ತಪ್ಯಾರದ್ದು ದೇವರೇ, ಎಚ್ಚರಿಕೆ ನೀಡಬಹುದಾಗಿತ್ತಲ್ವಾ? ಮನೆಯ ಮಗನನ್ನು ಮಸಣಕ್ಕೆ‌ ಕಳುಹಿಸಿ ಸುಮ್ಮನೆ‌ ನಿಂತು ಬಿಟ್ಟೀದ್ದೀಯಾ? ನಮ್ಮ ನ್ಯಾಯಾಲಯದಲ್ಲಿ ತಪ್ಪನ್ನ ತಿದ್ದಿಕೊಳ್ಳೋಕೆ ಒಂದು ಅವಕಾಶನಾದ್ರೂ ಸಿಗುತ್ತೆ. ಹಾಗೆಯೇ ನೀನೂ ಕೊಡಬೇಕಾಗಿತ್ತು ತಾನೆ? ಎದ್ದು ಕುಳಿತು ಮಾತನಾಡಬೇಕು ಎನ್ನುವ ಬಯಕೆ‌ ಇದ್ದರೂ ಕಾಲನ‌ ಒಪ್ಪಿಗೆ ಇಲ್ಲ, ಕಳೆದುಕೊಂಡಾಗಿದೆ ನಾವು ಆದರೂ ದೇವಾ? ನೀ‌ನು ಅವಕಾಶ ನೀಡಬೇಕಿತ್ತು, ಕನಸಿಗೆ, ಆಸೆಗೆ, ಬದುಕಿನ ಪ್ರೀತಿಗೆ ಇನ್ನೊಂದಷ್ಟು ದಿನಗಳನ್ನು ಕಳೆಯಲು. ಕರೆದೊಯ್ಯುವ‌ ಮೊದಲು ತಿಳಸಿದರೆ ಬದುಕನ್ನ ನೋಡುವ ವಿಧಾನ ಬದಲಾಗುತ್ತಿತ್ತು. ಉಳಿದವರಿಗಾದರೂ ಅವಕಾಶ ಕೊಡು ಎಚ್ಚರಿಕೆ ಕೊಡು. ಆಗಬಹುದೇ? ವೇಗ ಹೆಚ್ಚಿಸಿದ ಮಗನದ್ದೋ, ಕಾಯುತ್ತಿರುವ ತಾಯಿಯದ್ದೋ, ಜೊತೆಗಿದ್ದ ಗೆಳೆಯರದ್ದೋ, ಹಾಳಾದ ರಸ್ತೆಯದ್ದೋ, ತಿರುವಿದ್ದೋ, ತಪ್ಪು ಯಾರದ್ದು ತಿಳಿಸಿ ಬಿಡು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ