ಅರಳಿ ಬಿಡೇ ಒಂದು ಬಾರಿ
ನನ್ನ ಹೃದಯ ಕೊಳದಲಿ
ಮರಳಿ ಬಾರೆ ತುಟಿಯ ಜೇನ
ಸವಿದು ಕೂರೆ ಮನದಲಿ
ಕರುಣೆ ತೋರು ಚೆಲುವ ಬೀರು
ಬೆಳಕ ತೋರು ಮನೆಯಲಿ
ತರುಣಿ ಸೆಡವೆ ಸುತ್ತ ಚೆಲುವು
ತಳುಕು ಇರಲಿ ಜೊತೆಯಲಿ
ಮೆಲುಕು ಹಾಕೆ ತನುವ ಬೆಳಗೆ
ಸಪ್ತ ಸೂರ್ಯ ಖುಷಿಯಲಿ
ಕುಲುಕಿ ಮೈಯ ಮೋಹ ಮದುವೆ
ಸುತ್ತ ಮಧುರ ಒಲವಲಿ
ತವಕ ಹೀಗೆ ಕ್ಷಣಿಕಯಿರದೆ
ಮುತ್ತ ಕೊಡುತ ಬದುಕಲಿ
ಕೊಳಕು ಬರದೆ ಪ್ರೀತಿ ಚಿಗುರೆ
ಮೆರೆಯುತಿಹುದು ಬಾಳಲಿ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!