ಇಲ್ಲಿ ಕಾಲ ಬದಲಾಗಿದೆ ಮಗೂ ನೀನೇನಾದ್ರೂ ತಪ್ಪು ಮಾಡಿದ್ರೆ ಆ ತಪ್ಪನ್ನ ಹೌದು ಅಂತ ವಾದಿಸುವುದಕ್ಕೆ ಸಾವಿರ ಜನ ಮುಂದೆ ನಿಲ್ತಾರೆ. ನಿನಗೆ ಶಿಕ್ಷೆಯಾಗುತ್ತೆ ಸಮಾಜದಲ್ಲಿ ನಿನ್ನ ಗೌರವ ಕಡಿಮೆ ಆಗುತ್ತೆ ತಲೆ ಎತ್ತಿ ಬದುಕುವುದಕ್ಕೆ ಸಾಧ್ಯ ಆಗೋದಿಲ್ಲ. ಇಂತಹ ಕಾಲದಲ್ಲಿ ಇದ್ದವರು ಈಗ ತಪ್ಪು ಮಾಡಿದ ದೊಡ್ಡವರೆಲ್ಲರೂ ಅದು ನಾನಲ್ಲ ಯಾರೋ ನನ್ನನ್ನ ಈ ರೀತಿ ಮೋಸದ ಜಾಲದೊಳಕ್ಕೆ ಸಿಲುಕಿಸಿದ್ದಾರೆ ಅಂತ ಅಂದ ತಕ್ಷಣ ಜನ ಅವರನ್ನ ಕ್ಷಮಿಸುವವರಿದ್ದಾರೆ. ದೊಡ್ಡ ಹುದ್ದೆಯಲ್ಲಿದ್ದವರನ್ನ ಈ ಹುದ್ದೆಯಲ್ಲಿ ಮುಂದುವರೆದಿದ್ದು ಸಾಕು ಅಂತ ಪದಚ್ಯುತಿಗೊಳಿಸಿದರೂ ಮತ್ತೆ ಅದೇ ಹುದ್ದೆಗೆ ಅವರನ್ನೇ ಹುಡುಕಿ ಬರುವಂತೆಯೂ ಮಾಡುವುದಕ್ಕೆ ಸಾಧ್ಯ ಆಗ್ತದೆ. ತಪ್ಪು ಮಾಡಿದವರು ಹೆಚ್ಚು ಗೌರವವನ್ನು ಪಡಿತಾ ಹೋಗ್ತಾರೆ ನೀನು ಕಣ್ಣು ಮುಚ್ಚಿಕೊಂಡು ನಿನ್ನ ಬದುಕನ್ನ ಬದುಕಿ ಬಿಡು ಸಾಕು ಉಳಿದವರ ಸರಿ ತಪ್ಪುಗಳನ್ನ ಅಳೆದು ತೂಗಿ ವಿಚಾರಿಸಿ ವಿವರಿಸಿ ಏನಂದರೂ ಕೂಡ ಪ್ರಯೋಜನವಿಲ್ಲ ತಪ್ಪಿತಸ್ಥರು ತಲೆ ಎತ್ತಿ ಓಡಾಡುವ ಕಾಲದಲ್ಲಿ ಇದ್ದೇವೆ ಅಜ್ಜಿ ಹೇಳಿದ ಮಾತು ಇಂದಿನ ದಿನಪತ್ರಿಕೆ ಓದುವಾಗ ಹೌದೆನ್ನಿಸಿತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!