ಗಝಲ್ (ಚೋಟೀ ಬೆಹರ್ ) - ೧
ಮಧುರ ಕ್ಷಣಗಳ ಬಿಂಬವು ಸಾಕಿ
ಬದುಕು ಸುಂದರ ಭಾವವು ಸಾಕಿ
ಪ್ರೀತಿ ತಂತಿಯ ಜೊತೆ ಸ್ನೇಹವೆ
ಕೈಯ ಬಳೆಯೊಳು ಮೋಹವು ಸಾಕಿ
ತುಟಿಗು ಮೀರಿದ ತನು ಚಪಲವೆ
ಚೈತ್ರ ಸೊಗಸಿನ ಗಾನವು ಸಾಕಿ
ರಾತ್ರಿ ಚಂದಿರನ ಸನಿಹ ಕಾಮವೆ
ತಾರೆ ಸವಿದಿಹ ನೋಟವು ಸಾಕಿ
ಈಶ ಒಲವದು ಇದ್ದರೆ ಚಂದವೆ
ಮನದ ಅರಸಿಯ ಪ್ರೇಮವು ಸಾಕಿ
***
ಗಝಲ್ - ೨ ಒಂದೇ ವಿಚಾರಧಾರೆ ಇರುವ ಗಝಲ್ (ಮುಸಲ್ ಸಿಲ್ )
ಮಧುರ ಕ್ಷಣಗಳ ಅರಿವುಯಿದೆ ಮೌನವಾಗಿರು
ಬದುಕಿಗೆ ಸುಂದರವಾದ ಹರವುಯಿದೆ ಮೌನವಾಗಿರು
ಪ್ರೀತಿಯ ತಂತಿಗೆ ಮನವುಯಿದೆ ಮೌನವಾಗಿರು
ಕೈಯಬಳೆಯ ಸದ್ದಿಗೆ ತನುವುಯಿದೆ ಮೌನವಾಗಿರು
ತುಟಿಯಾಸೆಗೆ ಮೀರಿದ ಚೆಲುವುಯಿದೆ ಮೌನವಾಗಿರು
ಚೈತ್ರದ ಸೊಗಸಿಗೆ ದಿನವುಯಿದೆ ಮೌನವಾಗಿರು
ರಾತ್ರಿಯ ಚಂದಿರನಿಗೆ ಒಲವುಯಿದೆ ಮೌನವಾಗಿರು
ತಾರೆಯ ಕುಡಿನೋಟಕೆ ಗೆಲುವುಯಿದೆ ಮೌನವಾಗಿರು
ಈಶನೊಲವಿಗೆ ಬಿರಿದ ಮನವುಯಿದೆ ಮೌನವಾಗಿರು
ಮನದರಸಿಗೆ ಸವಿಯ ಕುಲವುಯಿದೆ ಮೌನವಾಗಿರು
***
ಗಝಲ್ - ೩( ಜುಲ್ ಕಾಫಿಯಾ )
ಮಧುರ ಕ್ಷಣಗಳ ಅರಿವು ಇರುವುದು ಸಾಕಿ
ಬದುಕು ಸುಂದರ ಹರವು ಬರುವುದು ಸಾಕಿ
ಪ್ರೀತಿ ತಂತಿಯ ನಡುವೆ ನಾವಿರುವುದೇಕೆ
ಕೈಯಬಳೆಯ ಸದ್ದಿಗೆ ತನುವು ಕಾಣುವುದು ಸಾಕಿ
ತುಟಿಯಾಸೆಗೂ ಮೀರಿದ ಭಾವನೆ ಇಲ್ಲಿರುವುದೇಕೆ
ಚೈತ್ರದ ಸೊಗಸಿಗೆ ದಿನವು ಬಿರಿಯುವುದು ಸಾಕಿ
ರಾತ್ರಿಯಲ್ಲಿ ಚಂದಿರನ ತಂಪು ಹರಡುವುದೇಕೆ
ತಾರೆಯ ಕುಡಿನೋಟದ ಗೆಲುವು ಚೆಲ್ಲುವುದು ಸಾಕಿ
ಈಶನೊಲವಿನ ಬಿರಿದ ನಯನ ಮಿಂಚಿರುವುದೇಕೆ
ಮನದರಸಿಯ ಗರ್ಭದ ಆಳವು ಸವಿಯುವುದು ಸಾಕಿ
***
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!