ಅಜ್ಜ ದೇವರನ್ನೇಕೆ ಎತ್ತರದಲ್ಲಿಟ್ಟಿದ್ದಾರೆ ಎತ್ತರದ ರಥದ ಮೇಲೆ ಕೂರಿಸಿ ಎಲ್ಲರೂ ಆ ರಥವನ್ನು ಎಳೆಯುತ್ತಾ ಸಂಭ್ರಮಿಸುತ್ತಿದ್ದಾರೆ ದೇವರು ಅಷ್ಟು ಎತ್ತರದ ರಥದಲ್ಲಿ ಆಸೀನರಾಗಲು ಕಾರಣವೇನು?

ನೋಡು ಮಗೂ, ದೈವಿಕ ಕಾರಣವೇನು ನನಗೆ ಗೊತ್ತಿಲ್ಲ ಆದರೆ ನನ್ನ ಅನುಭವದ ಪ್ರಕಾರ ನಮ್ಮೊಳಗೊಂದು ನಾನು ಅನ್ನುವ ಅಹಂಕಾರ ತುಂಬಿರುತ್ತೆ. ಆ ನಾನು ಅನ್ನುವ ಅಹಂಕಾರ ಅಳಿದು ಹೋಗಬೇಕು ಅಂತಾದ್ರೆ ನಮಗೆ ಒಂದಷ್ಟು ಸನ್ನಿವೇಶಗಳು ಎದುರಾಗಬೇಕು. ನಮಗಿಂತ ಎತ್ತರದಲ್ಲೊಬ್ಬನಿದ್ದಾನೆ ಆತ ನಮ್ಮನ್ನ ನಡೆಸುವವನು ನಾವು ಬರಿಯ ಸೂತ್ರದ ಗೊಂಬೆಗಳೆಲ್ಲವೇ? ಆ ಅರಿವು ನಮಗೆ ಬರಬೇಕು. ಹಾಗಾಗಿ ಆ ಎತ್ತರದ ಮೇಲೆ ಕುಳಿತ ಭಗವಂತನ ರಥದ ಮುಂದೆ ನಾವೆಷ್ಟು ಸಣ್ಣವರು ಅನ್ನೋದು ಅರಿವಾಗುತ್ತದೆ. ನಮ್ಮೊಳಗಿನ ನಾನು ಅನ್ನುವ ಅಹಂಕಾರ ತೊರೆದಾಗ ಭಗವಂತ ನಮ್ಮೊಳಗೆ ಮನೆ ಮಾಡ್ತಾನೆ. ಇದನ್ನ ಅರ್ಥ ಮಾಡಿಕೊಂಡರೆ ಸಾಕು ಅಜ್ಜನ ಮಾತು ಮೊಮ್ಮಗನಿಗೆ ಅರ್ಥವಾಗಿತ್ತು. 

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ