'ಕನ್ನಡಿಗರ ಹೃದಯ ಕದವ ತಟ್ಟಿದ ಕವಿವರೇಣ್ಯ

ಮೆಲ್ಲೆದೆಯ ಸವಿಯೊಲುಮೆ ಕರಗಿ ಕಬ್ಬನಿಯಾಗಿ

ಹೆಣ್ಣ ಕಣ್ಣಂಚಿನಲಿ ತುಳುಕುವಂತೆ

ಸುಳಿಗಾಳಿಯೊಂದಿನಿತು ಸೂಸಿ ಬಂದರು ಸಾಕು

ಮರವನಪ್ಪಿದ ಬಳ್ಳಿ ಬಳುಕುವಂತೆ

ಈ ಸಾಲುಗಳು ಎಷ್ಟೊಂದು ಸೊಗಸು ಅಲ್ಲವೇ?ನಮ್ಮ ಕನ್ನಡ ನಾಡಿನ,ಕ ನ್ನಡಮ್ಮನ ಮಡಿಲಿನಲಿ ಆಡಿ ಬೆಳೆದ ಸಮನ್ವಯ ಕವಿವರೇಣ್ಯ ಹೊಸಗನ್ನಡ ಪ್ರಕಾರದಲ್ಲೂ ಪ್ರಸಿದ್ಧಿಯಾದ, ಖ್ಯಾತ ವಿದ್ವಾಂಸರಾದ ಕವಿ ಮತ್ತು ಬರಹಗಾರರಾದ ಚನ್ನವೀರ ಕಣವಿಯವರ ರಚನೆಗಳು. ಜಾನಪದ ಕವಿಗಳಾಗಿ, ಸಾಹಿತ್ಯದ ಬಗ್ಗೆ ಒಲವುಳ್ಳರಾಗಿದ್ದವರು. 

'ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ, ಕವಿತೆ ಎನ್ನುವುದು ಬರೆದು, ಬರೆದೂ ಬರುವಂತಹುದು, ಹಾಗೆಯೇ ಬರಲಾರದು. ಮೊದಲು ನಮ್ಮನ್ನು, ನಮ್ಮ ಬರಹಗಳನ್ನು ನಾವು ಪ್ರೀತಿಸಬೇಕು, ಆ ಮೇಲೆ ಇತರರನ್ನು, ಇತರರ ರಚನೆಗಳನ್ನು ಪ್ರೀತಿಸಿ ಎನ್ನುತ್ತಿದ್ದರಂತೆ. "ಮನೆಗೆ ಮಾರಿ ಊರಿಗೆ ಉಪಕಾರಿ" ಗಾದೆ ಮಾತಿದೆ, ಹಾಗಾಗಬಾರದು. ಮನೆಯನ್ನು, ಊರನ್ನು ಎರಡನ್ನೂ ಪ್ರೀತಿಸಬೇಕು. ಸತ್ಯವಲ್ಲವೇ? ನಮ್ಮ ಮೇಲೆ ನಮಗೆ ನಂಬಿಕೆ, ವಿಶ್ವಾಸವಿಲ್ಲದಿದ್ದರೆ ಅನ್ಯರಿಗೆ ಎಷ್ಟಿರಲು ಸಾಧ್ಯ?

ಮೊದ ಮೊದಲು ತಪ್ಪಾಗಬಹುದು, ಸರಿಯಾದ ರೀತಿ-ನೀತಿಯಿಲ್ಲದಿರಬಹುದು, ಬರೆದು ಅಭ್ಯಾಸವಾದಂತೆ, ಆಲೋಚನಾಲಹರಿಗಳು ಬದಲಾವಣೆಯಾದಂತೆ ಸರಿಯಾಗಬಹುದು. ಸೋತು ಹಿಮ್ಮೆಟ್ಟಬಾರದು. ಭವ್ಯ ಪ್ರಾಚೀನ ಪರಂಪರೆ ಇರುವ ನಾಡು ನುಡಿ ನಮ್ಮೀ ಕನ್ನಡ.ಉತ್ಖನನ ನಡೆಸಿದಾಗ ದೊರೆತ ಮಾಹಿತಿಯಂತೆ ಕನ್ನಡದ ಅಸ್ಥಿತ್ವ ಕಂಡು ಬಂದಿದೆಯಂತೆ. ಪ್ರಾಚೀನ ಗ್ರಂಥಗಳಲ್ಲಿ 'ಕರ್ನಾಟಕ' ಎನ್ನುವ ಪದವಿದೆಯಂತೆ. ವ್ಯಾಸಭಾರತದ ಭೀಷ್ಮ ಪರ್ವದಲ್ಲಿ 'ಕರ್ನಾಟ' ಪದ ಪ್ರಯೋಗ, ಸ್ಕಂದ ಪುರಾಣ, ಮಾರ್ಕಾಂಡೇಯ ಪುರಾಣದಲ್ಲು ಈ ಪದವಿದೆಯೆಂದು ಓದಬಹುದು. ಬಹಳ ಹಿಂದೆ ಕರ್ನಾಟಕಕ್ಕೆ "ಕಣ್ಣನೀರ್" ಎಂದು ಹೆಸರಿತ್ತು ಎನ್ನುವ ಉಲ್ಲೇಖವೂ ಇದೆ. ಸುಮ್ಮನೆ ಲಿಖಿತವಾಗಲು ಸಾಧ್ಯವಿಲ್ಲ, ಸಾವಿರಾರು ವರ್ಷಗಳ ಭವ್ಯ ಇತಿಹಾಸದಿಂದ ಭಾಷೆ ಎನ್ನುವುದು ಬೆಳವಣಿಗೆ ಹೊಂದಿ ಲಿಖಿತರೂಪಕ್ಕೆ ಬರುವುದು.ಕನ್ನಡ ಪದ ಲಾಲಿತ್ಯದಿಂದ ಕೂಡಿದ ಸರಳ ಭಾಷೆ. ದುಂಡಗಿನ ಬರೆಹ ಅದೆಷ್ಟು ಚಂದ? ಇಂಥ ಸುಮಧುರ ಕನ್ನಡವನ್ನು ಮರೆಯದೆ ಮೆರೆಸೋಣ. ಕನ್ನಡ ವರ್ಣಮಾಲೆ, ಕಾಗುಣಿತಾಕ್ಷರಗಳ ಪರಿಚಯ ಮತ್ತು ಬರವಣಿಗೆಯನ್ನು ಸರಿಯಾಗಿ ಕಲಿತವರಿಗೆ ,ಮುಂದೆ ಬರೆಯಲು ಯಾವುದೇ ತೊಂದರೆಯಾಗದು. ಅಕ್ಷರಗಳ ಪರಿಚಯ ಸರಿಯಾಗಿ ಕಲಿತು-ಕಲಿಸೋಣ, ಕನ್ನಡ ಭಾಷೆಯ ಬೆಳೆಸೋಣ-ಪ್ರೋತ್ಸಾಹಿಸೋಣ,ಅಸಡ್ಡೆ ಬೇಡ.

(ಸಂಗ್ರಹ)*

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ