ಎಲ್ಲರೂ ಕಾದು ಕುಳಿತಿದ್ದೇವೆ. ತಿಂಗಳು ವಾರ ವರ್ಷಗಳು ದಾಟಿದ್ರು ನಮ್ಮ ಹತ್ತಿರ ಯಾರು ಬರುತ್ತಿಲ್ಲ. ನಾವ್ಯಾರು ನಾವಾಗಿಯೇ ನಡೆದುಕೊಂಡು ಬಂದವರಲ್ಲ. ಆ ಮನೆಯಲ್ಲಿರುವವರೇ ಅಂಗಡಿಗೆ ಹೋಗಿ ಖರೀದಿಸಿ ತಂದಿಟ್ಟ ವಿವಿಧ ಬಣ್ಣ ವಿವಿಧ ಹೆಸರು ವಿವಿಧ ವಿಷಯಗಳನ್ನ ತಮ್ಮೊಳಗೆ ತುಂಬಿಕೊಂಡು ವಿಚಾರಗಳನ್ನು ಹರಡುವುದಕ್ಕೆ ಕಾದು ಕುಳಿತವರು. ನಮಗೂ ದಿನ ಬರುತ್ತೆ ಅಂದುಕೊಂಡು ಗೋಡೆಯ ಬದಿಯ ಮರದ ಕಪಾಟಿನೊಳಗಡೆ ಹಾಗೆಯೇ ಅಡ್ಡ ಮಲಗಿಬಿಟ್ಟಿದ್ದೇವೆ. ಬೇರೆ ಬೇರೆ ಹೆಸರಿನ ಪುಸ್ತಕಗಳು ನಾವು. ನಮ್ಮ ಬದುಕಿಗೆ ಅರ್ಥ ಸಿಗುವುದು ಖರೀದಿಸಿದಾಗಲೆಲ್ಲಾ ಖರೀದಿಸಿದನ್ನು ಓದಿ ಅರ್ಥೈಸಿಕೊಂಡು ವಿಚಾರವನ್ನು ಅಳವಡಿಸಿಕೊಂಡಾಗ ಮಾತ್ರ. ಹಾಗಾಗಿ ಕೇಳಿಕೊಳ್ಳುವುದು ಇಷ್ಟೇ, ಖರೀದಿಸಿ ಓದು ಓದುವುದಿದ್ದರೆ ಮಾತ್ರ ಹೊರತು ಖರೀದಿಸಿ ಎಲ್ಲೋ ಇಡುವಂತವರಾಗಬೇಡಿ. ಕೈ ಮುಗಿದು ಕೇಳಿಕೊಳ್ಳುತ್ತಿದ್ದೇವೆ ಇಲ್ಲಿ ಕಪಾಟಿನೊಳಗೆ ಉಸಿರು ಕಟ್ಟುತ್ತಿದೆ ಒಂದಿನವಾದರೂ ಬಿಡಿಸಿ ಅಕ್ಷರಗಳ ಜೀವಕ್ಕೊಂದಿಷ್ಟು ಮೌಲ್ಯ ಕೊಡಿ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!