ಎಲ್ಲವೂ ಜಾರಿ ಹೋಗುತ್ತಿದೆ ಆಕಾಶದಲ್ಲಿನ ಸಂಜೆ ಹೊತ್ತಿನ ಕೆಂಪು ಬಣ್ಣ ಮುಂಜಾನೆಯ ಕೇಸರಿ ಬಣ್ಣ ಮೋಡಗಳ ಚಿತ್ತಾರ ಕ್ಷಣಾರ್ಧದಲ್ಲಿ ಕರಗಿ ಹೋದಂತೆ ಎದೆಯ ದನಿಯಷ್ಟೇ ಭೀಕರವಾಗಿ ಕೇಳುತ್ತಿರುವ ಪ್ರತಿ ಸೆಕುಂಡಿನ ಗಡಿಯಾರದ ಶಬ್ದ ಎಲ್ಲವೂ ಒಂದು ಕ್ಷಣವೂ ನಿಲ್ಲುತ್ತಿಲ್ಲ ಹಾಗಾಗಿ ನಾನು ಓಡಲೇ ಬೇಕಾಗಿದೆ ನಿಂತು ಬಿಟ್ಟರೆ ಅವರೆಲ್ಲರೂ ನನ್ನನ್ನು ದಾಟಿ ಮುಂದುವರೆದು ಬಿಡುತ್ತಾರೆ ಗಡಿಯಾರ ಓಡುತ್ತಿದೆ ಜೊತೆಗಾರರು ಒಡುತ್ತಿದ್ದಾರೆ ಸಂದರ್ಭ ಅವಕಾಶ ಎಲ್ಲವೂ ದೂರ ದೂರ ಚಲಿಸುತ್ತಿದೆ ನಿಂತು ಬಿಟ್ಟರೆ ಕೊನೆಯವರೆಗೂ ನಾನಿಲ್ಲೇ ಉಳಿದುಬಿಡುತ್ತೇನೆ. ಕೊನೆಗೆ ನನ್ನವರೇ ನನ್ನಿಂದ ದೂರವಾಗುವ ಪರಿಸ್ಥಿತಿ ನಿರ್ಮಾಣ ಆಗುವುದಕ್ಕಿಂತ ಮೊದಲು ಎದ್ದು ಚಲಿಸಬೇಕು ಹೀಗೆಂದು ನಿರ್ಧಾರ ಮಾಡಿದವನು ಮೈಕೊಡವಿ ಎದ್ದು ಹೊರಟಿದ್ದ ಇನ್ನೊಂದಷ್ಟು ದೂರ ಚಲಿಸಬೇಕಿತ್ತು ಸಾಗಬೇಕಿತ್ತು ಅವನೊಳಗೆ ಉತ್ಸಾಹ ಕಡಿಮೆಯಾಗತೊಡಗಿದೆ ಹೊರಗಡೆ ಉತ್ಸಾಹಕ್ಕೆ ಹುಡುಕಾಡಿದ. ಅವನೊಳಗೆ ಆತ ಇಳಿಯಲೇ ಇಲ್ಲ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ