ಆ ಕಂಬಿಯ ಒಳಗೆ ಸುತ್ತ ಕಟ್ಟಿದ ಗೋಡೆಯನ್ನ ಮತ್ತೆ ಮತ್ತೆ ನೋಡುತ್ತಲೇ ಇದ್ದಾನೆ. ಕಂಬಿಗಳನ್ನ ಎಣಿಸಿ ಎಣಿಸಿ ಮನಸ್ಸು ಭಾರವಾಗಿಬಿಟ್ಟಿದೆ. ಪ್ರತಿದಿನವೂ ಆಗಿ ಹೋದ ಘಟನೆ ಕಣ್ಣೀರುಳಿಯುವಂತೆ ಮಾಡುತ್ತಿದೆ. ಆ ದಿನ ಒಂದು ಚೂರು ಹೆಚ್ಚೇ ಕುಡಿದಿದ್ದ. ಸಿಟ್ಟು ಏನನ್ನು ಮಾಡಿಸುತ್ತೆ ಅನ್ನೋದಕ್ಕೆ ಅವನೇ ಉದಾಹರಣೆಯಾಗಿದ್ದಾನೆ. ಮನೆಯಲ್ಲಿ ಅಪ್ಪ-ಅಮ್ಮನನ್ನ ನೋಡಿಕೊಳ್ಳುವುದಕ್ಕೆ ಮಾತುಕತೆ ಅಣ್ಣ-ತಮ್ಮಂದಿರ ನಡುವೆ ಶುರುವಾಗಿತ್ತು. ಆದರೆ ಕುಡಿತದ ಮಿತಿ ಹೆಚ್ಚಿದ ಕಾರಣ ಮಾತಿನಲ್ಲಿ ನಾಲಗೆ ತೊದಲುವುದ್ದಕ್ಕೆ ಪ್ರಾರಂಭವಾಯಿತು. ಯೋಚನೆಗೂ ನಾಲಗೆಗೂ ಕಡಿತ ತಪ್ಪಿ ಹೋಯಿತು ನಾಲಗೆ ಹೊಸ ಹೊಸ ಮಾತು ವಿಚಾರಗಳನ್ನ ಮಾತನಾಡುವುದಕ್ಕೆ ಶುರು ಮಾಡಿದ್ದು. ಆಗ ಕೈ ಸುಮ್ಮನಿರಲಿಲ್ಲ ಕೈಗೆ ತನಗೆ ಸಿಕ್ಕ ವಸ್ತುವಿನಿಂದ ಎದುರಾಳಿಯ ಮೇಲೆ ಬಲವಾಗಿ ಬೀಸುವುದಕ್ಕೆ ಆರಂಭವಾಯಿತು. ಆ ಕ್ಷಣವನ್ನು ನೋಡಿ ದೇವರಿಗೆ ಬೇಜಾರಲ್ಲಿ ಇರಬೇಕು ಹೊರಟುಬಂದು ಬಿಡಿ ಅಂತ ಅಂದುಬಿಟ್ಟ. ಅಣ್ಣ ಹೊಡೆದ ಹೊಡೆತ ತಮ್ಮನ ಕುತ್ತಿಗೆಗೆ ಬಡಿದು ಕ್ಷಣದಲ್ಲಿ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಆತ ಜೈಲಿನಲ್ಲಿ ಬಂದು ಬಿದ್ದಿದ್ದ ನನ್ನ ಕೈಯಿಂದಾದದ್ದಲ್ಲ ನನಗೆ ತಮ್ಮನೇ ಪ್ರಾಣ ಹೀಗೆ ಏನೇ ಹೇಳಿದ್ರು ಕೇಳುವವರು ತಯಾರಿರ್ಲಿಲ್ಲ. ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೂ ಅನಾಥರಾಗಿ ಬಿಟ್ರು. ಅವರನ್ನು ಪಾಲು ಮಾಡುವವರು ಒಬ್ಬ ಸ್ಮಶಾನದೊಳಗೆ, ಇನ್ನೊಬ್ಬ ಸೆರೆಮನೆಯ ಒಳಗೆ ಮಲಗಿಬಿಟ್ಟಿದ್ದರು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!