ಪಂಚರಂಗಿ  ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ.  ಪಂಚರಂಗಿ ಬಗ್ಗೆ ಅದರ ಶೈಲಿಯಲ್ಲಿ ಹೇಳಬೇಕೆಂದರೆ ,....

 

" ವರಾನ್ವೆಷಣೆಯ ಸಂಧರ್ಭಗಳು ,ಆಮಂತ್ರಿತ ಮದುವೆ ಬ್ರೊಕರ್ಗಳು  ,

  ತೋರಿಸಿದ 'ಭಾವ' ಚಿತ್ರಗಳು   , ರಿಜೆಕ್ಟಾದವು ಎಲ್ಲಾ ಒಪಷನಗಳು  ,

  ಕೊನೆಯಲ್ಲಿ ಆರಿಸಿದ software  ಇಂಜಿನಿಯರಗಳು , ಅಪ್ಪ - ಅಮ್ಮಂದಿರ ಸಂಭ್ರಮಗಳು,

  ಹಾಸ್ಯ  ಚಟಾಕಿಗಳು .... ನಗು ....

                                                   ಗುರುವರ್ಯ  ಈ ಮದ್ಯೆ ,

 

ಕಾಲೇಜು  ವಿದ್ಯಾರ್ಥಿಗೆ ಸಿಕ್ಕ ಸೀರೆ ಉಡಿಸುವ ಅವಕಾಶಗಳು,

ಕಾಲೇಜು  ಸಮಾರಂಭಗಳು , ಸಿದ್ದರಾಗುತ್ತಿರುವ   ಪ್ರಾದ್ಯಾಪಕರುಗಳು , 

ಪಂಚರಂಗಿ   ಗಿಳಿಗಳು , ಪಂಚರಂಗಿ ಹಾಡುಗಳು,

ಗದ್ಯ ರೂಪದ ಪದ್ಯಗಳು, ಬೋರ್ ಹೊಡಿಸದ ಸಾಹಿತ್ಯಗಳು,

 

                                                     ಗುರುವರ್ಯ  ಆನಂತರ  ,

 

ವಧುವನ್ನು  ನೋಡಲು ಹೊರಟ ಕುಟುಂಬ  ಸದಸ್ಯರುಗಳು ,

ಬಸ್ಸಿನಲ್ಲಿ ಸಿಗುವ ಅವರೆಲ್ಲರ  ಪರಿಚಯಗಳು ,

ಮತ್ತೆ  ಹಾಸ್ಯ  ಚಟಾಕಿಗಳು .... ನಗು .....

 

ಗುರುವರ್ಯ .... ನಾನಿಲ್ಲೇ  ನಿಲ್ಲೆಸಲೇ ... ಗುರುವರ್ಯ .... "

 

 

ಹೌದು, ಪಂಚರಂಗಿಯಲ್ಲಿ 'ಗಳು' ಪ್ರಪಂಚ ತುಂಬಾ ಶ್ರೀಮಂತವಾಗಿದೆ. ಆಗಾಗ್ಗೆ ಹಿನ್ನಲೆಯಲ್ಲಿ ಬರುವ ಭಟ್ಟರ ಪಂಚ ಲೈನ ಥೇಟ ಯಕ್ಷಗಾನದ 'ಭಾಗವತನ'   ಥರ. ಇದೊಂದು  ಹೊಸ ಪ್ರಯೋಗ .  ನಾಯಕ ಸೋಮಾರಿಯಾದರು ಚಿತ್ರದುದ್ದಕ್ಕೂ ಮುದ ನೀಡುತ್ತಾನೆ. ಸಂಗೀತ , ಸಾಹಿತ್ಯ ತುಂಬಾ ಚೆನ್ನಾಗಿದೆ . ಹಾಸ್ಯ ಚಿತ್ರದುದ್ದಕ್ಕೂ  ಮಿಶ್ರವಾಗಿದೆ. ತುಂಬಾ ನಗತಿರ.

ನಿರ್ದೇಶಕ ಪ್ರೆಕ್ಷಕನಿಗೆ ಅಂತಾನೆ "ನಿನ್ನ ಕಣ್ಣಿಗೀಗ  ನಾ  ('ಪಂಚರಂಗಿ')  ಹೇಗೆ ಕಂಡರುನು ಅದೇ ಚಂದ, ಹಾಗೆಂದೆ ಭಾವಿಸು .....   " ಹೇಳಿದಂತೆ ಅನಿಸತ್ತೆ ..  ಆದರು ಸಿನಿಮಾ ಎಲ್ಲೂ ಬೋರ್ ಹೊಡಿಸೋದಿಲ್ಲ. ಅದು ನಿರ್ದೇಶಕನ ಚಾಣಾಕ್ಷತೆ  ...

..

ಪಂಚರಂಗಿ  ಫೊಂ  ಫೊಂ....