ವಿಶ್ವವು ಕಂಡ ಅತ್ಯದ್ಭುತ ಶಕ್ತಿಯಾದೆ
ಸತ್ಯ ಶಾಂತಿ ತ್ಯಾಗ ಬಲಿದಾನಗಳ ಪ್ರತೀಕವಾದೆ
ಪಾರದರ್ಶಕತೆ ನೈತಿಕತೆಗೆ ಹೊಳೆವ ಕನ್ನಡಿಯಾದೆ
ಆಡಂಬರವ ಸಹಿಸದ ನಿರ್ಭೀತಿ ಹೃದಯವಂತನಾದೆ
ಅಹಮಿಕೆ ಪ್ರಚಾರ ಒಲ್ಲದ ನಿಗರ್ವಿ ನೀನಾದೆ
ಮಾನವೀಯತೆಯ ಅಂತಃಶಕ್ತಿ ಬೆಳಗಿದ ಜ್ಯೋತಿಯಾದೆ
ಸರಳತೆಯ ಸಾಕಾರ ಮೂರ್ತಿ ಶಾಂತಿದೂತ ಎನಿಸಿದೆ
ಚೆನ್ನಾಗಿ ದುಡಿದು ಕಾಯಕದಿ ದೇವರ ಕಾಣು ಕರೆ ನೀಡಿದೆ
ಸ್ವಾಭಿಮಾನಿ ಅಂತಃಕರಣ ಹೊಮ್ಮಿದ ಮೂರುತಿಯಾದೆ
ಬಾಪು ಮಹಾತ್ಮ ಪಟ್ಟವನೇರಿ ಶೋಭಿಸಿದೆ
ಶ್ರವಣಕುಮಾರ ಹರಿಶ್ಚಂದ್ರ ಕಥೆಗಳು ನಿನ್ನ ಬಡಿದೆಬ್ಬಿಸಿದವು
ತನಗೆ ತಾನೇ ಶಿಕ್ಷೆಯ ನೀಡಿ ಉತ್ತಮ ಆದರ್ಶ ಗುಣಂಗಳ ಪಸರಿಸಿದೆ
ಉಪವಾಸ ಆತ್ಮಾವಲೋಕನ ಪರಿಪಕ್ವತೆ ಜೀವಕೆ ನೆಮ್ಮದಿ ಎಂದೆ
ಸಸ್ಯಾಹಾರ ಸರಳತೆಯು ಜೀವನ ಮಂತ್ರವೆಂದೆ
ಓ ಮಹಾತ್ಮಾ ಎಲ್ಲಿರುವೆ ಹೇಳು ಉದಿಸಿ ಬಾ
ಮತ್ತೊಮ್ಮೆ ಹೃದಯ ಹೃದಯಗಳ ಬೆಸೆಯಲು ಬಾ
ಸಹನೆ ರಾಷ್ಟ್ರಹಿತ ಬಡವರ ಧ್ವನಿಯಾದ ರಾಷ್ಟ್ರ ವೀರ
ದಬ್ಬಾಳಿಕೆ ವಿದೇಶಿ ನೀತಿಗಳ ಬೇರು ಕಿತ್ತೆಸೆದೆ
ಭಾರತ ಮಾತೆಯ ಹೆಮ್ಮೆಯ ಸುಪುತ್ರನಾಗಿ ವಿಶ್ವ ಮಾನವತೆಯ ಸಾರಿದೆ
ಸ್ವಾತಂತ್ರ್ಯ ಆಂದೋಲನ ಉಪ್ಪಿನ ಸತ್ಯಾಗ್ರಹದಲಿ ಯಶಸ್ವಿಯಾದೆ
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!