ಅವಳು ಸಣ್ಣಪುಟ್ಟ ತಪ್ಪುಗಳಿಗೆ ಗದರಿಸುತ್ತಾಳೆ, ಪ್ರತೀ ಹೆಜ್ಜೆಯಲ್ಲಿ ತಪ್ಪು ಕಂಡು ಹಿಡಿಯುತ್ತಾಳೆ. ಪ್ರತಿ ಕ್ಷಣವೂ ಹಾಗೆ ಮಾಡೋಡ ಹೀಗೆ ಮಾಡಬೇಡ ಅನ್ನುವ ಪಟ್ಟಿಗಳನ್ನ ಕಣ್ಣೆದುರುಗಡೆ ಇಡುತ್ತಾಳೆ. ಅವುಗಳನ್ನು ಗಮನಿಸಿದಾಗ ಜೀವನಪೂರ್ತಿ ಹೀಗೆ ತಪ್ಪುಗಳ ಜೊತೆ ಬದುಕಬೇಕಾ ಅಂತ ಪ್ರಶ್ನೆ ಮಾಡೋದು ಸಹಜ. ಆದ್ರೆ ಅವಳ ಮನಸ್ಸು ಆಲೋಚನೆಯಲ್ಲಿ ಕೇಡಿಲ್ಲ. ಬದುಕು ನಾಳೆ ಏನು ಅನ್ನೋದು ಗೊತ್ತಿಲ್ಲ ಬದುಕುವ ಪ್ರತಿಕ್ಷಣವೂ ಸರಿ ದಾರಿಯಲ್ಲಿ ತಪ್ಪಿಲ್ಲದೆ ಬದುಕಬೇಕು ಅನ್ನೋದವಳ ಆಸೆ.
ಗೌರವ ಕೊಡಬೇಕು ಪ್ರತಿಯೊಬ್ಬರೂ ನಿನ್ನನ್ನು ಅನುಸರಿಸಬೇಕು ಅನ್ನುವ ಯೋಚನೆಯಿಂದ ಆಕೆ ತಪ್ಪುಗಳನ್ನು ತಿದ್ದಿಸುತ್ತಾಳೆ. ಮನಸಲ್ಲಿ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡು ಅದ್ಭುತ ವ್ಯಕ್ತಿಯಾಗಬೇಕು ಅಂತ ಬಯಸುತ್ತಾಳೆ. ಎಲ್ಲ ಅವಕಾಶಗಳನ್ನ ನಿನಗೋಸ್ಕರ ಸೃಷ್ಟಿಸಿದಾಳೆ ಹಾಗಾಗಿ ಅವಳ ಪ್ರೀತಿಯನ್ನು ಸಂಪಾದಿಸುವ ಹೇಳಿದ್ದನ್ನ ಪಾಲಿಸುವ ಅವಳ ಕನಸಂತೆ ನೀನು, ನಿನ್ನ ಕನಸಂತೆ ಅವಳು ಖಂಡಿತವಾಗಿಯೂ ... ಹಾಗೆ ಬೇರೆ ಬೇರೆ ರೂಪದಲ್ಲಿ ಎದುರು ನಿಲ್ಲುತ್ತಾಳೆ. ತಾಯಿಯಾಗಿ ತಂಗಿಯಾಗಿ ಹೆಂಡತಿಯಾಗಿಯೂ ಸಹ ಆಕೆಯನ್ನು ಅರ್ಥ ಮಾಡಿಕೊಂಡು ಕೇಳಿಸಿಕೊಳ್ಳುವ ತಾಳ್ಮೆ ಬೇಕಷ್ಟೇ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!