ತುಂಬಾ ಕಷ್ಟ ಪಟ್ಟು ಮನೆ ಕಟ್ಟಿದ್ದಾನೆ. ತುಂಬಾ ವರ್ಷವರೆಗೆ ಬಾಳ್ವಿಕೆ ಬರಬೇಕೆಂದು ಆಸೆ. ಮನೆಯನ್ನ ನಿಭಾಯಿಸುವುದ್ದಕ್ಕೆ ಮನೆಯೊಳಗಿನ ನಂಬಿಕಸ್ಥರಿಗೆ ನೀಡಿದ್ದಾನೆ. ಅವರನ್ನ ತುಂಬಾ ನಂಬಿದ್ದಾನೆ. ಮನೆ ನಡೆಸುವವರು ತಮ್ಮೊಳಗೆ ಪಂಗಡ ಕಟ್ಟಿಕೊಂಡು ಒಳಗೊಳಗೆ ವಿಭಾಗವಾಗಿದ್ದಾರೆ, ಮನೆಯೊಳಗೆ ಬದುಕುವವರಿಗೆ ಉಸಿರು ಕಟ್ಟುವಂತೆ ಮಾಡಿ ಮನೆ ತೊರೆಯುವಂತೆ ಮಾಡಿದ್ದಾರೆ. ನಂಬಿಕಸ್ಥರು ಬೆನ್ನ ಹಿಂದಿನಮಾತು ಮೋಸದಾಟಗಳು ಯಜಮಾನನಿಗೆ ತಿಳಿಯುತ್ತಿಲ್ಲ. ಆತ ಮನೆ ತೊರೆಯುತ್ತಿರುವುದ್ದಕ್ಕೆ ಹೊರಗಡೆ ಕಾರಣ ಹುಡುಕುತ್ತಿದ್ದಾನೆ. ಒಳಗಿರುವವರ ಮನಸಿನ ದುರ್ವಾಸನೆಯಿಂದ ತುಂಬಾ ಜನ ದೂರ ಸರಿಯುವ ಯೋಚನೆಯಲ್ಲಿದ್ದಾರೆ. ಯಜಮಾನನಿಗೆ ತಿಳಿಯುವುದು ಹೇಗೆ ತಿಳಿಸುವುದು ಹೇಗೆ ಎಲ್ಲವನ್ನೂ ಎಲ್ಲರನ್ನು ನಂಬಿರುವಾಗ...
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!