ಆ ಊರಿನಲ್ಲಿ ಹಾದು ಹೋಗೋದು ಅದೊಂದು ಮೇಲು ಸೇತುವೆ. ಮೇಲೆ ಸೇತುವೆ ಮೇಲೆ ನಿಂತ್ರೆ ಊರಿನ ಗದ್ದೆ ತೋಟ ಮೈದಾನ ಎಲ್ಲವೂ ಕಾಣಿಸ್ತದೆ. ಸಂಜೆ ಹೊತ್ತು ಮೇಲೆ ಸೇತುವೆಯ ಒಂದು ಬದಿಯಲ್ಲಿ ನಿಂತು ನೋಡುವರಿದ್ದಾರೆ. ಹಾಗೆ ನಿಂತು ನೋಡುವವರು ಪರಿಸರ ವೀಕ್ಷಣೆ ಮಾಡುವವರಲ್ಲ ಮೈದಾನದಲ್ಲಿ ಮಕ್ಕಳ ಆಡುತ್ತಿರುವ ಆಟವನ್ನು ಗಮನಿಸುತ್ತಿರುವವರು. ಸಣ್ಣವರು ದೊಡ್ಡವರಿಂದ ಸಂಭ್ರಮದ ಚಟುವಟಿಕೆಯಲ್ಲಿ ತೊಡಗಿರುವವರನ್ನು ಗಮನಿಸುವವರು. ತಾವು ಸಣ್ಣವರಿದ್ದಾಗ ಅದೇ ಆಟಗಳನ್ನು ಅದೇ ಸಂಭ್ರಮವನ್ನು ಅನುಭವಿಸಿದ್ದವರು. ತಮ್ಮದೇ ವಯಸ್ಸಿನವರು ಆ ಮೈದಾನದಲ್ಲಿ ಆಡುವುದನ್ನು ಕಣ್ತುಂಬಿಸಿಕೊಳ್ಳುವವರು. ಈ ಬದುಕಿನ ದಾವಂತದಲ್ಲಿ ದುಡಿಮೆಯ ಹೋರಾಟದಲ್ಲಿ ಎಲ್ಲ ಕ್ಷಣಗಳನ್ನು ಕಳೆದುಕೊಂಡಿರುವುದಕ್ಕೆ ನೋವನ್ನು ಬಯಸುತ್ತಿರುವವರು. ಅಲ್ಲಿಂದ ಹೊರಟು ಮನೆಯನ್ನ ತಲುಪಿ ಮತ್ತೆ ದೈನಂದಿನ ಬದುಕು, ಪ್ರತಿದಿನ ಸಂಜೆ ಅಲ್ಲಿ ನಿಂತು ಒಂದು ಕ್ಷಣ ಮೈದಾನದ ಕಡೆಗೆ ಕಣ್ಣು ಹಾಯಿಸಿ ಆಟಗಳನ್ನು ನೋಡಿ ಮತ್ತೆ ತಮ್ಮ ಮನೆಯ ಕಡೆಗೆ ಹೊರಟುಬಿಡುತ್ತಾರೆ. ಬದುಕಿನ ಜವಾಬ್ದಾರಿಯನ್ನು ಹೆಗಲಿಗೆ ಹೊತ್ತುಕೊಂಡ ಕಾರಣ ಮೈದಾನದ ಧೂಳು ಕಾಳಿಕೆ ತೆಗೆದು ವರ್ಷಗಳೇ ದಾಟಿವೆ. ನಿಂತು ನೋಡುವುದಷ್ಟೇ ಪ್ರಸ್ತುತ ಬಾಳಿನ ಸನ್ನಿವೇಶವಾಗಿದೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ