ಕಡಲೆ ಹಿಟ್ಟು, ಅಕ್ಕಿ ಹಿಟ್ಟುಗಳನ್ನು ಒಂದು ಚಮಚ ಬಿಸಿ ಎಣ್ಣೆ ಸೇರಿಸಿ ಕಲಸಿಡಿ. ತೆಂಗಿನ ತುರಿ, ಕರಿಬೇವಿನ ಎಲೆಗಳು, ಅರಶಿನ, ಮೆಣಸಿನ ಹುಡಿ, ಉಪ್ಪು, ಗರಮ್ ಮಸಾಲೆಗಳನ್ನು ಸೇರಿಸಿ ತರಿತರಿಯಾಗಿ ಅರೆದು, ಬ್ರೆಡ್ ತುಂಡುಗಳೊಂದಿಗೆ ಬೆರೆಸಿ. ಕಡಲೆ ಹಿಟ್ಟಿನ ಹಾಗೂ ಬ್ರೆಡ್ ಮಿಶ್ರಣಗಳನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ವಡೆಯ ಹದಕ್ಕೆ ಕಲಸಿಡಿ. ಮಿಶ್ರಣದಿಂದ ನಿಂಬೆಯ ಗಾತ್ರದ ಹಿಟ್ಟು ತೆಗೆದುಕೊಂಡು ವಡೆಯಾಕಾರದಲ್ಲಿ ತಟ್ಟಿ, ಕಾಯಿಸಿದ ಎಣ್ಣೆಯಲ್ಲಿ ಕರಿದರೆ ಸ್ವಾದಿಷ್ಟವಾದ ಬ್ರೆಡ್ ವಡೆ ಸವಿಯಲು ಸಿದ್ಧ. ಪುದೀನಾ ಚಟ್ನಿಯೊಂದಿಗೆ ತಿನ್ನಲು ಬಲು ರುಚಿಕರ.