ದಾರಿತಪ್ಪಿ ಹಾಗೆ ಹೊರಟಿದ್ದ, ಆತನಿಗೆ ಎಲ್ಲಿ ಹೋಗಬೇಕು ಏನು ಮಾಡಬೇಕು ಅನ್ನೋದು ಯಾವುದರ ಬಗ್ಗೆಯೂ ಗೊತ್ತಿಲ್ಲ .ಆಗ ದಾರಿಯಲ್ಲಿ ಹೋಗುವಾಗ ಮಾತೊಂದು ಕಿವಿಗೆ ಬಿತ್ತು. "ಅದೇನು ನಾಟಕ ಅಂತ ಮಾಡ್ತಿಯ ಮಾರಾಯ, ಸರಿಯಾಗಿ ಬದುಕುವುದಕ್ಕಾಗುವುದಿಲ್ಲ' ಆ ಮಾತು ಆತನ ಮನಸ್ಸಿಗೆ ತುಂಬಾ ಆಳವಾದ ಗಾಯವನ್ನೇ ಮಾಡಿತ್ತು.
ತಿರುಗಿ ನಿಂತು ವ್ಯಕ್ತಿಯ ಮುಂದೆ ಬಂದು ನಿಂತು ಕೇಳಿದ ನಾಟಕ ಮಾಡೋದು ಅಂದ್ರೆ ಅಷ್ಟು ಸುಲಭ ಅಂತ ಅಂದುಕೊಂಡಿದ್ದೀರಾ? ಅಭಿನಯ ಕಲೀಬೇಕು ವೇದಿಕೆಗಳನ್ನ ಸೃಷ್ಟಿಸಬೇಕು ಹೊಸ ಹೊಸ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಬೇಕು ಪ್ರೇಕ್ಷಕರು ಚಪ್ಪಾಳೆ ಹೊಡೆದು ನಮ್ಮನ್ನ ಅಭಿನಂದಿಸಬೇಕು ನಾವು ಆ ಪಾತ್ರಕ್ಕೆ ಸೂಕ್ತ ಅಂತ ಅಂದುಕೊಳ್ಳಬೇಕು ಹೊಸ ಹೊಸ ಪಾತ್ರವಾಗಿ ಒಗ್ಗಬೇಕು, ಮಾತಾಡಬೇಕು, ಬೆವರು ಹರಿಸಬೇಕು. ಇದೆಲ್ಲವೂ ಕೂಡ ಅಷ್ಟು ಸುಲಭದಲ್ಲಿ ದಕ್ಕು ಅಂತದ್ದಲ್ಲ ಹಾಗಾಗಿ ಹಾಗಾಗಿ ನಾಟಕ ಅನ್ನೋದನ್ನ ಹಗುರವಾಗಿ ಬಳಸಬೇಡ ಅದೊಂದು ಬದುಕುವ ಕಲೆ. ಆ ಬದುಕುವ ಕಲೆ ಆತನಿಗೆ ಅನ್ನ ಕೊಡುವ ಕೆಲಸವಾಗದಿದ್ದರೂ ಕೂಡ ಬದುಕು ಕಲಿಸಿದ ಕಾರಣ ಆತ ಅದರ ಬಗ್ಗೆ ಇನ್ನೂ ಕೂಡ ಗೌರವವನ್ನು ಇಟ್ಟುಕೊಂಡಿದ್ದ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!