ಕಲ್ಲು ಮಣ್ಣು ಸಿಮೆಂಟುಗಳನ್ನ ಸೇರಿಸಿ ಮನೆಯನ್ನು ಕಟ್ಟಿಯಾಗಿತ್ತು. ಮನೆಯೇನೊ ಗಟ್ಟಿಯಾಗಿ ನಿಂತು ಒಳಗೆ ಬದುಕುವವರಿಗೆ ನೆಮ್ಮದಿ ಆಶ್ರಯವನ್ನು ನೀಡುತ್ತಾ ಇತ್ತು. ಆದರೆ ಮನೆಯವರಿಗೆ ನೆಮ್ಮದಿ ಅನ್ನೋದು ಆಗಾಗ ಹಾದು ಹೋಗುವ ಮರೀಚಿಕೆಯಾಗಿತ್ತು. ಬದುಕು ಸಾಗ್ತಾಯಿತ್ತು. ನಗು ಸಂಭ್ರಮ ಖುಷಿ ಅನ್ನೋದು ಮುಂಗಾರಿನಲ್ಲಿ ಆಗಾಗ ಮಿಂಚುವ ಗುಡುಗು ಸಿಡಿಲಿನಂತೆ ಆಗೊಮ್ಮೆ ಈಗೊಮ್ಮೆ ಕೇಳಿ ಮರೆಯಾಗುತ್ತಿತ್ತು. ಆಗ ಆ ಮನೆಗೆ ಪ್ರವೇಶವಾದವನೆ ಇವನು. ಪಿಳಿ ಪಿಳಿಕಣ್ಣುಗಳಿಂದ ಮನೆಯವರ ಬದುಕುವುದನ್ನು ಬದಲಿಸಿದ. ಆ ಮನೆಯಲ್ಲಿ ಸಂತೋಷ ಓಡಾಡುವಂತೆ ಮಾಡಿದ ಸಂಭ್ರಮ ನೆಲೆಸುವಂತೆ ಹಾರೈಸಿದ. ಮನೆ ಮಗನಾಗಿ ಇಡೀ ಕುಟುಂಬದ ನಗುವಿಗೆ ಕಾರಣವಾದ ತನ್ನ ಓಡಾಟ ಮುಗ್ಧ ಮಾತು ತೊದಲು ನೋಡಿ ಪ್ರೀತಿಯ ಕಣ್ಣುಗಳಿಂದ ಮನೆಯ ಕೊಂಡಿಯನ್ನು ಭದ್ರ ಪಡಿಸಿದ. ಬದುಕುವ ಉತ್ಸಾಹ ಹೆಚ್ಚಿಸಿದ ಪ್ರತಿ ಕ್ಷಣವನ್ನ ಆನಂದಿಸುವಂತೆ ಮಾಡಿದ ಸಣ್ಣ ಪುಟ್ಟ ತಪ್ಪುಗಳಿಂದ ಖುಷಿಯನ್ನ ಕಂಡುಕೊಳ್ಳುವ ಬಗೆಯನ್ನು ತಿಳಿಸಿದ ಪ್ರೀತಿಯ ಮಹತ್ವ ತಿಳಿಸಿದ ಒಟ್ಟಿನಲ್ಲಿ ಮನೆ ಮನಸ್ಸುಗಳು ಬದಲಾಯಿಸುವುದಕ್ಕೆ ಆತ ಆ ಮನೆಯಲ್ಲಿ ಜನನವಾಗಬೇಕಿತ್ತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!