುದು, ಆದರೆ ನಾನು ಜೀವನಪೂರ್ತಿ ನೋವನ್ನು ಮರೆಯೋದಕ್ಕೆ ಸಾಧ್ಯನಾ ? ಹಾಗಾಗಿ ಅದಕ್ಕೆ ಕ್ಷಮೆ ಇಲ್ಲ. ಅದಲ್ಲದೆ ಆತನ ಮುಖದಲ್ಲಿ ಒಂಚೂರು ಪಶ್ಚಾತಾಪವಿಲ್ಲ ಬದುಕಿಗಿಂತ ಸಾವಿಗೆ ಹೆಚ್ಚು ಹತ್ತಿರವಾದವನವನು ಇದನ್ನು ನೋಡಿ ಆದರೂ ಒಂದೆರಡು ಅತ್ಯಾಚಾರ ಕಡಿಮೆಯಾಗಲಿ ಎನ್ನುವುದು ನನ್ನ ಯೋಚನೆ ಇಷ್ಟು ದಿನ ಹೊರಗಿದ್ದು ಎಲ್ಲರ ನಡುವೆ ಬಂದಿಯಾಗಿದ್ದೆ ಈಗ ನೆಮ್ಮದಿಯಾಗಿ ಒಳಗೆ ಬಂದಿಯಾಗಿದ್ದೇನೆ
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!