'ಅಲ್ಲೊಂದು ಮಂಗ ಕುಣಿಯುತ್ತಿದೆ, ಅದರ ಕುಣಿದಾಟವೇನೂ ಅದ್ಭುತವಾಗಿಲ್ಲ ಅಥವಾ ವಿಶೇಷವಾಗಿಯೂ ಇಲ್ಲ. ನೋಡಿದರೆ ಅದೊಂದು ಮನೋರಂಜನೆ ಮಾತ್ರ ಹಾಗಾಗಿ ಅದರ ಕುಣಿತವನ್ನು ನೋಡುವುದಕ್ಕೆ ಜನ ಬಂದು ಸೇರ್ತಾನೆ ಇದ್ದಾರೆ. ಹೆಚ್ಚೆಚ್ಚು ಜನ ಬಂದ ಹಾಗೆ ಮಂಗ ತಾನೇ ಅದ್ಭುತವಾಗಿ ನರ್ತಿಸುತ್ತಿದ್ದೇನೆ ಅಂತಂದುಕೊಂಡು ಇನ್ನೂ ಹೆಚ್ಚು ಕುಣಿಯುವುದಕ್ಕೆ ಶುರು ಮಾಡಿದೆ. ದೂರದಲ್ಲಿ ಇದನ್ನ ನೋಡುತ್ತಿದ್ದ ಒಂದಷ್ಟು ಮಂಗಗಳು ತಾವು ಕೂಡ ಅದೇ ಕೆಲಸವನ್ನು ಮುಂದುವರಿಸಿದವು. ಅಲ್ಲಲ್ಲಿ ಮಂಗಗಳು ಕುಣಿತ ಪ್ರಾರಂಭ ಆಯಿತು. ಈ ಮಂಗಗಳ ಕುಣಿವಿಕೆಯ ರಾಶಿಯನ್ನ ನೋಡುವುದಕ್ಕೆ ಜನ ಬರ್ತಾ ಇದ್ರು. ಬಂದವರು ಹಾಗೆ ತಮ್ಮ ಕೆಲಸಕ್ಕಾಗುವಾಗ ಮುಂದೆ ಹೋಗಿ ಬಿಟ್ಟರು. ಈಗಲೂ ಮಂಗ ತಾನೊಬ್ಬ ಅದ್ಭುತ ನರ್ತಕ ಅಂತ ಅಂದುಕೊಂಡು ಬಿಟ್ಟಿದೆ. ಉಳಿದ ಮಂಗಗಳು ಸಹ. ಉತ್ತಮವಾಗಿ ಕುಣಿಯುತ್ತಿದ್ದ ನವಿಲನ್ನ ಯಾರು ಕೂಡ ಗಮನಿಸಲೂ ಇಲ್ಲ, ಗೌರವಿಸಲೂ ಇಲ್ಲ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ