ದಿಗಿಲಿಂ ಬೇಡಿರಲಾ ಭಗೀರಥ ಮೊದಲ್ ಶ್ರೀವಿಷ್ಣು ಪಾದಂಗಳಿಂ 

ಮುಗಿಲಿಂ ಬೀಳ್ವೊಡೆ ಗಂಗೆಯಾರ್ಭಟವನುಂ ಸಂತೈಸುತುಂ 

ತಾಳ್ಮೆಯಿಂ ಸೊಗದೊಳ್ ಮಾಣಿಸುತಾಕೆಯಂ ನಲುಮೆಯಿಂ ಕಾಪಿಟ್ಟೆ ಭೂಲೋಕಮಂ 

ಮಗುವೆಂದೆನ್ನುತಲೆನ್ನ ಕಾಯೊ ಶಿವನೇ ತಪ್ಪೆಲ್ಲಮಂ ಮನ್ನಿಸಿ! 

-ಹಂಸಾನಂದಿ 

ಕೊ: ಶಿವರಾತ್ರಿಯ ಸಮಯಕ್ಕೆ, ಹಿಂದೆ ಬರೆದಿದ್ದ ಒಂದು ಪದ್ಯವನ್ನು ಸ್ವಲ್ಪ ಬದಲಿಸಿ ಬರೆದಿದ್ದೇನೆ 

ಚಿತ್ರ ಕೃಪೆ:  ಕೆ. ವೆಂಕಟಾಚಾರಿ ಅವರ ವರ್ಣ ಚಿತ್ರ
http://hinduism.about.com/od/lordshiva/ss/http://hinduism.about.com/od/l...