ಎತ್ತರದ ಆಗಸವನ್ನು ನೋಡುವಾಗ ರೆಕ್ಕೆ ಬಿಚ್ಚಿ ತುಂಬಾ ಚೆನ್ನಾಗಿ ಹಾರಬಹುದೆಂಬ ಯೋಚನೆ, ಇಡೀ ಜಗತ್ತಿನ ತುಂಬ ಹಾರಿ ಎಲ್ಲವನ್ನು ಎತ್ತರದಿಂದ ನೋಡಿ ಅದ್ಭುತವನ್ನು ಸಾಧಿಸಬಹುದು. ಆದರೆ ಇಷ್ಟು ಎತ್ತರದಲ್ಲಿ ಹಾರುವುದಕ್ಕೆ ಮನಸ್ಸು ಕೇಳೋದಿಲ್ಲ. ಅಥವಾ ಪ್ರಯತ್ನಗಳು ಜಾರಿಯಲ್ಲಿಲ್ಲ. ಹೇಗೋ ನಡೆದುಕೊಂಡು ಬಂದು ಹಂಚಿಲ್ಲದ ಮನೆ ಒಂದರ ಮೇಲೆ ಕುಳಿತು ಬದುಕಿನ ಕಷ್ಟಗಳನ್ನ ನಶ್ವರತೆಯನ್ನ ಸಾಧಿಸಲು ಆಸೆ ಇದ್ದರೂ ಸಿಗದಿರುವ ಅವಕಾಶಗಳ ಕುರಿತು ಮಾತನಾಡಲಾರಂಭಿಸಿತು. ಹಂಚು ನಾನೀಗ ಒಳಗಿರುವವರಿಗೆ ಆಶ್ರಯ ನೀಡದಿದ್ದರೂ ಹಂಚೊಂದನ್ನ ನನ್ನ ಮೇಲೆ ಹೊದ್ದುಕೊಂಡು ಆಶ್ರಯ ನೀಡಲು ತಯಾರಾಗಿದ್ದೇನೆ. ಎತ್ತರದಲ್ಲಿ ಕಾಣುವ ಆಗಸ ಖಾಲಿ ಇದೆ ರೆಕ್ಕೆಗೊಂದಿಷ್ಟು ಶಕ್ತಿ ನೀಡಿ ಮೇಲೆ ಹಾರಬೇಕಷ್ಟೇ ಪ್ರಯತ್ನಿಸಿದರೆ ಆಗಸವೇ ನಿಮಗೆ ಮನೆಯಾಗುತ್ತದೆ ಹಕ್ಕಿ ರೆಕ್ಕೆ ಬಿಚ್ಚಿ ಒಂದಷ್ಟು ಏಳುಬೀಳಿನ ನಡುವೆ ಮೇಲಕ್ಕೆ ಏರಿತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ