ಆಲೂಗೆಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಸ್ಮ್ಯಾಶ್ ಮಾಡಿಟ್ಟುಕೊಂಡಿರಿ. ಮೈದಾ ಹಿಟ್ಟಿಗೆ ಎರಡು ಚಮಚ ಎಣ್ಣೆ, ಚಿಟಿಕೆ ಉಪ್ಪು, ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಕಾಯಿಸಿ ಹಸಿಮೆಣಸಿನಕಾಯಿ, ಬಟಾಣಿ ಕಾಳುಗಳು, ಶುಂಠಿ ತುರಿ, ಜೀರಿಗೆ ಹುಡಿ, ಕೊತ್ತಂಬರಿ ಬೀಜದ ಹುಡಿ, ಕೊತ್ತಂಬರಿ ಸೊಪ್ಪು, ಉಪ್ಪುಹಾಕಿ ಬಾಡಿಸಿ. ಈ ಮಿಶ್ರಣಕ್ಕೆ ಸ್ಮ್ಯಾಶ್ ಮಾಡಿಕೊಂಡ ಆಲೂಗೆಡ್ಡೆಯನ್ನು ಸೇರಿಸಿ ಕಲಕಿ ಒಲೆಯಿಂದ ಕೆಳಗಿಳಿಸಿ.

ಕಲಸಿದ ಮೈದಾ ಹಿಟ್ಟಿನಿಂದ ಅಂಗೈಯಗಲದ ಚಪಾತಿ ಲಟ್ಟಿಸಿಕೊಂಡು ಅದರಲ್ಲಿ ಎರಡು ಚಮಚದಷ್ಟು ಆಲೂಗೆಡ್ಡೆ ಮಿಶ್ರಣವಿರಿಸಿ, ಅಡ್ಡಕ್ಕೆ ಮಡಚಿ ತ್ರಿಕೋಣಾಕಾರವಾಗುವಂತೆ ಪುನಃ ಇನ್ನೊಂದು ಬಾರಿ ಮಡಚಿ ಅಂಚುಗಳನ್ನು ಅಂಟಿಸಿ ಕಾದ ಎಣ್ಣೆಯಲ್ಲಿ ಕರಿದರೆ ಕರಿಗರಿಯಾದ ರುಚಿಯಾದ ಸ್ಪೆಷಲ್ ಸಮೋಸಾ ಸವಿಯಲು ಸಿದ್ಧ. ಟೊಮೆಟೊ ಸಾಸ್ ಅಥವಾ ಪುದೀನಾ ಚಟ್ನಿ ಜೊತೆ ತಿನ್ನಲು ಬಲು ರುಚಿ.