ಒಂದು ಬೋಗುಣಿಯಲ್ಲಿ ಬೇಯಿಸಿದ ಬಟಾಟೆಯನ್ನು ಚೆನ್ನಾಗಿ ಮಸೆಯಿರಿ. ಕೊತ್ತಂಬರಿ ಸೊಪ್ಪು, ಹಸಿರು ಮೆಣಸು, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿರಿ. ಇನ್ನೊಂದು ಬೋಗುಣಿ (ಬೌಲ್) ಯಲ್ಲಿ ಮೈದಾ, ಮೆಣಸಿನ ಹುಡಿ, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ನುಣುಪಾದ ಪೇಸ್ಟ್ ಮಾಡಿಟ್ಟಿಡಿ. ಬ್ರೆಡ್ ಹಾಳೆಗಳನ್ನು ತ್ರಿಕೋನಾಕೃತಿಗೆ ಕತ್ತರಿಸಿ. ಒಂದು ಬದಿಯಲ್ಲಿ ಬಟಾಟೆ ಮಿಶ್ರಣವನ್ನು ಹರಡಿ. ಮೇಲಿನಿಂದ ಮೈದಾ ಮಿಶ್ರಣವನ್ನು ಹರಡಿ.

ಕಾದ ದೋಸೆ ಕಾವಲಿಗೆ ಸ್ವಲ್ಪ ಬೆಣ್ಣೆ ಸವರಿ ತಯಾರಿಸಿದ ಬ್ರೆಡ್ ಬಟಾಟೆ ಹರಡಿದ ಬದಿಯನ್ನು ಕೆಳಮುಖವಾಗಿ ಇಡಿರಿ. ಮಂದ ಉರಿಯಲ್ಲಿ ಕೆಂಪಾಗಿ ಹುರಿಯಿರಿ. ಮೇಲಿನ ಭಾಗಕ್ಕೆ ಬೆಣ್ಣೆ ಸವರಿ ತಿರುವಿ ಹಾಕಿ ಕೆಂಪಾಗಿ, ಗರಿಗರಿಯಾಗಿ ಹುರಿದು ತೆಗೆಯಿರಿ. ಮೇಲಿನಿಂದ ಹೆಚ್ಚಿಟ್ಟ ನೀರುಳ್ಳಿ, ಟೊಮೆಟೋ, ಮುಳ್ಳು ಸೌತೆ ಹರಡಿ. ಕೊತ್ತಂಬರಿ ಸೊಪ್ಪು ಮತ್ತು ಚಾಟ್ ಮಸಾಲಾ ಸಿಂಪಡಿಸಿ. ಬೇಕಾದಲ್ಲಿ ಟೊಮೆಟೋ ಕೆಚಪ್ ಸಹಾ ಹಾಕಬಹುದು. ಸಂಜೆಯ ಚಹಾದೊಂದಿಗೆ ಸವಿಯಲು ಬಹಳ ಚೆನ್ನ.