ಅಶೋಕನ ಬಳಿ ಆಗಾಗ ಅವನ ಮನಸ್ಸು ಮಾತನಾಡುತ್ತೆ. ಆ ಮನಸ್ಸು ಆಗಾಗ ರೂಪ ಧರಿಸಿಕೊಂಡು ಇವನ ಮುಂದೆ ಬಂದು ನಿಂತು ಇವನನ್ನ ಪ್ರಶ್ನೆ ಮಾಡುತ್ತೆ. ಅದರ ಎಲ್ಲಾ ಪ್ರಶ್ನೆಗಳಿಗೂ ಇವನಲ್ಲಿ ಉತ್ತರವಿರುತ್ತೆ ಇವನು ಮಾಡಿದ ತಪ್ಪುಗಳ ಪಟ್ಟಿಯನ್ನು ಮನಸ್ಸಿನ ಮುಂದೆ ಇಡ್ತಾನೆ. ತಾನು ಏನಾಗಬೇಕು ಕನಸೇನು ಸದ್ಯಸಾಗುತ್ತಿರುವ ದಾರಿ ಯಾವುದು? ಎಲ್ಲವನ್ನೂ ಅದರ ಮುಂದೆ ಇಟ್ಟು ಈ ಕ್ಷಣದಿಂದ ಬದಲಾಗ್ತೇನೆ ಅಂತ ಮಾತನ್ನ ಕೊಡುತ್ತಾನೆ ಮಾತುಕೊಟ್ಟು ಗಂಟೆಯಲ್ಲ ಕ್ಷಣದಲ್ಲಿ ಮತ್ತೆ ಮೊದಲಿನಂತೆ ಆಗಿ ಬಿಡ್ತಾನೆ. ಈಗ ನೋಡುತ್ತಿರುವ ಅವನು ನಿಜವಾದ ಅವನ್ನಲ್ಲ...ಈ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದಾನೆ...ನಿಮ್ಮಲ್ಲಿದ್ದರೆ ತಿಳಿಸಿ ಪುಣ್ಯ ಕಟ್ಟಿಕೊಳ್ಳಿ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ