ಬಾನು ಮುಗಿಲಿನ ಚಿತ್ತಕೆ ಮಳೆಯು ಬಂತು ಇಳೆಗೆ
ನಾನೋ ನೀನೆನುವ ಛಲಕೆ ಮಳೆಯು ಬಂತು ಇಳೆಗೆ
ತೃಪ್ತಿ ಆಗಲಿಲ್ಲ ಮನುಜಗೆ ಇನ್ನೇನು ಬೇಕೊ
ಸಪ್ತತಾಳದಂತೆ ಹರಿವ ತವಕಕೆ ಮಳೆಯು ಬಂತು ಇಳೆಗೆ
ಕಡಲ್ಕೊರೆತಕ್ಕೆ ನೆಲ ಕೊರೆದು ಹೋದದ್ದು ನೋಡಿದೆಯ
ಮನುಷ್ಯರಲ್ಲೂ ಇಂತವರ ನೋಡುವ ಕಾಟಕೆ ಮಳೆ ಬಂತು ಇಳೆಗೆ
ಅಂತೆಕಂತೆಗಳ ಸಂತೆಯಲ್ಲಿ ಬದುಕು ಇನ್ನೆಷ್ಟು ದಿನವೊ
ಹಣ ಕಂಡಂತಹ ಹೆಣದ ನೋಟಕೆ ಮಳೆ ಬಂತು ಇಳೆಗೆ
ಉಸಿರಿರದ ಬಾಳಿನೊಳಗೆ ಹುಟ್ಟು ಹಬ್ಬಕ್ಕೆ ಬೆಲೆ ಇದೆಯೆ
ಈಶನ ಪಡಬಾರದ ನೋವಿನ ಹಟಕೆ ಮಳೆ ಬಂತು ಇಳೆಗೆ
-ಹಾ ಮ ಸತೀಶ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!